ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲ: ಗ್ರಾಮೀಣ ಖಾಸಗಿ ಶಾಲೆಗಳಲ್ಲಿ ಆನ್ ಲೈನ್ ತರಗತಿ ಸ್ಥಗಿತ!

ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಕಾರಣ ಗ್ರಾಮೀಣ ಭಾಗದ ಖಾಸಗಿ ಶಾಲೆಗಳು ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸುತ್ತಿವೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ಬೆಂಗಳೂರು: ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಕಾರಣ ಗ್ರಾಮೀಣ ಭಾಗದ ಖಾಸಗಿ ಶಾಲೆಗಳು ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸುತ್ತಿವೆ. 5 ಲಕ್ಷ ಶಿಕ್ಷಕರಿಗೆ ವೇತನ ಪಾವತಿಸಲು 1 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ನ್ನು ಅನುದಾನ ರಹಿತ ಖಾಸಗಿ ಶಾಲೆಗಳ ಅಸೋಸಿಯೇಷನ್ ಅಡಿಯಲ್ಲಿ ಬರುವ ಶಾಲೆಗಳು ಕೋರಿವೆ.

ಶುಲ್ಕ ಪಾವತಿ ವಿಚಾರದಲ್ಲಿ ಸರ್ಕಾರದ ನಿರ್ಧಾರದಿಂದ ತುಂಬಾ ನಷ್ಟವಾಗಿದೆ. ಕನಿಷ್ಠ ಶುಲ್ಕ ಸ್ವರೂಪವನ್ನು ನಿಗದಿಪಡಿಸುವಂತೆ ಬೇಡಿಕೆ ಸಲ್ಲಿಸಿರುವುದಾಗಿ ಶಾಲಾ ಆಡಳಿತ ಮಂಡಳಿಗಳು ಹೇಳಿವೆ. ಸರ್ಕಾರ ಕೇವಲ ಒಂದು ವರ್ಗದ ಶಾಲೆಗಳ ಕಡೆಗೆ ಮಾತ್ರ ಗಮನ ಹರಿಸುತ್ತಿದೆ ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್ ತಾಳಿಕೋಟೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಶಾಲೆಗಳನ್ನು ಪುನರ್ ಆರಂಭಿಸುವ  ಬಗ್ಗೆ ತೀರ್ಮಾನಿಸಲು ಸಭೆ ಸೇರಿದ ಮಂತ್ರಿಮಂಡಲದ ನಿಯೋಗವು ಕಾರ್ಪೊರೇಟ್ ಶಾಲೆಗಳು, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಆಡಳಿತಾಧಿಕಾರಿಗಳನ್ನು ಹೊಂದಿದೆ. ತಾವುಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರೊಂದಿಗೆ ಮಾತ್ರ ಸಭೆ ನಡೆಸುವಂತಾಗಿದೆ. ಅನುದಾನ ರಹಿತ ಖಾಸಗಿ ಶಾಲೆಗಳ ಅಸೋಸಿಯೇಷನ್  ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಾಗಿ 12 ಸಾವಿರ ಶಾಲೆಗಳನ್ನು ಪ್ರತಿನಿಧಿಸಲಿದೆ ಎಂದರು.

ಸಾಲಗಳ ಮೇಲಿನ ನಿಷೇಧ, ಇಎಂಐ ಪಾವತಿ ಮುಂದೂಡಿಕೆ, ಸರ್ಕಾರದಿಂದ ಪರಿಹಾರ ಪ್ಯಾಕೇಜ್ ಮುಂತಾದ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ, ಹೊಸ ಕಟ್ಟಡ ಹಾಗೂ ವಾಹನಗಳಿಗೆ ಶಾಲೆಗಳು ವೆಚ್ಚ ಮಾಡುತ್ತಿವೆ ಎಂದು ಹೇಳಿರುವ ಲೋಕೇಶ್ ತಾಳಿಕೋಟೆ, ಪಿಡಬ್ಲ್ಯುಡಿ ಮತ್ತು ಅಗ್ನಿಶಾಮಕ ಇಲಾಖೆಯಿಂದ ಕಡ್ಡಾಯವಾಗಿ ಆಕ್ಷೇಪಣಾ ರಹಿತ ಪ್ರಮಾಣ ಪತ್ರ- ಎನ್ ಒಸಿ ಪಡೆಯುವುದು ಪ್ರಮುಖ ಅಡಚಣೆಯಾಗಿದೆ ಎಂದರು.

ಈ ಮಧ್ಯೆ 3800ಕ್ಕೂ ಖಾಸಗಿ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳ ಮ್ಯಾನೇಜ್ ಮೆಂಟ್ ಅಸೋಯಿಸೇಷನ್ ಆನ್ ಲೈನ್ ತರಗತಿಯನ್ನು ಮುಂದುವರೆಸುವುದಾಗಿ ತಿಳಿಸಿದೆ.  ಶುಲ್ಕವನ್ನು ಪಾವತಿಸದವರನ್ನು ಹೊರಗಿಡಲಾಗುವುದು ಎಂದು ನಾವು ಮೊದಲೇ ಹೇಳಿದ್ದೇವೆ, ಆದಾಗ್ಯೂ, ಈ ಸಮಸ್ಯೆಯನ್ನು ಬಗಹೆರಿಸುವುದಾಗಿ ಶಿಕ್ಷಣ ಇಲಾಖೆ ಭರವಸೆ ನೀಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ತಿಳಿಸಿದ್ದಾರೆ. 

ಖಾಸಗಿ ಶಾಲೆಗಳ ಮ್ಯಾನೇಜ್ ಮೆಂಟ್ ಹಾಗೂ ಪೋಷಕರು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com