ಬೆಂಗಳೂರಿನಲ್ಲಿ ತಾಯಿ-ಮಗು ಸೇರಿ ಮೂವರಿಗೆ ರೂಪಾಂತರಿ ಕೊರೋನಾ ಸೋಂಕು: ಆರೋಗ್ಯ ಸಚಿವ ಡಾ. ಕೆ.ಸುಧಾಕರ್

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೇರೆ ದೇಶಗಳಿಂದ ಬಂದ ಜನರನ್ನು ಪರೀಕ್ಷಿಸಿದಾಗ 6 ಜನರಿಗೆ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಮೂವರಲ್ಲಿ ರೂಪಾಂತರಿ ಸೋಂಕು ಪತ್ತೆಯಾಗಿದೆ.

Published: 29th December 2020 12:21 PM  |   Last Updated: 29th December 2020 01:26 PM   |  A+A-


DrSudhakar1

ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

Posted By : Nagaraja AB
Source : UNI

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೇರೆ ದೇಶಗಳಿಂದ ಬಂದ ಜನರನ್ನು ಪರೀಕ್ಷಿಸಿದಾಗ 6 ಜನರಿಗೆ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಮೂವರಲ್ಲಿ ರೂಪಾಂತರಿ ಸೋಂಕು ಪತ್ತೆಯಾಗಿದೆ. ಕೇಂದ್ರದಿಂದ ಬಂದ ವರದಿ ಪ್ರಕಾರ ಮೂವರಿಗೆ ಪಾಸಿಟಿವ್ ದೃಢವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಈ ವರದಿ ಕುರಿತು ನಿಮ್ಹಾನ್ಸ್ ವೈದ್ಯರ ಜೊತೆ ಚರ್ಚಿಸಲಾಗುತ್ತಿದೆ. 6 ಜನರನ್ನು ಐಸೋಲೇಟ್ ಮಾಡಿ. ಇವರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಇವರ ಸಹ ಪ್ರಯಾಣಿಕರ ವಿವರಗಳನ್ನು ಪಡೆದು ಅವರ ಆಗುಹೋಗುಗಳ ಕುರಿತು ಮಾಹಿತಿ ಕಲೆಹಾಕಲಾಗಿದೆ. ಅವರಿಗೂ ಸಹ ಪರೀಕ್ಷೆಮಾಡುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.

ತಾಯಿ ಮತ್ತು ಮಗು ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಮೂರನೇ ವ್ಯಕ್ತಿ ಪತ್ತೆ ಮಾಡಲಾಗಿದೆ. ಇವರ ಜೊತೆಗಿರುವವರನ್ನು ಪ್ರತ್ಯೇಕಗೊಳಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳದೇ ತಪ್ಪಿಸಿಕೊಂಡವರನ್ನು 48 ಗಂಟೆಯೊಳಗೆ ಗೃಹ ಇಲಾಖೆಯಿಂತ ಪತ್ತೆ ಮಾಡಿ ಆರೋಗ್ಯ ಇಲಾಖೆಯ ಸುಪರ್ದಿಗೆ ನೀಡುವುದಾಗಿ ಗೃಹಸಚಿವರು ಹೇಳಿದ್ದಾರೆ. 48 ಗಂಟೆಯೊಳಗೆ 1614 ಜನರನ್ನು ಪತ್ತೆ ಮಾಡಿದ್ದೇವೆ ಎನ್ನುವುದೇ ತ್ವರಿತ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. 7 ದಿನಗಳು ಆಸ್ಪತ್ರೆಯಲ್ಲಿ 7 ದಿನ ಮನೆಯಲ್ಲಿ ಎಂದು ಮೊದಲಿತ್ತು. ಈಗ 28 ದಿನ ಆಸ್ಪತ್ರೆಯ ಐಸೋಲೆಷನ್ ಗೊಳಪಡಬೇಕು. ಗೃಹ ಇಲಾಖೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಿಗಿ ಕ್ರಮಕೈಗೊಳ್ಳುತ್ತದೆ ಎಂಬ ವಿಶ್ವಾಸವಿರುವುದಾಗಿ ಹೇಳಿದರು.

 

Stay up to date on all the latest ರಾಜ್ಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp