ದಾಂಪತ್ಯ ದ್ರೋಹ, ಅಕ್ರಮ ಸಂಬಂಧ, ಪ್ರೀತಿಗೆ ಕೊಲೆ ಕೇಸುಗಳಲ್ಲಿ ಬೆಂಗಳೂರು ಭಾರತಕ್ಕೆ ರಾಜಧಾನಿಯಂತೆ!

ಮೂವರು ಮಕ್ಕಳ ತಾಯಿ ತನ್ನ ಗೆಳೆಯನ ಸಹಾಯದಿಂದ ಪತಿಯನ್ನು ಕೊಲೆ ಮಾಡುತ್ತಾಳೆ. ನಂತರ ಕೇಸಿನಿಂದ ಬಚಾವಾಗಲು ಮಂಡ್ಯ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜೊತೆ ಅಕ್ರಮ ಸಂಬಂಧ ಬೆಳೆಸುತ್ತಾಳೆ. ಮೂರು ತಿಂಗಳ ಹಿಂದೆ ಕೇಸಿನಿಂದ ತಪ್ಪಿಸಿಕೊಂಡಳು.
ದಾಂಪತ್ಯ ದ್ರೋಹ, ಅಕ್ರಮ ಸಂಬಂಧ, ಪ್ರೀತಿಗೆ ಕೊಲೆ ಕೇಸುಗಳಲ್ಲಿ ಬೆಂಗಳೂರು ಭಾರತಕ್ಕೆ ರಾಜಧಾನಿಯಂತೆ!

ಬೆಂಗಳೂರು; ಕೇಸು ನಂಬರ್ 1, ಮೂವರು ಮಕ್ಕಳ ತಾಯಿ ತನ್ನ ಗೆಳೆಯನ ಸಹಾಯದಿಂದ ಪತಿಯನ್ನು ಕೊಲೆ ಮಾಡುತ್ತಾಳೆ. ನಂತರ ಕೇಸಿನಿಂದ ಬಚಾವಾಗಲು ಮಂಡ್ಯ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜೊತೆ ಅಕ್ರಮ ಸಂಬಂಧ ಬೆಳೆಸುತ್ತಾಳೆ. ಮೂರು ತಿಂಗಳ ಹಿಂದೆ ಕೇಸಿನಿಂದ ತಪ್ಪಿಸಿಕೊಂಡಳು.


ಕೇಸ್ ನಂಬರ್ 2: ಪತಿಗೆ ಮತ್ತೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಇರುವುದು ಗೊತ್ತಾದಾಗ ಪತ್ನಿ ಕುದಿಯುತ್ತಿರುವ ಎಣ್ಣೆಯನ್ನು ಗಂಡನ ಮೇಲೆ ಸುರಿದು ಕೊಲೆ ಮಾಡಿದಳು. 


ಕೇಸ್ ನಂಬರ್ 3: ಅಕ್ರಮ ಸಂಬಂಧ ಬೆಳೆಸು ಎಂದು ಪೀಡಿಸಿದ ಪತಿಯ ಸ್ನೇಹಿತನಿಗೆ ಕಬ್ಬಿಣದ ಸಲಾಕೆಯಲ್ಲಿ ಹೊಡೆದು ಸಾಯಿಸಿದ ಮಹಿಳೆ.


ಕೇಸ್ ನಂಬರ್ 4: ಅಕ್ರಮ ಸಂಬಂಧ ಬೆಳೆಸಿದ್ದ ಸೋದರಿಯನ್ನು ಕೊಂದ ಸೋದರ 


ಈ ಎಲ್ಲಾ ಘಟನೆಗಳು ನಡೆದಿದ್ದು ಒಂದು ತಿಂಗಳ ಸಮಯದಲ್ಲಿ. ಇವುಗಳನ್ನು ನೋಡಿದರೆ ನಮಗೆ ಕಂಡುಬರುವುದು ಪ್ರೀತಿ, ಪ್ರೇಮ, ಅಕ್ರಮ ಸಂಬಂಧ, ಮೋಸ, ದ್ರೋಹ. ಈ ರೀತಿಯ ಕೇಸುಗಳು ಇತ್ತೀಚಿನ ಸಮಯದಲ್ಲಿ ನಮ್ಮ ಕರ್ನಾಟಕದಲ್ಲಿ 1.35 ಲಕ್ಷ ದಾಖಲಾಗಿದ್ದು ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ. ಅದರಲ್ಲೂ ಬೆಂಗಳೂರು ಭಾರತದ ದಾಂಪತ್ಯ ದ್ರೋಹದ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ ಎನ್ನುತ್ತದೆ ಅಕ್ರಮ ಸಂಬಂಧಗಳ ಬಗ್ಗೆ ಅಧ್ಯಯನ ನಡೆಸುವ ಗ್ಲೀಡನ್ ಎಂಬ ವೆಬ್ ಸೈಟ್. ಇವರಲ್ಲಿ 43,200ರಷ್ಟು ಮಹಿಳೆಯರು ಮತ್ತು 91, 800ರಷ್ಟು ಪುರುಷರಾಗಿದ್ದಾರೆ ಎಂದು ತಿಳಿದುಬಂದಿದೆ.


ರಾಷ್ಟ್ರೀಯ ಅಪರಾಧ ದಾಖಲೆ ಕೇಂದ್ರದ(ಎನ್ ಸಿಆರ್ ಬಿ) ಮಾಹಿತಿ ಪ್ರಕಾರ ಪ್ರೀತಿ ಪ್ರೇಮ,ಅಕ್ರಮ ಸಂಬಂಧ ಪ್ರಕರಣಗಳು ಕೊಲೆಗೆ ಅತಿ ಮುಖ್ಯ ಕಾರಣವಾಗಿರುತ್ತದೆ. ಕರ್ನಾಟಕ, ದೆಹಲಿ ಮತ್ತು ತಮಿಳು ನಾಡುಗಳಲ್ಲಿ 2001ರಿಂದ 2017ರ ಮಧ್ಯೆ ಆದ ಕೊಲೆಗಳಲ್ಲಿ ಪ್ರೀತಿ ಪ್ರೇಮ ವಿಚಾರಗಳೇ ಹೆಚ್ಚಿನ ಕೇಸುಗಳಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com