ಮಂತ್ರಿ ಬಿಲ್ಡರ್ಸ್ ಗೆ ಬಿಬಿಎಂಪಿಯಿಂದ 9 ಕೋಟಿ ರೂಪಾಯಿ ದಂಡ!

ಮಂತ್ರಿ ಬಿಲ್ಡರ್ಸ್ ಗೆ ಬಿಬಿಎಂಪಿಯಿಂದ 9 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಮಂತ್ರಿ ಬಿಲ್ಡರ್ಸ್ ಗೆ ಬಿಬಿಎಂಪಿಯಿಂದ 9 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ಆಸ್ತಿ ತೆರಿಗೆ ಉಲ್ಲಂಘನೆ ಹಾಗೂ ಬಡ್ಡಿ ಎರಡೂ ಸೇರಿ 9,21,80,956 ರೂಪಾಯಿ ದಂಡ ಹಾಕಲಾಗಿದೆ. ಈ ಪೈಕಿ 2018-19 ಆರ್ಥಿಕ ವರ್ಷದ ಆಸ್ತಿ ತೆರಿಗೆ  ಬಾಕಿ, ದಂಡ, ಪ್ರತಿ ತಿಂಗಳಿಗೆ ಶೇ.2 ರಂತೆ ಬಡ್ಡಿಯ ಮೊತ್ತವೂ ಇದೆ. 

ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಈ ದಂಡ ಮೊತ್ತ ಪಾವತಿ ಮಾಡಬೇಕು ಹಾಗೂ ಒತ್ತುವರಿ ಪ್ರಕರಣ ಪ್ರತ್ಯೇಕವಾಗಿರಲಿದೆ. ಈ ಆರ್ಥಿಕ ವರ್ಷ ಅಂತ್ಯಗೊಳ್ಳುವ ವೇಳೆಗೆ ಬಿಲ್ಡರ್ ಹಾಗೂ ಆಸ್ತಿಯ ಮಾಲಿಕರು ದಂಡದ ಮೊತ್ತ ಪಾವತಿ ಮಾಡಬೇಕಿದೆ. ತಪ್ಪಿದಲ್ಲಿ ದಂಡದ ಮೊತ್ತ ಹಾಗೂ ತೆರಿಗೆ ಎರಡೂ ಏರಿಕೆಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಈ ಬೃಹತ್ ಪ್ರಮಾಣದ ದಂಡ ವಿಧಿಸಲಾಗಿದೆ. ಆನ್ ಲೈನ್ ಟ್ಯಾಕ್ಸ್ ಫೈಲಿಂಗ್ ವ್ಯವಸ್ಥೆ ಹಾಗೂ ಪರಿಶೀಲನೆಯಿಂದ ಹಲವು ಪ್ರಕರಣಗಳು ಮುಂಚೂಣಿಗೆ ಬರುತ್ತಿವೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com