ಮಂಡ್ಯ: ಡಿಪ್ಲೊಮೊ ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿ ಕೊಲೆಗೆ ಯತ್ನ

ದುಷ್ಕರ್ಮಿಗಳು ಡಿಪ್ಲೊಮೊ ವಿದ್ಯಾರ್ಥಿಯೋರ್ವನ ಮರ್ಮಾಂಗ ಕತ್ತರಿಸಿ  ಕೊಲೆಗೆ ಯತ್ನಿಸಿರುವ ಅಮಾನವೀಯ ಘಟನೆ ಪಾಂಡವಪುರ ತಾಲ್ಲೂಕಿನ ಸೀತಾಪುರ ಬಳಿ ನಡೆದಿದೆ

Published: 15th February 2020 12:46 PM  |   Last Updated: 15th February 2020 01:02 PM   |  A+A-


Casual_photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : RC Network

ಮಂಡ್ಯ: ದುಷ್ಕರ್ಮಿಗಳು ಡಿಪ್ಲೊಮೊ ವಿದ್ಯಾರ್ಥಿಯೋರ್ವನ ಮರ್ಮಾಂಗ ಕತ್ತರಿಸಿ  ಕೊಲೆಗೆ ಯತ್ನಿಸಿರುವ ಅಮಾನವೀಯ ಘಟನೆ ಪಾಂಡವಪುರ ತಾಲ್ಲೂಕಿನ ಸೀತಾಪುರ ಬಳಿ ನಡೆದಿದೆ. ಸೀತಾಪುರ ಗ್ರಾಮದ ಜಯರಾಂ ಪುತ್ರ ದರ್ಶನ್(೧೬) ಎಂಬ ವಿದ್ಯಾರ್ಥಿಯ ಕೊಲೆ ಯತ್ನ ನಡೆಸಲಾಗಿದೆ. 

ಕೆ.ಆರ್.ಪೇಟೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೊ ಓದುತ್ತಿದ್ದ ದರ್ಶನ್ ಬೆಳಿಗ್ಗೆ ೯ ಗಂಟೆಯ ಸಮಯದಲ್ಲಿ ಕಾಲೇಜಿಗೆ ಹೋಗಲು ಬಸ್‌ಗಾಗಿ ಅರಳುಕುಪ್ಪೆ ಬಳಿ ಸೀತಾಪುರ ಕ್ರಾಸ್‌ನಲ್ಲಿ ಕಾಯುತ್ತಿದ್ದರು. 

ಇದೇ ಮಾರ್ಗದಲ್ಲಿ ಕಾರ್‌ವೊಂದರಲ್ಲ್ಲಿಬಂದ ಯುವಕರ ಗುಂಪು ಎಲ್ಲಿಗೆ ಹೋಗಬೇಕು ಅಂತ ಕೇಳಿದ್ದಾರೆ, ಕಾಲೇಜಿಗೆ ಅಂದಾಗ ನಾವು ಹ್ಯಾಂಡ್ ಪೋಸ್ಟ್ ಕಡೆಗೆ ಹೋಗ್ತಾ ಇದ್ದೀವಿ ಡ್ರಾಪ್ ಕೊಡ್ತೀವಿ ಅಂತಾ ಕಾರ್ ಗೆ ಹತ್ತಿಸಿಕೊಂಡಿದ್ದಾರೆ,ಆದರೆ ಮಾರ್ಗ ಮಧ್ಯೆಯೇ ಆತನಿಗೆ  ಹಲ್ಲೆ ಮಾಡಿ ಮರ್ಮಾಂಗವನ್ನು ಕಟ್‌ಮಾಡುವ ಪ್ರಯತ್ನ ಮಾಡಿದ್ದಲ್ಲದೆ ದಾರಿ ಮಧ್ಯೆಯೇ ಕಾರ್‌ನಿಂದ ಹೊರತಳ್ಳಿ ಪರಾರಿಯಾಗಿದ್ದಾರೆ. 

ರಸ್ತೆಯಲ್ಲಿ ರಕ್ತದ ಮಡುವಲ್ಲಿ  ಒದ್ದಾಡುತ್ತಿದ್ದುದನ್ನು ಕಂಡ ಸ್ಥಳೀಯರು ದರ್ಶನ್‌ನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಪ್ರಜ್ವಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ದಾಖಲಾಗಿರುವ ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ

ಯಾಕೆ ಈ ಕೃತ್ಯವೆಸಗಿದ್ದಾರೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಾಗಯ್ಯ 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp