ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಉಗ್ರ ಪ್ರಭುತ್ವ-ವಿರೋಧಿ ಕಾರ್ಯಕರ್ತೆ!

ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ 19 ವರ್ಷದ ಕಾಲೇಜು ಯುವತಿ ಅಮೂಲ್ಯ, ಆನ್‌ ಲೈನ್ ಮತ್ತು ಆಫ್‌ ಲೈನ್‌ನಲ್ಲಿ  ಉಗ್ರ ಪ್ರಭುತ್ವ ವಿರೋಧಿ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದಳು ಎಂಬುದು ತಿಳಿದುಬಂದಿದೆ.
ಅಮೂಲ್ಯ
ಅಮೂಲ್ಯ

ಬೆಂಗಳೂರು: ಸ್ವಾತಂತ್ರ್ಯ ಉದ್ಯಾವನದಲ್ಲಿ  ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ 19 ವರ್ಷದ ಕಾಲೇಜು ಯುವತಿ ಅಮೂಲ್ಯ, ಆನ್‌ ಲೈನ್ ಮತ್ತು ಆಫ್‌ ಲೈನ್‌ನಲ್ಲಿ  ಉಗ್ರ ಪ್ರಭುತ್ವ ವಿರೋಧಿ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದಳು ಎಂಬುದು ತಿಳಿದುಬಂದಿದೆ.

ಆಕೆಯ ಚಟುವಟಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿರುವ ಪೋಸ್ಟ್ ಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.ಜನವರಿ 31 ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ  ಬಲಪಂಥೀಯ ಟ್ವೀಟರ್ ಮಹೇಶ್ ಗಣೇಶ್ ಹೆಗ್ಡೆ ಅವರನ್ನು ವಂದೇ ಮಾತರಂ ಹಾಡುವಂತೆ ಪೀಡಿಸಿದ ಮೂವರು ಹೋರಾಟಗಾರ್ತಿಯರಲ್ಲಿ ಅಮೂಲ್ಯ ಕೂಡಾ ಒಬ್ಬರಾಗಿದ್ದಾರೆ. ಹೆಗ್ಡೆ ವಂದೇ ಮಾತರಂ ಹಾಡುವಂತೆ ಅಮೂಲ್ಯ, ನಜ್ಮಾ ನಜೀರ್ ಹಾಗೂ ಕವಿತಾ ರೆಡ್ಡಿ ಪೀಡಿಸಿದ್ದರು.

ವಿಮಾನ ನಿಲ್ದಾಣದಿಂದ ಇಂದಿನ ಘಟನೆಯ ಆಯ್ದ ಭಾಗಗಳು, ಜನರು ಇನ್ನೂ ನೋಡಿಲ್ಲ ಎಂದು ಬರೆದಿದ್ದ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಅಮೂಲ್ಯ ಶೇರ್ ಮಾಡಿದ್ದಳು.

ಚಿಕ್ಕಮಗಳೂರಿನ ಕೊಪ್ಪ ಮೂಲಕ ಅಮೂಲ್ಯ, ಇದಕ್ಕೂ ಮುನ್ನ ರೆಕಾರ್ಡಿಂಗ್ ಕಂಪನಿಯೊಂದರಲ್ಲಿ ಅನುವಾದಕಿಯಾಗಿಯೂ ಕಾರ್ಯನಿರ್ವಹಿಸಿದ್ದಾಳೆ 

ಎನ್ ಎಂಕೆ ಆರ್ ವಿ ಕಾಲೇಜಿನ ದ್ವಿತೀಯ ವರ್ಷದ ಬಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಮೂಲ್ಯ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಟ್ವೀಟರ್ ಖಾತೆ ತೆರೆದಿದ್ದು ಸುಮಾರು 2400 ಫಾಲೋವರ್ಸ್ ಹೊಂದಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಣಕಿಸುವಂತಹ ಅನೇಕ ಪೋಸ್ಟ್ ಗಳನ್ನು ಮಾಡಿದ್ದಾರೆ. ಅಲ್ಲದೇ  ನಗರದಲ್ಲಿ ಪ್ರತಿಭಟನಾ ವೇದಿಕೆಗಳ ಪಟ್ಟಿಯನ್ನು ಸಹ ಪ್ರಕಟಿಸಿದ್ದರು. 

ದೆಹಲಿಯಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಉತ್ತಮ ಆಡಳಿತಕ್ಕೆ ದೆಹಲಿ ಜನತೆ ಮತ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಳು. ದೆಹಲಿ ಚುನಾವಣೆ ನಂತರ ಬಿಜೆಪಿಯ ವರ್ಚಸ್ಸು ಹೇಗೆ ಕಡಿಮೆಯಾಗಿದೆ ಎಂಬುದರ ಕುರಿತು ಮಾಜಿ ಬಿಜೆಪಿ ನಾಯಕ ಯಶವಂತ ಸಿನ್ಹಾ ಮಾಡಿದ್ದ ಟ್ವೀಟ್ ನ್ನು ಶೇರ್ ಮಾಡಿದ್ದಳು. 

ನ್ಯಾಯಾಂಗದ ಉನ್ನತ ಸ್ಥಾನಗಳಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯದ ಕೊರತೆಯ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಬೆಳಕು ಚೆಲುತ್ತಿದ್ದರು. ಇತ್ತೀಚಿಗೆ ಸಿಎಎ ಕುರಿತಾದ ಟ್ವೀಟ್ ವೊಂದನ್ನು ಪ್ರಕಟಿಸಿದ ಅಮೂಲ್ಯ, ದೌರ್ಜನ್ಯಕ್ಕೊಳಗಾದವರಿಗೆ ಪೌರತ್ವ ನೀಡುವುದಕ್ಕೆ ನಾವು ವಿರೋಧಿಸುವುದಿಲ್ಲ. ನಮ್ಮ ಹೋರಾಟವನ್ನು ಕಾಂಗ್ರೆಸ್ ಮತ್ತು ಬಿಜೆಪಿಯ ಮಾಧ್ಯಮಗಳು ಮತ್ತು ರಾಜಕಾರಣಿಗಳು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಟೀಕಿಸಿ ಟ್ವೀಟ್ ಮಾಡಿದ್ದಳು. 

ಅಮೂಲ್ಯ ಪ್ರತಿದಿನ ಹಲವಾರು ವಿಷಯಗಳ ಕುರಿತು ಚಿತ್ರಗಳು, ಮಿಮ್ಸ್,  ರಿಟ್ವೀಟ್ ಗಳನ್ನು ಶೇರ್ ಮಾಡುತ್ತಿದ್ದಳು.  ರಾಜಕೀಯ ಮಾತ್ರವಲ್ಲ, ಈ ತಿಂಗಳ ಮೊದಲ ವಾರದಲ್ಲಿ ತುಬ್ರಹಳ್ಳಿ ಕೊಳಚೆ ನಿವಾಸಿಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಳು. ಬಹಳಷ್ಟು ಓದುಗರನ್ನು ತಲುಪಲು ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಯಲ್ಲೂ ಫೇಸ್ ಬುಕ್ ನಲ್ಲಿ ಅಮೂಲ್ಯ  ಪೋಸ್ಟ್ ಮಾಡುತ್ತಿದ್ದಳು. 

ಬುಧವಾರ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜಂಯತಿ ಅಂಗವಾಗಿ ಅವರ ಚಿತ್ರವನ್ನು ಅಮೂಲ್ಯ ಪೋಸ್ಟ್ ಮಾಡಿದ್ದಳು. ಗುರುವಾರ ಶ್ರೀವಾಸ್ತವ ಎಂಬುವರ ಟ್ವೀಟ್ ಗೆ ರೀಟ್ವಿಟ್ ಮಾಡಿರುವ ಅಮೂಲ್ಯ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ 13 ನೌಕಾಪಡೆಯ ನಾವಿಕರನ್ನು ಬಂಧಿಸಲಾಗಿದೆ. ಟಿವಿ ಚರ್ಚೆಗಳಿಲ್ಲ, ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಪ್ರಕಟವಾಗಿಲ್ಲ ಏಕೆ? ಏಕೆಂದರೆ ಅವರು ಮುಸ್ಲಿಂರು ಅಲ್ಲ ಎಂದು ಹೇಳಿದ್ದಾಳೆ.

ಈ ಮಧ್ಯೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಅಮೂಲ್ಯ ತೀವ್ರ ಟೀಕೆಗೊಳಗಾಗಿದ್ದಾಳೆ. ಆದಾಗ್ಯೂ, ಕೆಲವರು ಆಕೆಯ ಬಗ್ಗೆ ಮೃದು ಧೋರಣೆ ತೋರಿಸುವಂತಹ ಟ್ವೀಟ್ ಮಾಡಿದ್ದಾರೆ. 

ಆರ್ಟ್ ಆಫ್ ಲೀವಿಂಗ್ ಮುಖ್ಯಸ್ಥ ರವಿಶಂಕರ್  ಸ್ವಾಮೀಜಿ ಜೈ ಹಿಂದೂ  ಮತ್ತು ಪಾಕಿಸ್ತಾನ ಜಿಂದಾಬಾದ್ ಅಂತಾ ಕರೆದಾಗ ಯಾವುದೇ ವಿವಾದವಾಗಲೇ ಇಲ್ಲ ಎಂದು ದೇಶಿ ಪಾಲಿಟಿಕ್ಸ್ ಎಂಬ ಟ್ವೀಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹರಿಯಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com