ಅಂಚೆ ಇಲಾಖೆಯಿಂದ ಪ್ರತಿ ಮನೆ, ಕಚೇರಿಗೆ ಡಿಜಿಟಲ್ ಪಿನ್ ಕೋಡ್

ಬೆಂಗಳೂರಿನ ಅಂಚೆ ಇಲಾಖೆ ಪ್ರತಿ ಮನೆ ಮತ್ತು ಕಚೇರಿಗೆ ಡಿಜಿಟಲ್ ಅಡ್ರೆಸ್ ಕೋಡ್ ನೀಡಲು ಸಿದ್ಧತೆ ನಡೆಸಿದ್ದು, ಈ ಸಂಬಂಧ ಹೊಸ ಸಾಫ್ಟ್ ವೇರ್ ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಅಂಚೆ ಇಲಾಖೆ ಪ್ರತಿ ಮನೆ ಮತ್ತು ಕಚೇರಿಗೆ ಡಿಜಿಟಲ್ ಅಡ್ರೆಸ್ ಕೋಡ್ ನೀಡಲು ಸಿದ್ಧತೆ ನಡೆಸಿದ್ದು, ಈ ಸಂಬಂಧ ಹೊಸ ಸಾಫ್ಟ್ ವೇರ್ ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಪ್ರತಿ ಮನೆ, ಕಚೇರಿಗೆ ಡಿಜಿಟಲ್ ಪಿನ್ ಕೋಡ್ ನೀಡುವ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಡಿಜಿಟಲ್ ಪಿನ್ ಕೋಡ್ ನಿಂದ ಲೋಕೆಷನ್ ಶೇರ್ ಮಾಡುವುದು ತುಂಬಾ ಸುಲಭವಾಗಲಿದೆ ಮತ್ತು ಇದು ಸ್ಥಳ ಹಾಗೂ ಕಚೇರಿಗಳನ್ನು ನಿಖರವಾಗಿ ಗುರುತಿಸಲು ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಈ ಪರಿಕಲ್ಪನೆಯನ್ನು ರಿವರ್ಸ್ ಜಿಯೋ ಕೋಡಿಂಗ್ ತಂತ್ರಜ್ಞಾನ ಎಂದು ಕರೆಯಲಾಗುತ್ತಿದ್ದು, ಡಿಜಿಟಲ್ ಕೋಡ್ ಹಾಕುವ ಮೂಲಕ ಫೋನ್ ನಲ್ಲಿ ಲೋಕೆಷನ್ ಶೇರ್ ಮಾಡಬಹುದಾಗಿದೆ ಎಂದಿದ್ದಾರೆ. ಅಲ್ಲದೆ ಈ ಕೋಡ್ ವಿಳಾಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನು ಆಧಾರ್ ಕಾರ್ಡ್ ನಂತೆ ದೇಶಾದ್ಯಂತ ಜಾರಿಗೊಳಿಸುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಅಧಿಕಾರಿ, ಪ್ರತಿ ಮನೆ ಮತ್ತು ಕಚೇರಿಯನ್ನು ನಾವು ಗುರುತಿಸುತ್ತಿದ್ದೇವೆ. ಇದನ್ನು ಇತರೆ ಸಂಸ್ಥೆಗಳು ಮತ್ತು ಸ್ಥಳ ದೃಢಿಕರಣಕ್ಕಾಗಿ ಬಳಸಿಕೊಳ್ಳಬಹುದು. ದೇಶದಲ್ಲಿ 20 ಸಾವಿರ ಪಿನ್ ಕೋಡ್ ಗಳಿವೆ. 350 ದಶಲಕ್ಷ ಮನೆಗಳಿವೆ. 150 ಮಿಲಿಯನ್ ಕಚೇರಿಗಳಿವೆ. ನಾವು 50 ಕೋಟಿ ಡಿಜಿಟಲ್ ಅಡ್ರೆಸ್ ಕೋಡ್ ನೀಡಲು ಉದ್ದೇಶಿಸಿದ್ದೇವೆ ಎಂದರು.

ಇನ್ನು ಒಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಎರಡು ತಿಂಗಳಲ್ಲಿ ಡಿಜಿಟಲ್ ಕೋಡ್ ಪರಿಕಲ್ಪನೆಯನ್ನು ಅಂಚೆ ನಿರ್ದೇಶನಾಲಯದಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com