ಅವೈಜ್ಞಾನಿಕ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣ, ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಅವೈಜ್ಞಾನಿಕವಾಗಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ದಿಢೀರ್ ಪ್ರತಿಭಟಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು-ಸೋಮಹಳ್ಳಿಯಲ್ಲಿ ನಡೆದಿದೆ.
ಅವೈಜ್ಞಾನಿಕ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣ, ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಅವೈಜ್ಞಾನಿಕ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣ, ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಚಾಮರಾಜನಗರ: ಅವೈಜ್ಞಾನಿಕವಾಗಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ದಿಢೀರ್ ಪ್ರತಿಭಟಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು-ಸೋಮಹಳ್ಳಿಯಲ್ಲಿ ನಡೆದಿದೆ.

ಬೇಗೂರು ಸಮೀಪ ಸ್ಥಾಪಿಸಲು ಹೊರಟಿರುವ ವಿದ್ಯುತ್ ಪ್ರಸರಣ ಕೇಂದ್ರ ಅವೈಜ್ಞಾನಿಕವಾಗಿ ಕೂಡಿದೆ. ಕಮರಹಳ್ಳಿ ಕೆರೆ ತುಂಬಿದ ವೇಳೆ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ನುಗ್ಗಲಿದೆ. ಜೊತೆಗೆ ಬೇರೆ ಕೆರೆಗಳಿಗೂ ನೀರು ಬಿಡಲು ಅಡ್ಡಿಯಾಗುತ್ತದೆ ಎಂದು ಆರೋಪಿಸಿ ರೈತರು ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು. ಸ್ದಳಕ್ಕೆ ಆಗಮಿಸಿದ ಅಂದಿನ ರಾಜ್ವಸ್ವ ನಿರೀಕ್ಷಕ ಮಹದೇವಪ್ಪ ಮಾತಾನಾಡಿ, 141ಸರ್ವೆ ನಂಬರ್‌ನಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ಸ್ದಾಪನೆ ಮಾಡಲು ತಿಳಿಸಲಾಗಿತ್ತು. 

ಆದರೆ, ಚೆಸ್ಕಾಂ ಅಧಿಕಾರಿಗಳು ಸರ್ವೆ ನಂಬರ್ 137ರಲ್ಲಿ ಸ್ದಾಪನೆ ಮಾಡಲು ಹೊರಟಿರುವುದಾಗಿ ಆರೋಪಿಸಿದರು. ಇದಕ್ಕೆ ಚೆಸ್ಕಾಂನ ಎಂಜಿನಿಯರ್ ಸಂತೋಷ್ ಪ್ರತಿಕ್ರಿಯಿಸಿ, ಮಾ. 4ರೊಳಗೆ ತಾಪಂ ಸಭಾಂಗಣದಲ್ಲಿ ಕಂದಾಯ, ಸಣ್ಣ ನೀರಾವರಿ, ವಿದ್ಯುತ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸಭೆ ನಡೆಸುವ ತನಕ ಕಾಮಗಾರಿ ನಿಲ್ಲಿಸಲಾಗುವುದು ಎಂದು ಆಶ್ವಾಸನೆ ನೀಡಿದ ಬಳಿಕ ರೈತರು ಧರಣಿ ಕೈ ಬಿಟ್ಟರು.

ವರದಿ ಗುಳಿಪುರ ನಂದೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com