ಯಾವ ತಪ್ಪು ಮಾಡದ ಪತಿ ನನ್ನ ಕಣ್ಣ ಮುಂದೆಯೇ ಶವವಾದರು: ಗೋಲಿಬಾರ್ ಸಂತ್ರಸ್ತನ ಪತ್ನಿ

ಮಂಗಳೂರಿನಲ್ಲಿ ಇತ್ತೀಚೆಗೆ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಅಬ್ದುಲ್ ಅಜೀಜ್ ಪತ್ನಿ ಸಯ್ಯೀದಾ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ.
ಅಬ್ದುಲ್ ಅಜೀಜ್ ಮಕ್ಕಳು
ಅಬ್ದುಲ್ ಅಜೀಜ್ ಮಕ್ಕಳು

ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಅಬ್ದುಲ್ ಅಜೀಜ್ ಪತ್ನಿ ಸಯ್ಯೀದಾ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ.

ಡಿಸೆಂಬರ್ 19 ಸಂಜೆ 4.15 ಕ್ಕೆ ತಮ್ಮ ಪತಿ ಜಲೀಲ್ ಮಂಗಳೂರಿನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆ ಬಗ್ಗೆ ಆತಂಕಗೊಂಡಿದ್ದರು, ಹೀಗಾಗಿ ಮಕ್ಕಳನ್ನು ಶಾಲೆಯಿಂದ ಕರೆತಂದು ಬಿಡುವಂತೆ ಹೇಳಿದೆ, ಅದರಂತೆ ಮಕ್ಕಳನ್ನು ಕರೆದುಕೊಂಡು ಮನೆಗೆ ಬಿಟ್ಟರು, ಈ ವೇಳೆಗೆ ಜನರು ಗುಂಪು ಸೇರತೊಡಗಿತ್ತು.

ಅಷ್ಟರಲ್ಲಿ ನಮಾಜ್  ಮಾಡುವ ಸಮಯವಾಗಿದ್ದರಿಂದ  ಬದ್ರಿಯಾ ಮಸೀದಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟರು,  ಹೊರಗಿನ ಪ್ರತಿಭಟನೆ ನೋಡಿ ಆತಂಕಗೊಂಡ ನಾನು ನನ್ನ ಪತಿ ಹೋಗುವುದನ್ನು ಕಿಟಕಿಯಲ್ಲಿ ನೋಡುತ್ತಾ ನಿಂತಿದ್ದೆ, ಮನೆಯಿಂದ ಹೊರ ಹೋಗುತ್ತಿದ್ದಂತೆಯೇ  ಅವರಿಗೆ ಪೊಲೀಸರ ಗುಂಡು ಹಾರಿ ಸ್ಥಳದಲ್ಲಿಯೇ ಸಾವನ್ನಪಿದರು ಎಂದು ಆತನ ಪತ್ನಿ ಸಯ್ಯಿದಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನನ್ನ ಪತಿ ಯಾರೋಬ್ಬರಿಗೂ ತೊಂದರೆ ಕೊಟ್ಟಿಲ್ಲ, ಅಥವಾ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲ,  ಜೊತೆಗೆ ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ, ಡಿಸೆಂಬರ್ 19 ರಂದು ನಡೆದಿದ್ದ ಪ್ರತಿಭಟನೆಯ್ಲಿಯೂ ಪಾಲ್ಗೋಂಡಿಲ್ಲ, ಯಾರ ಮೇಲೆಯೂ ಅವರ ಕಲ್ಲು ತೂರಾಟ ನಡೆಸಿಲ್ಲ . ನನ್ನ ಪತಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದರು ಎಂದು ಪೊಲೀಸರು ಕಥೆ ಕಟ್ಟುತ್ತಿದ್ದಾರೆ.  ನನ್ನ   ಪತಿ ನಿಧನವಾದ ನಂತರ ನಾನು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಆದರೆ ಇದುವರೆಗೂ ಯಾವುದೇ ಕ್ರಮ  ಕೈಗೊಂಡಿಲ್ಲ   ಎಂದು ಆರೋಪಿಸಿದ್ದಾರೆ.                                                                    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com