ಕೋಡ್ ವರ್ಡ್ ಮೂಲಕ ನಡೆಯುತ್ತಿತ್ತು ಗೌರಿ ಹಂತಕರ ಸಂಭಾಷಣೆ !

ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು ಕೋಡ್ ವರ್ಡ್ ಮೂಲಕವೇ ಸಂಭಾಷಣೆ ನಡೆಸುತ್ತಿದ್ದರು ಎಂಬ ಮಾಹಿತಿಯೊಂದು ವಿಚಾರಣೆ ವೇಳೆ ಲಭ್ಯವಾಗಿದೆ‌.
ಗೌರಿ ಲಂಕೇಶ್
ಗೌರಿ ಲಂಕೇಶ್

ಬೆಂಗಳೂರು:  ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು ಕೋಡ್ ವರ್ಡ್ ಮೂಲಕವೇ ಸಂಭಾಷಣೆ ನಡೆಸುತ್ತಿದ್ದರು ಎಂಬ ಮಾಹಿತಿಯೊಂದು ವಿಚಾರಣೆ ವೇಳೆ ಲಭ್ಯವಾಗಿದೆ‌.

ಗುರುವಾರ ಜಾರ್ಖಂಡ್ ನಲ್ಲಿ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರುಳಿಯನ್ನು ಎಸ್ ಐಟಿ ತಂಡ ಬಂಧಿಸಿದ್ದು, ಈತ ಗೌರಿ ಲಂಕೇಶ್ ಹಾಗೂ ಎಂ ಎಂ ಕಲ್ಬುರ್ಗಿ ಅವರ ಹತ್ಯೆಯಲ್ಲಿಯೂ ಪ್ರಮುಖ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.

ಯಾರಿಗೂ ಸುಳಿವು ಸಿಗಬಾರದೆಂಬ ಕಾರಣಕ್ಕೆ ಅಮ್ಮ ಎಂಬ ಕೋಡ್​ವರ್ಡ್​ ಮೂಲಕವೇ ಗೌರಿ ಲಂಕೇಶ್​ ಬಗ್ಗೆ ದೂರವಾಣಿಯಲ್ಲಿ ಮಾತನಾಡಿಕೊಳ್ಳುತ್ತಿದ್ದ ಹಂತಕರು ಗೌರಿಯ ಹತ್ಯೆಯಾಗುವವರೆಗೂ ಇದೇ ಕೋಡ್​ವರ್ಡ್​ ಮೂಲಕ ಸಂವಹನ ಮಾಡುತ್ತಿದ್ದರು. ಆಪರೇಷನ್​ ಅಮ್ಮ ಎಂಬ ಹೆಸರಿನಲ್ಲಿ ನಡೆದ ಈ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಈ ಕೋಡ್​ವರ್ಡ್​ ಗೊತ್ತಿತ್ತು.

ಹತ್ಯೆಗೆ ಬಳಸಿದ್ದ ಪಿಸ್ತೂಲ್ ಅನ್ನು ಸುದರ್ಶನ ಚಕ್ರ ಎಂದು ಹಂತಕರು ಕರೆಯುತ್ತಿದ್ದರಂತೆ. ಯಾವುದೇ ಕ್ರೈಂ ಸಂಬಂಧಿತ ಶಬ್ದಗಳನ್ನು ಬಳಸಿದೇ ಅತಿ ಚಾಲಾಕಿಯಿಂದ ಸಂಹಾರದ ನಂತರ ಸುದರ್ಶನ ಚಕ್ರ ಕೃಷ್ಣನ ಕೈ ಸೇರಿದೆ ಎಂದು ಆರೋಪಿಗಳು ಸಂಭಾಷಣೆ ನಡೆಸುತ್ತಿದ್ದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com