ಬಿಜೆಪಿ ಶಾಸಕರಿಂದ ಕೆಟ್ಟ ಕಮೆಂಟ್, ದೇಶ ವಿರೋಧಿಗಳೆಂದು ಹಣೆಪಟ್ಟಿ: ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಆರೋಪ
ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರ ಬೆಂಬಲಿಗರು ವಿದ್ಯಾರ್ಥಿಗಳು ಧರಿಸಿದ ಉಡುಪಿನ ಬಗ್ಗೆ ನಿಂದಿಸಿ ದೇಶ ವಿರೋಧಿಗಳೆಂದು ಕರೆದಿದ್ದಾರೆ ಎಂದು ಸೃಷ್ಟಿ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
Published: 16th January 2020 02:28 PM | Last Updated: 16th January 2020 02:31 PM | A+A A-

ಬೆಂಗಳೂರು: ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರ ಬೆಂಬಲಿಗರು ವಿದ್ಯಾರ್ಥಿಗಳು ಧರಿಸಿದ ಉಡುಪಿನ ಬಗ್ಗೆ ನಿಂದಿಸಿ ದೇಶ ವಿರೋಧಿಗಳೆಂದು ಕರೆದಿದ್ದಾರೆ ಎಂದು ಸೃಷ್ಟಿ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಯಲಹಂಕದಲ್ಲಿರುವ ಕಾಲೇಜು ಕ್ಯಾಂಪಸ್ ಗೆ ಬಂದ ಶಾಸಕರ ಬೆಂಬಲಿಗರು ಗೇಟ್ ಹೊರಗಿದ್ದ ವಿದ್ಯಾರ್ಥಿಗಳ ವಾಹನಗಳನ್ನು ತೆಗೆದುಕೊಂಡು ಹೋಗಿರುವುದಲ್ಲದೆ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದರು.
ಕಳೆದ ಮಂಗಳವಾರ ತಮಗೆ ಶಾರೀರಿಕವಾಗಿ ಕೂಡ ಹಿಂಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ಇದೀಗ ಕಾಲೇಜಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ನಾಳೆಯವರೆಗೆ ಕಾಲೇಜು ಆಡಳಿತ ರಜೆ ಘೋಷಿಸಿದೆ.
ಈ ಬಗ್ಗೆ ಪ್ರತಿಕ್ರಿಯೆಗೆ ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ್ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.