ಎಸ್'ಡಿಪಿಐ ನಿಜವಾದ ಗುರಿಯಾಗಿದ್ದಿದ್ದು ಸಂಸದ ತೇಜಸ್ವಿ ಸೂರ್ಯ

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರೀಕ ನೋಂದಣಿ ಬೆಂಬಲಿಸಿ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದಿದ್ದ ಪ್ರತಿಭಟನೆ ವೇಳೆ ಪ್ರಮುಖ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದ್ದು, ಎಸ್'ಡಿಪಿಐಗೆ ಸೇರಿದ ಕಾರ್ಯಕರ್ತರ ನಿಜವಾದ ಗುರಿ ಸಂಸದ ತೇಜಸ್ವಿ ಸೂರ್ಯ ಆಗಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರೀಕ ನೋಂದಣಿ ಬೆಂಬಲಿಸಿ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದಿದ್ದ ಪ್ರತಿಭಟನೆ ವೇಳೆ ಪ್ರಮುಖ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದ್ದು, ಎಸ್'ಡಿಪಿಐಗೆ ಸೇರಿದ ಕಾರ್ಯಕರ್ತರ ನಿಜವಾದ ಗುರಿ ಸಂಸದ ತೇಜಸ್ವಿ ಸೂರ್ಯ ಆಗಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಸಿಎಎ ಪ್ರತಿಭಟನೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಸೋಷಿಯನ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಚು ರೂಪಿಸಿತ್ತು ಎಂದು ಹೇಳಲಾಗುತ್ತಿದೆ. 

ಆರ್ಎಸ್ಎಸ್ ಕಾರ್ಯಕರ್ತ ವರುಣ್ ಕೊಲೆ ಯತ್ನ ಪ್ರಕರಣಗಲ್ಲಿ ಪೊಲೀಸರು 6 ಮಂದಿ ಆರೋಪಿಗಲನ್ನು ಬಂಧನಕ್ಕೊಳಡಿಸಿದ್ದು, ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. 

ಬೆಂಗಳೂರಿನ ಆರ್.ಟಿ.ನಗರದ ಶಾಂಪುರ ಮುಖ್ಯರಸ್ತೆ ನಿವಾಸಿ ಇರ್ಫಾನ್ ಅಲಿಯಾಸ್ ಮೊಹಮ್ಮದ್ ಇರ್ಫಾನ್, ಭುವನೇಶ್ವರಿ ನಗರದ ಸೈಯದ್ ಅಕ್ಬರ್ ಅಲಿಯಾಸ್ ಮೆಕ್ಯಾನಿಕ್ ಅಕ್ಬರ್, ಲಿಂಗರಾಜಪುರದ ಸೈಯದ್ ಸಿದ್ದಿಕ್ ಅಕ್ಬರ್ ಅಲಿಯಾಸ್ ಸಿದ್ಧಿಕ್, ಕೆ.ಜಿ.ಹಳ್ಳಿಯ ಗೋವಿಂದಪುರದ ಅಕ್ಬರ್ ಬಾಷಾ, ಆರ್.ಟಿವಗರದ ಸನಾವುಲ್ಲಾ ಷರೀಫ್ ಅಲಿಯಾಸ್ ಸನಾ, ಶಿವಾಜಿನಗರದ ಸಾದಿಕ್ ಉಲ್ ಅಮೀನ್ ಅಲಿಯಾಸ್ ಸೌಂಡ್ ಸಾದಿಕ್ ಬಂಧಿತ ಆರೋಪಿಗಳು. ಇದೀಗ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. 

ಸಿಎಎ ಹಾಗೂ ಎನ್ಆರ್'ಸಿ ಬೆಂಬಲಿಸಿ ಡಿ.22 ರಂದು ಬೆಂಗಳೂರಿನ ಪುರಭವನದ ಬಳಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಂಸದ ತೇಜಸ್ವು ಸೂರ್ಯ ಮತ್ತು ಚರ್ಕವರ್ತಿ ಸೂಲಿಬೆಲೆ ಪಾಲ್ಗೊಂಡಿದ್ದರು. ಈ ವೇಳೆ ಗಲಾಟೆ ನಡೆಸಿ ಈ ಮುಖಂಡರ ಹತ್ಯೆಗೆ ಎಸ್'ಡಿಪಿಐ ಕಾರ್ಯಕರ್ತರು ಯೋಜಿಸಿದ್ದರು. ಆದರೆ, ಪೊಲೀಸರ ಭದ್ರತೆಯಿಂದ ಅವರ ಪೂರ್ವಯೋಜಿತ ಸಂಚು ವಿಫಲಗೊಂಡಿದ್ದು. ಕೊನೆಗೆ ಹಿಂದೂ ಸಂಘಟನೆಯ ಯಾರನ್ನಾದರೂ ಕೊಲೆ ಮಾಡಲೇಬೇಕು ಎಂಬ ದುರುದ್ದೇಶದಿಂದ ವರುಣ್ ಹತ್ಯೆಗೆ ಯತ್ನಿಸಿದ್ದರು ಎಂದು ಮೂಲಗಳಿ ತಿಳಿಸಿವೆ. 

ಕಾರ್ಯಕ್ರಮದ ವೇಳೆ ಕಲ್ಲು ತೂರಾಟ ನಡೆಸಿ ಗುಂಪು ಚದುರಿಸಿ ಮುಖಂಡರ ಕೊಲೆಗೆ ಆರೋಪಿಗಳು ಸಿದ್ಧತೆ ನಡೆಸಿದ್ದರು. ಆದರೆ ಪೊಲೀಸರ ರಕ್ಷಣೆಯಿಂದ ಯೋಜನೆ ಸಫಲವಾಗಿರಲಿಲ್ಲ. ಬೆಳಿಗ್ಗೆ 11 ಗಂಟೆಗೆ ಪುರಭವನದ ಬಳಿಗೆ ಆರೋಪಿಗಳು ಬಂದಿದ್ದು, ಅಲ್ಲಿಗೆ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದರು. ಮೊದಲು ಕಲ್ಲು ಎಸೆದು, ಗುಂಪು ಚದುರಿದಾಗ ಮುಖಂಡರ ಹತ್ಯೆಗೈಯುವುದು ಆರೋಪಿಗಳ ಸಂಚಾಗಿತ್ತು. ಅದರಂತೆ ಕಾರ್ಯಕ್ರಮ ನಡೆಸುವಾಗ 7 ಬಾರಿ ಆರೋಪಿಗಳು ಕಲ್ಲು ತೂರಿದ್ದಾರೆ. ಇದರಲ್ಲಿ ಒಂದು ಕಲ್ಲು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರ ಕಾಲಿಗೆ ತಾಗಿತ್ತು. ಕಲ್ಲು ಬಿದ್ದರೂ ದೃತಿಗೆಡದೆ ಚಕ್ರವರ್ತಿ ತಮ್ಮ ಭಾಷಣವನ್ನು ಮುಂದುವರೆಸಿದ್ದರು. 

ಕಾರ್ಯಕ್ರಮ ನಡೆದ ಸ್ಥಳದ ಸುತ್ತಲೂ ಪೊಲೀಸರು ಸುತ್ತುವರೆದು ಭದ್ರತಾಕೋಟೆ ನಿರ್ಮಿಸಿದ್ದರು. ಹೀಗಾಗಿ ಕೃತ್ಯ ಎಸಗಲು ಆರೋಪಿಗಳು ಹಿಂದೇಟು ಹಾಕಿದ್ದರು. ಈ ವೇಳೆ ಪ್ರಮುಖ ಮುಖಂಡರ ಬದಲಿಗೆ ಬೇರೆ ಯಾರನ್ನಾದರೂ ಹಿಂದೂ ವ್ಯಕ್ತಿಯನ್ನು ಕೊಲ್ಲಲೇಬೇಕು ಎಂದು ನಿರ್ಧರಿಸಿದ್ದರು. ಆಗ ಸಭೆಯಲ್ಲಿ ಹಿರಿಯ ನಾಗರಿಕರಿಗೆ ಕೇಸರಿ ಕುರ್ತಾ ಧರಿಸಿ ಕುಡಿಯುವ ನೀರು ವಿತರಿಸುತ್ತಿದ್ದ ವರುಣ್ ಕಣ್ಣಿಗೆ ಬಿದ್ದಿದ್ದಾರೆ. ಆತನನ್ನು ಗುರಿಯಾಗಿಸಿಕೊಂಡ ಆರೋಪಿಗಳು, ಟೌನ್ ಹಾಲ್ ಪಕ್ಕದ ರಸ್ತೆಗೆ ಬಂದು ಹೊಂಚು ಹಾಕಿದ್ದರು ಎಂದು ತಿಳಿದುಬಂದಿದೆ. 

ಸಭೆ ಮುಗಿಸಿದ ವರುಣ್ ಬೌನ್ಸ್ ಗಾಡಿ ಬುಕ್ ಮಾಡಿಕೊಂಡು ಮನೆಗೆ ಮರಳುತ್ತಿದ್ದರು. ಆಗ ಕುಂಬಾರ ಗುಂಡಿ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿದ್ದ ಐವರು ಆರೋಪಿಗಳು, ತಲೆ, ಕುತ್ತಿಗೆ ಹಾಗೂ ಬೆನ್ನಿಗೆ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೂಡಲೇ ಸಾರ್ವಜನಿಕರು ವರುಣ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಆರೋಪಿಗಳು ಅಲ್ಲಿಂದ ಪರಾರಿಯಾಗಿ ಬಟ್ಟೆ ಬದಲಿಸಿ, ಲಾಂಗ್ ಹಾಗೂ ಮಚ್ಚುಗಳನ್ನು ಕೆರೆಯೊಂದಕ್ಕೆ ಬಿಸಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com