ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತದೊಂದಿಗಿನ ದೇಶದ ಸಂಬಂಧವನ್ನು ಮುನ್ನಡೆಸುವಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜೂದಾರ್ ಶಾ ಅವರ ಸೇವೆಯನ್ನು ಪರಿಗಣಿಸಿ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಆಸ್ಟ್ರೇಲಿಯಾ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
ಕಿರಣ್ ಮಜುಂದಾರ್ ಶಾ
ಕಿರಣ್ ಮಜುಂದಾರ್ ಶಾ

ಬೆಂಗಳೂರು:  ಭಾರತದೊಂದಿಗಿನ ದೇಶದ ಸಂಬಂಧವನ್ನು ಮುನ್ನಡೆಸುವಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜೂದಾರ್ ಶಾ ಅವರ ಸೇವೆಯನ್ನು ಪರಿಗಣಿಸಿ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಆಸ್ಟ್ರೇಲಿಯಾ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
 
ಆಸ್ಟ್ರೇಲಿಯಾದ ಭಾರತದ ಹೈಕಮಿಷನರ್ ಹರಿಂದರ್ ಸಿಧು ಅವರು ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜನರಲ್ ವಿಭಾಗದಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾದ  ಗೌರವ ಸದಸ್ಯರಾಗಿ ಮಜುಂದಾರ್-ಶಾ ಅವರಿಗೆ ಪ್ರಶಸ್ತಿ ನೀಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಹೈ ಕಮೀಷನ್ ಹೇಳಿಕೆಯಲ್ಲಿ ತಿಳಿಸಿದೆ. 

ಆಸ್ಟ್ರೇಲಿಯಾ ಯೂನಿವರ್ಸಿಟಿ ಹಳೆಯ ವಿದ್ಯಾರ್ಥಿಯಾಗಿರುವ ಕಿರಣ್ ಮಜುಂದಾರ್ ಶಾ, ಭಾರತದ ಅತಿ ದೊಡ್ಡ ಜೈವಿಕ ಔಷಧೀಯ ಕಂಪನಿ ಬಯೋಕಾನ್ ಮುಖ್ಯಸ್ಥರಾಗಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಶಿಕ್ಷಣ, ವ್ಯವಹಾರ ಕ್ಷೇತ್ರಗಳಲ್ಲಿ ಡಾ. ಕಿರಣ್ ಮಜುಂದಾರ್ ಶಾ ಅವಿರತವಾಗಿ ಶ್ರಮಿಸಿದ್ದು, ಅವರ ಸೇವೆಯನ್ನು ಪರಿಗಣಿಸಿ ಆಸ್ಟ್ರೇಲಿಯಾದಿಂದ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಿಧು ತಿಳಿಸಿದರು.

ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದವರಲ್ಲಿ ಕಿರಣ್ ಮಜೂಂದಾರ್ ಶಾ ನಾಲ್ಕನೇಯವರಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೊಲ್ಕರ್, ಮಾಡಿ ಎಜಿ ಸೋಲಿ ಜೆಹಂಗೀರ್ ಸೊರಬ್ಜಿಹಾಗೂ ಮದರ್ ಥೇರೆಸಾ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com