ಫೆಬ್ರವರಿ 1ರಿಂದ ನಂದಿನಿ ಹಾಲಿನ ದರ ಏರಿಕೆ, ಪ್ರತಿ ಲೀಟರ್‌ಗೆ ಏರಿಕೆಯಾಗಿದೆಷ್ಟು?

ಗ್ರಾಹಕರಿಗೆ ಶಾಕ್ ಕೊಟ್ಟಿರುವ ಕೆಎಂಎಫ್ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿದ್ದು ಫೆಬ್ರವರಿ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ. 
ನಂದಿನಿ ಹಾಲು
ನಂದಿನಿ ಹಾಲು

ಬೆಂಗಳೂರು: ಗ್ರಾಹಕರಿಗೆ ಶಾಕ್ ಕೊಟ್ಟಿರುವ ಕೆಎಂಎಫ್ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿದ್ದು ಫೆಬ್ರವರಿ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ. 

14 ಹಾಲು ಒಕ್ಕೂಟಗಳು ಹಾಲಿನ ದರ ಪ್ರತಿ ಲೀಟರ್ ಗೆ 3 ರುಪಾಯಿ ಏರಿಕೆ ಮಾಡುವಂತೆ ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ರಾಜ್ಯ ಸರ್ಕಾರ 2 ರುಪಾಯಿ ಏರಿಕೆ ಮಾಡಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. 

ನಂದಿನಿ ಹಾಲಿನ ಜೊತೆಗೆ ಮೊಸರಿನ ದರವನ್ನು 2 ರುಪಾಯಿ ಏರಿಸಲಾಗಿದೆ. ಬೆಲೆ ಏರಿಕೆಯಿಂದ ಬರುವ 2 ರುಪಾಯಿ ಲಾಭದಲ್ಲಿ 1 ರುಪಾಯಿಯನ್ನು ರೈತರಿಗೆ ಕೊಟ್ಟು ಉಳಿದ ಒಂದು ರುಪಾಯಿಯನ್ನು ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಜನ ಸಾಮಾನ್ಯರು ಮತ್ತು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎರಡು ರೂ ಹೆಚ್ಚಿಸಲು ಸಮ್ಮತಿಸಿದ್ದು, ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ದರ ಅತಿ ಕಡಿಮೆ ಇದೆ ಎಂದು ಬಾಲಚಂದ್ರ ಜಾರಕಿಹೊಳಿ ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com