ಮಂಗಳೂರು ನಗರದ ಪಂಪ್ ವೆಲ್ ಮೇಲ್ಸೇತುವೆ ಲೋಕಾರ್ಪಣೆ

ಮಂಗಳೂರು ನಗರದ ದೀರ್ಘಕಾಲದಿಂದ ಬಾಕಿ ಉಳಿದುಕೊಂಡಿದ್ದ ಪಂಪ್ ವೆಲ್ ಮೇಲ್ಸೇತುವೆಯನ್ನು ಜಿಲ್ಲಾಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಉದ್ಘಾಟಿಸಿದರು.
ಪಂಪ್ ವೆಲ್ ಮೇಲ್ಸೇತುವೆ
ಪಂಪ್ ವೆಲ್ ಮೇಲ್ಸೇತುವೆ

ಮಂಗಳೂರು: ಮಂಗಳೂರು ನಗರದ ದೀರ್ಘಕಾಲದಿಂದ ಬಾಕಿ ಉಳಿದುಕೊಂಡಿದ್ದ ಪಂಪ್ ವೆಲ್ ಮೇಲ್ಸೇತುವೆಯನ್ನು ಜಿಲ್ಲಾಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಉದ್ಘಾಟಿಸಿದರು.

ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಹುತೇಕ 10 ವರ್ಷಗಳ ವಿಳಂಬ, ಒಂದರ ನಂತರ ಒಂದರಂತೆ ಹಲವು ಅಂತಿಮ ಗಡುವುಗಳು ಮುಗಿದ ನಂತರ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ- ಕುಂದಾಪುರ ನಡುವಣ ನಾಲ್ಕು ಪಥ ಮಾರ್ಗದ ಭಾಗವಾಗಿ ಪಂಪ್ ವೆಲ್ ಮೇಲ್ಸೇತುವೆ ಕೊನೆಗೆ ಇಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಂಡಿತು. 

ನಂತೂರು- ಎನ್ ಐ ಟಿ ಕೆ ಸರತ್ಕಲ್ ಮಾರ್ಗ ಹೊರತುಪಡಿಸಿ, ರಾಷ್ಟ್ರೀಯ ಹೆದ್ದಾರಿ 66 ತಲಪಾಡಿ- ಕುಂದಾಪುರ ನಡುವಣ ನಾಲ್ಕುಪಥ ಮಾರ್ಗದ ಕಾಮಗಾರಿ 2010 ಸೆಪ್ಟಂಬರ್ ನಲ್ಲಿ ಆರಂಭಗೊಂಡಿತ್ತು, ಪಂಪ್ ವೆಲ್ (ಮಹಾ ವೀರ ಸರ್ಕಲ್) ಮೇಲ್ಸೇತುವೆ ಈ ಯೋಜನೆಯ ಭಾಗವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com