ಬೆಂಗಳೂರು: ವೈಟ್‌ಫೀಲ್ಡ್ ವಿಭಾಗದ 15 ಪೊಲೀಸರಿಗೆ ಕೊರೋನಾ ಪಾಸಿಟಿವ್

ಬಂಧಿತ ಆರೋಪಿಗಳಿಂದ ‌ಪೊಲೀಸರಿಗೆ ಸೋಂಕು ಹರಡಿದೆ ಎಂಬ ವದಂತಿ ಸುಳ್ಳು ಎಂದು ಡಿಸಿಪಿ ಅನುಚೇತ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಂಧಿತ ಆರೋಪಿಗಳಿಂದ ‌ಪೊಲೀಸರಿಗೆ ಸೋಂಕು ಹರಡಿದೆ ಎಂಬ ವದಂತಿ ಸುಳ್ಳು ಎಂದು ಡಿಸಿಪಿ ಅನುಚೇತ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಗರದ‌ ವೈಟ್‌ಫೀಲ್ಡ್ ವಿಭಾಗದ ಒಟ್ಟು 15 ಪೊಲೀಸ್‌ ಸಿಬ್ಬಂದಿಯಲ್ಲಿ ಸೋಮವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ 12 ಸಿಬ್ಬಂದಿ ಎಚ್ಎಎಲ್‌ ಠಾಣೆಗೆ ಸೇರಿದ್ದಾರೆ. ಈ ವಿಭಾಗದಲ್ಲಿ ಇಲ್ಲಿಯವರೆಗೆ ಒಟ್ಟು 27 ಪೊಲೀಸ್‌ ಸಿಬ್ಬಂದಿಗಳಲ್ಲಿ ಕೋವಿಡ್‌ 19 ಪತ್ತೆಯಾಗಿದ್ದು, ಐದು ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದರು.

ಎಚ್‌ಎಎಲ್‌ ಠಾಣೆಯಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿಗೆ ಕಳೆದ ಜೂ. 27ರಂದು ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ನಂತರ ಎಲ್ಲಾ ಪೊಲೀಸ್‌ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 12 ಮಂದಿಗೆ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ ಎಂದು ತಿಳಿಸಿದರು. 

ಇನ್ನು, ಎಚ್‌ಎಎಲ್‌ ಠಾಣೆಯಲ್ಲಿ ಕೊನೆಯದಾಗಿ ಕಳೆದ ತಿಂಗಳ 15ರಂದು ಆರೋಪಿಯೋರ್ವನನ್ನು ಬಂಧಿಸಲಾಗಿತ್ತು. ಈಗಾಗಲೇ ಬಂಧಿತ ಎಲ್ಲಾ ಆರೋಪಿಗಳನ್ನು ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ. ಆದರೆ, ಯಾರೊಬ್ಬರಲ್ಲಿಯೂ ಸೋಂಕು ದೃಢಪಟ್ಟಿಲ್ಲ. ಅಲ್ಲದೇ , ತದನಂತರ ಯಾರೊಬ್ಬರನ್ನು ವಶಕ್ಕೆ ಪಡೆದಿಲ್ಲ. ಆದ್ದರಿಂದ ಬಂಧಿತ ಆರೋಪಿಗಳಿಂದ ‌ಪೊಲೀಸರಿಗೆ ಸೋಂಕು ಹರಡಿದೆ ಎಂಬ ವದಂತಿ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com