'ಆರು ನಿಮಿಷ ಕಾಲ್ನಡಿಗೆ ಪರೀಕ್ಷೆ': ಕೋವಿಡ್-19 ಪತ್ತೆಹಚ್ಚಲು ಯೋಜನಾ ಮಂಡಳಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಚಿಕಿತ್ಸೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಹೆಚ್ಚಿಸುತ್ತಿದ್ದರೂ ರಾಜ್ಯ ಯೋಜನಾ ಮಂಡಳಿ ಆರು ನಿಮಿಷಗಳ ನಡೆಯುವಿಕೆ ಪರೀಕ್ಷೆಯ ಸಲಹೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಚಿಕಿತ್ಸೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಹೆಚ್ಚಿಸುತ್ತಿದ್ದರೂ ರಾಜ್ಯ ಯೋಜನಾ ಮಂಡಳಿ ಆರು ನಿಮಿಷಗಳ ನಡೆಯುವಿಕೆ ಪರೀಕ್ಷೆಯ ಸಲಹೆ ನೀಡಿದೆ.

ಕೋವಿಡ್-19: ವೇ ಫಾರ್ವ್ ರ್ಡ್ ಫಾರ್ ಕರ್ನಾಟಕ ಎಂಬ ವರದಿಯನ್ನು ತಜ್ಞರ ಜೊತೆ 19 ಸುತ್ತುಗಳ ಮಾತುಕತೆ, ಸಭೆ ನಡೆಸಿದ ನಂತರ ಸಿದ್ದಪಡಿಸಿದೆ. ಮಹಾರಾಷ್ಟ್ರದ ವಾರ್ದಾದಲ್ಲಿ ತೆಗೆದುಕೊಂಡಿರುವ ಅಭಿಯಾನವನ್ನು ಇಲ್ಲಿ ಕೂಡ ಅಳವಡಿಸುವಂತೆ ಹೇಳಿದೆ.

ಕೋವಿಡ್-19 ಸೋಂಕಿನಿಂದ ತೀವ್ರ ಅಪಾಯದಲ್ಲಿರುವ ವಯಸ್ಕರನ್ನು ಆರು ನಿಮಿಷಗಳ ಕಾಲ್ನಡಿಗೆ ಮೂಲಕ ನಿರ್ಧರಿಸಲಾಗುತ್ತದೆ. ವ್ಯಕ್ತಿ ಆರು ನಿಮಿಷಗಳ ಕಾಲ ನಡೆದಾಗ ಅವರ ರಕ್ತದ ಆಮ್ಲಜನಕ ಮಟ್ಟಗಳನ್ನು ಪಲ್ಸ್ ಆಕ್ಸಿಮೀಟರ್ ನೊಂದಿಗೆ ಅಳತೆ ಮಾಡಲಾಗುತ್ತದೆ.ಶೇಕಡಾ 90ಕ್ಕಿಂತ ಕಡಿಮೆ ಬಂದವರನ್ನು ಕೊರೋನಾ ಪರೀಕ್ಷೆಗೆ ಕಳುಹಿಸಲಾಗುತ್ತದೆ.

ಪ್ರತಿಕಾಯ ಪರೀಕ್ಷೆಗಳು, ದುರ್ಬಲ ಗುಂಪುಗಳಿಗೆ ಎಕ್ಸರೆಗಳು: ಯೋಜನಾ ಮಂಡಳಿಯು ವ್ಯಾಪಕವಾದ ಪ್ರತಿಕಾಯ ಪರೀಕ್ಷೆಗಳು ಅಥವಾ ಎಕ್ಸರೆ ಸ್ಕ್ರೀನಿಂಗ್ ಅನ್ನು ಸಹ ಸೂಚಿಸಿದೆ, ಮಹಿಳೆಯರು, ಸಣ್ಣ ಮಕ್ಕಳು ಮತ್ತು ವೃದ್ಧರಲ್ಲಿ ತಪಾಸಣೆ, ಪರೀಕ್ಷೆ ಹೆಚ್ಚೆಚ್ಚು ನಡೆಸಬೇಕು. ಸದ್ಯ ಕೊರೋನಾ ಸೋಂಕಿತ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು, ರೋಗಿಗಳನ್ನು ಬೇಗನೆ ಆಸ್ಪತ್ರೆಗೆ ಸೇರಿಸುವುದರತ್ತ ಗಮನ ಹರಿಸಬೇಕಾಗಿದೆ ಎಂದು ಕೇಂದ್ರ ಮಂಡಳಿ ಮಾನ್ಯತೆ ಪಡೆದ ಸಂಸ್ಥೆಗಳ (ಎನ್‌ಬಿಎಐ) ಮತ್ತು ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಆಫ್ ಇಂಡಿಯಾ (ಎಎಚ್‌ಪಿಐ) ಅಧ್ಯಕ್ಷ ಡಾ. ಅಲೆಕ್ಸ್ ಥಾಮಸ್ ಹೇಳುತ್ತಾರೆ.

ಆಸ್ಪತ್ರೆಗಳಲ್ಲಿ ಕೋವಿಡ್ ಮತ್ತು ಕೋವಿಡ್ ಯೇತರ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಯಿರಬೇಕು. ಇದರಿಂದ ಹೆಚ್ಚು ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಬೇರೆ ಕಾಯಿಲೆಗೆ ವೈದ್ಯರ ಬಳಿ ಜನರು ಭಯವಿಲ್ಲದೆ ಹೋಗಬಹುದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ, ಜನರಿಗೆ ಕೋವಿಡ್-19ನ ವಾಸ್ತವತೆ ಬಗ್ಗೆ ಅರ್ಥವಾಗಬೇಕು ಎನ್ನುತ್ತಾರೆ.

ಈ ವರದಿಯನ್ನು ರಾಜ್ಯ ಯೋಜನಾ ಮಂಡಳಿ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿದ್ದು ಸದ್ಯದಲ್ಲಿಯೇ ಮುಖ್ಯಮಂತ್ರಿಗಳಿಗೂ ಸಲ್ಲಿಸುವ ಯೋಜನೆಯಿದೆ. ಸರ್ಕಾರ ಇದಕ್ಕೆ ಒಪ್ಪಿಗೆ ನೀಡುವ ಭರವಸೆಯಿದೆ ಎಂದು ಮಂಡಳಿ ಉಪಾಧ್ಯಕ್ಷ ಬಿ ಜೆ ಪುಟ್ಟಸ್ವಾಮಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com