ಒಂಟೆ ಸಾಕುವ ವ್ಯಕ್ತಿಯ ಪುತ್ರನಿಗೆ ಕೊರೋನಾ: ಮೈಸೂರು ಅರಮನೆ ಸಂಪೂರ್ಣ ಸ್ಯಾನಿಟೈಸ್

ಮೈಸೂರು ಅರಮನೆಯಲ್ಲಿ ಒಂಟೆ ಸಾಕುವ ವ್ಯಕ್ತಿ ಪುತ್ರನಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಸಂಪೂರ್ಣ ಅರಮನೆಯಲನ್ನು ಸ್ಯಾನಿಟೈಸ್ ಮಾಡಲಾಯಿತು. 

Published: 11th July 2020 12:18 PM  |   Last Updated: 11th July 2020 12:21 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : ANI

ಮೈಸೂರು: ಮೈಸೂರು ಅರಮನೆಯಲ್ಲಿ ಒಂಟೆ ಸಾಕುವ ವ್ಯಕ್ತಿ ಪುತ್ರನಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಸಂಪೂರ್ಣ ಅರಮನೆಯನ್ನು ಸ್ಯಾನಿಟೈಸ್ ಮಾಡಲಾಯಿತು. 

ಅರಮನೆ ಬ್ರಹ್ಮಪುರಿ ದ್ವಾರದ ಬಳಿಯ ಕ್ವಾಟ್ರಸ್ ನಲ್ಲಿ ನೆಲೆಸಿ ಒಂಟೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಪುತ್ರನಿಗೆ ಗುರುವಾರವಷಅಟೇ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. 

ಈ ಹಿನ್ನೆಲೆಯಲ್ಲಿ ಶುಕ್ರವಾರ ಅರಮನೆಯ ಒಳಾಂಗಣದ ಸುತ್ತಮುತ್ತ, ಅರಮನೆ ಆಡಳಿತ ಕಚೇರಿ ಸೇರಿದಂತೆ ಹಲವೆಡೆ ಸೋಂಕು ನಿವಾರಕ ಔಷಧಿ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಯಿತು. 

ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿದಂತೆ ಮೂರು ದಿನ ಅರಮನೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಸೋಮವಾರದಿಂದ ಮರಳಿ ಅವಕಾಶ ಕಲ್ಪಿಸಲಾಗುತ್ತಿದೆ. ಇನ್ನು ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಜನರನ್ನು ಕ್ವಾರಂಟೈನ್ ಮಾಡಿ ಕೊರೋನಾ ಪರೀಕ್ಷೆಗೊಳಪಡಿಸಲಾಗುತ್ತಿದೆ. 

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp