ಕೊರೋನಾ ನಿಯಂತ್ರಿಸಲು 3‘ಸಿ’ಗಳಿಂದ ದೂರ ಇರಿ. 3‘ಡಬ್ಲ್ಯೂ’ಪಾಲಿಸಿ-  ಡಾ. ಕೆ.ಸುಧಾಕರ್ 

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣ ನಿಯಂತ್ರಿಸಲು ಸಾರ್ವಜನಿಕರು 3'ಸಿ'ಗಳಿಂದ ದೂರ ಇರುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್  ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣ ನಿಯಂತ್ರಿಸಲು ಸಾರ್ವಜನಿಕರು 3'ಸಿ'ಗಳಿಂದ ದೂರ ಇರುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್  ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.ಸೂಕ್ತ ಗಾಳಿ ಇಲ್ಲದ ಜಾಗಗಳು, ಜನದಟ್ಟಣೆ ಪ್ರದೇಶ ಮತ್ತು ನಿಕಟ ಸಂಪರ್ಕಗಳಿಂದ  ಆದಷ್ಟು ದೂರ ಇರುವಂತೆ ಅವರು ಸಲಹೆ ನೀಡಿದ್ದಾರೆ.

ಮೂರು ಡಬ್ಲ್ಯೂ ಪಾಲಿಸುವಂತೆಯೂ ಸುಧಾಕರ್ ಸೂಚಿಸಿದ್ದಾರೆ. ಆರು ಅಡಿಗಳಷ್ಟು ಅಂತರ ಕಾಯ್ದುಕೊಳ್ಳಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಿ ಎಂದಿದ್ದಾರೆ. ಸೂಕ್ತ ಮೂಲಸೌಕರ್ಯ ಕಲ್ಪಿಸುವ ಮೂಲಕ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಹವಾಮಾನ ವೈಫರೀತ್ಯದ ಕಾರಣ ಸೋಂಕು ಪ್ರಕರಣ ಹೆಚ್ಚಾಗುತ್ತಿವೆ. ಹವಾಮಾನದಲ್ಲಿ ಬದಲಾವಣೆಯಾದಂತೆ ಇನ್ ಫ್ಲೋಯೆಂಜಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಎಚ್1ಎನ್1 ಕಾಣಿಸಿಕೊಂಡಾಗಲೂ ಇದೇ ರೀತಿ ಪ್ರಕರಣಗಳು ಹೆಚ್ಚಾಗುತ್ತಿದ್ದನ್ನು ನೋವು ಕಂಡಿದ್ದೇವೆ ಎಂದು ನೋಡಲ್ ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com