ಕೋವಿಡ್-19 ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ನನ್ನ ಪ್ರಮುಖ ಆದ್ಯತೆ: ಬಿಬಿಎಂಪಿ ನೂತನ ಆಯುಕ್ತ

ನಗರದಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಮಧ್ಯೆಯೇ ಎನ್ ಮಂಜುನಾಥ್ ಪ್ರಸಾದ್ ಅವರನ್ನು ಬಿಬಿಎಂಪಿಯ ನೂತನ ಆಯುಕ್ತರಾಗಿ ರಾಜ್ಯ ಸರ್ಕಾರ 4ನೇ ಬಾರಿಗೆ ನೇಮಕ ಮಾಡಿದೆ.
ಬಿಬಿಎಂಪಿ ನೂತನ ಆಯುಕ್ತ
ಬಿಬಿಎಂಪಿ ನೂತನ ಆಯುಕ್ತ

ಬೆಂಗಳೂರು: ನಗರದಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಮಧ್ಯೆಯೇ ಎನ್ ಮಂಜುನಾಥ್ ಪ್ರಸಾದ್ ಅವರನ್ನು ಬಿಬಿಎಂಪಿಯ ನೂತನ ಆಯುಕ್ತರಾಗಿ ರಾಜ್ಯ ಸರ್ಕಾರ 4ನೇ ಬಾರಿಗೆ ನೇಮಕ ಮಾಡಿದೆ.

ನಗರವನ್ನು ಶೂನ್ಯ ಕೋವಿಡ್-19 ಸಾವಿನ ನಗರವನ್ನಾಗಿ ಮಾಡಬೇಕೆಂಬುದು ತಮ್ಮ ಗುರಿಯಾಗಿದೆ ಎಂದು ಅವರು ನೂತನವಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ. ಈ ಹಿಂದೆ ಮಂಜುನಾಥ್ ಪ್ರಸಾದ್ ಅವರು ನಗರದ ಆಯುಕ್ತರಾಗಿ ಏಪ್ರಿಲ್ 2016ರಿಂದ ಮೇ 3 2018ರವರೆಗೆ, ಜೂನ್ 26ರ 2018ರಿಂದ ಜುಲೈ 4, 2019ರವರೆಗೆ, ನಂತರ 2019ರ ಜುಲೈ 15ರಿಂದ ಆಗಸ್ಟ್ 28, 2019ರವರೆಗೆ ಬಿಬಿಎಂಪಿ ಆಯುಕ್ತರಾಗಿದ್ದರು.

ಈ ಸಂದರ್ಭದಲ್ಲಿ ನೂತನ ಆಯುಕ್ತರ ಮಂಜುನಾಥ್ ಪ್ರಸಾದ್ ಮತ್ತು ನಿರ್ಗಮಿತ ಆಯುಕ್ತ ಬಿ ಎಚ್ ಅನಿಲ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ಹಲವು ವಿಷಗಳನ್ನು ಹಂಚಿಕೊಂಡಿದ್ದಾರೆ.

ಮತ್ತೆ ಆಯುಕ್ತರಾಗಿ ನೇಮಕಗೊಂಡಿದ್ದೀರಿ, ಏನನ್ನಿಸುತ್ತಿದೆ?
-ನನ್ನ ಪಾಲಿಗೆ ಬಂದಿರುವ ಅದೃಷ್ಟ ಎಂದು ಭಾವಿಸಿ ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಜನಪ್ರತಿನಿಧಿಗಳು ಮತ್ತು ನಾಗರಿಕರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿರುವುದರಿಂದ ಹಿಂದಿನ ಆಯುಕ್ತರು ನಿಲ್ಲಿಸಿ ಹೋದಲ್ಲಿಂದ ಕೆಲಸಗಳನ್ನು ಮುಂದುವರಿಸಲು ಕಷ್ಟವಾಗಲಿಕ್ಕಿಲ್ಲ. ಈ ಕೊರೋನಾ ಸಂಕಷ್ಟದ ಸಮಯದಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಲು ಸಿದ್ದನಾಗಿದ್ದೇನೆ. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಂತಹ ಬದಲಾವಣೆ ಮಾಡಿದ್ದು ಖುಷಿ ತಂದಿತ್ತು. ಸರ್ಕಾರಕ್ಕೆ ಹೇಗೆ ಹೆಚ್ಚಿನ ಆದಾಯ ತರಿಸಬೇಕೆಂದು ಸಲಹೆ ನೀಡುತ್ತಿದ್ದೆವು.ಇದೀಗ ಹೊಸ ಹುದ್ದೆ, ವಿರಾಮಕ್ಕೆ ಸಮಯವಿಲ್ಲ.

ಈ ಸಂದರ್ಭದಲ್ಲಿ ನಿಮ್ಮ ಆದ್ಯತೆಯೇನು?
-ನಗರದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯನ್ನು ತಗ್ಗಿಸುವುದು ನನ್ನ ಉದ್ದೇಶ. ಇದಕ್ಕಾಗಿ ವೇಗವಾಗಿ ತಪಾಸಣೆ, ಅತಿ ಬೇಗ ಪರೀಕ್ಷೆಯ ಫಲಿತಾಂಶ, ತಕ್ಷಣವೇ ರೋಗಿಗಳನ್ನು ಕೋವಿಡ್-19 ಕೇಂದ್ರಗಳು ಅಥವಾ ಆಸ್ಪತ್ರೆಗೆ ಸೇರಿಸುವ ಕೆಲಸವಾಗಬೇಕು. ಬಿಬಿಎಂಪಿಯ ಸರ್ವೇಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕು.

ನಿಮ್ಮ ಹಿಂದಿನ ಆಯುಕ್ತರು ಮಾಡಲಾಗದಿರುವ ಕೆಲಸವನ್ನು ನಿಮ್ಮಿಂದ ಮಾಡಲು ಸಾಧ್ಯವೇ?
-ಸರ್ಕಾರವೊಂದರಿಂದಲೇ ಇದು ಸಾಧ್ಯವಿಲ್ಲ, ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಸಹ ಬೇಕು.

ಭ್ರಷ್ಠಾಚಾರ ಬಿಬಿಎಂಪಿ ವಿರುದ್ಧ ಕೇಳಿಬರುತ್ತಿರುವ ಬಹುದೊಡ್ಡ ಆರೋಪ, ಇದಕ್ಕೆ ಏನನ್ನುತ್ತೀರಿ?
-ಭ್ರಷ್ಟಾಚಾರ ತಡೆಗಟ್ಟಿ ಪಾರದರ್ಶಕತೆ ತರುವುದು ಸವಾಲು. ಹಲವು ಸುಧಾರಣೆಗಳನ್ನು ಪ್ರಸ್ತಾವಿಸಲಾಗಿದ್ದು ಎಲ್ಲಾ ಖರ್ಚುವೆಚ್ಚಗಳನ್ನು ಸಾರ್ವಜನಿಕರಿಗೆ ಬಹಿರಂಗವಾಗಿ ತೋರಿಸುವುದನ್ನು ಆರಂಭಿಸಿದ್ದೇನೆ. ಹಣವನ್ನು ತಮ್ಮ ಸ್ವಂತ ಹಣವನ್ನಾಗಿ ಖರ್ಚು ಮಾಡಿ, ಯಾವುದನ್ನೂ ದುರುಪಯೋಗ ಮಾಡಬೇಡಿ, ದುಂದುವೆಚ್ಚ ಮಾಡಬೇಡಿ ಎಂದು ನಾನು ಅಧಿಕಾರಿಗಳಿಗೆ ಹೇಳುತ್ತೇನೆ.

ನಿಮ್ಮ ವರ್ಗಾವಣೆ ಬಗ್ಗೆ ಹಲವು ಊಹಾಪೋಹಗಳಿವೆಯಲ್ಲವೇ ಎಂದು ಬಿ ಎಚ್ ಅನಿಲ್ ಕುಮಾರ್ ಅವರನ್ನು ಕೇಳಿದಾಗ:
ಇದು ಸರ್ಕಾರದ ನಿರ್ಧಾರ. ಯಾಕೆ ನನ್ನನ್ನು ವರ್ಗ ಮಾಡಲಾಯಿತು ಎಂದು ಚರ್ಚೆ ಮಾಡುವ ಸಮಯ ಇದಲ್ಲ. ಕೊರೋನಾ ಸಂಕಷ್ಟವನ್ನು ಬಗೆಹರಿಸಲು, ನಿಯಂತ್ರಿಸಲು ಆ ಸಂದರ್ಭಕ್ಕೆ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು.

ಹೊಸ ಆಯುಕ್ತರು ತಕ್ಷಣವೇ ಮಾಡಬೇಕಾದ, ಬಗೆಹರಿಸಬೇಕಾದ ಸಮಸ್ಯೆಗಳೇನು?
-ಕೊರೋನಾ ಶಂಕಿತರ ಪರೀಕ್ಷೆ ವೇಗವಾಗಿ ನಡೆದು ಕೊಳಚೆ ಪ್ರದೇಶಗಳು, ಜನನಿಬಿಡ ಪ್ರದೇಶಗಳಲ್ಲಿ ಉತ್ತಮ ಪರೀಕ್ಷಾ ವ್ಯವಸ್ಥೆಯಾಗಬೇಕು. ಐಸೊಲೇಷನ್ ಕೇಂದ್ರಗಳ ಮೇಲೆ ಹೆಚ್ಚಿನ ಗಮನ ಹರಿಸಿ ಕೋವಿಡ್-19 ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ವರ್ಗಾಯಿಸಬೇಕು. ಸಮುದಾಯ ಮತ್ತು ವಾರ್ಡ್ ಹಂತಗಳಲ್ಲಿ ಕೋವಿಡ್-19 ರೋಗಿಗಳನ್ನು ಗಮನಿಸಿ ಪರೀಕ್ಷೆ ವೇಗಗೊಳಿಸಲು ಪ್ರಕ್ರಿಯೆ ನಡೆಯಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com