ಸೋಂಕಿನ ಪ್ರಮಾಣ ಗಣನೀಯ ಹೆಚ್ಚಳ, ಗುಣಮುಖ ಪ್ರಮಾಣ ಇಳಿಕೆ: ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕಕ್ಕೆ ಬಲವರ್ಧನೆ ಅಗತ್ಯ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಗುಣಮುಖರವಾಗುತ್ತಿರುವವರ ಸಂಖ್ಯೆ ಕೂಡ ಇಳಿಕೆಯಾಗುತ್ತಲಿದೆ. ಈ ನಡುವಲ್ಲೇ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಹೆಚ್ಚಾಗುತ್ತಿದ್ದು, ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಬೇಕೆಂದರೆ ರಾಜ್ಯ ಸರ್ಕಾರ ತನ್ನ ಬಲವರ್ಧನೆಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗಿದೆ.   
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಗುಣಮುಖರವಾಗುತ್ತಿರುವವರ ಸಂಖ್ಯೆ ಕೂಡ ಇಳಿಕೆಯಾಗುತ್ತಲಿದೆ. ಈ ನಡುವಲ್ಲೇ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಹೆಚ್ಚಾಗುತ್ತಿದ್ದು, ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಬೇಕೆಂದರೆ ರಾಜ್ಯ ಸರ್ಕಾರ ತನ್ನ ಬಲವರ್ಧನೆಯನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗಿದೆ. 

ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳೆರಡರಲ್ಲೂ ಆರೋಗ್ಯ ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಂಜೂರಾಗಿರುವ 58,961 ಹುದ್ದೆಗಳ ಪೈಕಿ 26,265 ಹುದ್ದೆಗಳು ಖಾಲಿಯಿವೆ ಎಂದು ತಿಳಿಸಿದೆ. 

ಜಿಲ್ಲಾ ಆಸ್ಪತ್ರೆಗಳಲ್ಲಿ 3,227 ಹುದ್ದೆಗಳು, ತಾಲ್ಲೂಕು ಆಸ್ಪತ್ರೆಗಳು 5,853, ಸಮುದಾಯ ಆರೋಗ್ಯ ಕೇಂದ್ರಗಳು 4,061, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು 11,854 ಹುದ್ದೆಗಳು ಖಾಲಿಯಿವೆ. 

ಗ್ರೂಪ್ ಸಿ (10,025) ಮತ್ತು ಗ್ರೂಪ್ ಡಿ (12,054 ಖಾಲಿ ಹುದ್ದೆಗಳು) ಸಿಬ್ಬಂದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಉಳಿದಿರುವುದು ಕಂಡು ಬಂದಿದೆ. ಇದರಲ್ಲಿ ಲ್ಯಾಬ್ ತಂತ್ರಜ್ಞರು, ಶುಶ್ರೂಷಕರು, ಅರೆವೈದ್ಯರು, ಫಾರ್ಮಸಿಸ್ಟ್'ಗಳು, ಕ್ಲೆರಿಕಲ್ ಸಿಬ್ಬಂದಿ, ದ್ವಾರಪಾಲಕರು, ಸೇವಕರು ಮತ್ತು ಆಂಬ್ಯುಲೆನ್ಸ್ ಚಾಲಕ ಹುದ್ದೆಗಳಿವೆ ಎನ್ನಲಾಗಿದೆ. 

ಕೊರೋನಾ ಸಾಂಕ್ರಾಮಿಕ ರೋಗ ಆರಂಭಕ್ಕೂ ಮುನ್ನವೂ ಈ ಹುದ್ದೆಗಳು ಖಾಲಿಯೇ ಉಳಿದಿತ್ತು. ಆದರೀಗ, ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹುದ್ದೆಗಳಿಗೆ ಬರಲು ಜನರು ಹೆದರುತ್ತಿದ್ದಾರೆ. ಇರವವರೂ ಕೂಡ ರಾಜೀನಾಮೆ ನೀಡಲು ಮುಂದಾಗುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ, ಆರೋಗ್ಯ ಸಿಬ್ಬಂದಿಗಳ ಕೊರತೆ ಎದುರಾಗಿದೆ. ದಂತವೈದ್ಯರು ಹಾಗೂ ಆಯುರ್ವೇದ ವೈದ್ಯರು ಕೈಜೋಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿದವೆ. ಇಲಾಖೆ ವೈದ್ಯರು, ನರ್ಸ್ ಗಳಿಗಾಗಿ ಹಾಗೂ ಲ್ಯಾಬ್ ಟೆಕ್ನಿಷಿಯನ್ಸ್ ಗಳ ನೇಮಕಕ್ಕೆ ಜಾಹೀರಾತು ನೀಡುತ್ತಿದ್ದರೂ, ಯಾರೊಬ್ಬರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನಲಾಗಿದೆ. 

ಜುಲೈ.5ರವರೆಗೂ ಸೋಂಕಿತರ ಪ್ರಮಾಣ ಶೇ.3.32ರಕಿಂದ ಜುಲೈ.19ಕ್ಕೆ ಶೇ.6.24ಕ್ಕೆ ಏಿಕೆಯಾಗಿದೆ. ಶೇ.41.94ರಷ್ಟಿದ್ದ ಗುಣಮುಖರಾದವರ ಪ್ರಮಾಣ ಇದೀಗ 36.16ಕ್ಕೆ ಇಳಿದಿದೆ. ಸಾವಿನ ಪ್ರಮಾಣ ಸೇ.2.08ಕ್ಕೆ ತಲುಪಿದೆ. 

ಮಾರ್ಚ್ 8ರಂದು ರಾಜ್ಯದಲ್ಲಿ ಮೊದಲ ಕೊರೋನಾ ಪ್ರಕರಣ ವರದಿಯಾಗಿದ್ದು, ಮೇ.12ರವರೆಗೆ ಅಂತರೆ ಕೇವಲ 65 ದಿನಗಳಲ್ಲಿ ಸೋಂಕಿತರ ಸಂಖ್ಯೆ 1,000ಕ್ಕೆ ತಲುಪಿತ್ತು. 

ಇದೀಗ ಅಂದರೆ, ಜುಲೈ.19ರ ವೇಳೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63,772ಕ್ಕೆ ತಲುಪಿದ್ದು, ಸೋಂಕಿತರ ಸಂಖ್ಯೆ ಇದೀಗ ಶೇ.7-8ಕ್ಕೆ ಏರಿಕೆಯಾಗಿದೆ. 

ಬೆಂಗಳೂರಿನ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಮಾತನಾಡಿ, ವೃದ್ಧರಲ್ಲಿ ಕೊರೋನಾ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 50-55 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕೋವಿಡ್ ವಾರ್ಡ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿಲ್ಲ ಎಂದಿದ್ದಾರೆ. 

ಜಿಲ್ಲಾ ಆಸ್ಪತ್ರಗಳಲ್ಲಿ ಗ್ರೂಪ್ ಎ ವರ್ಗಕ್ಕೆ ಬರುವ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, 3,597 ಹುದ್ದೆಗಳು ಈ ಕ್ಷೇತ್ರದಲ್ಲಿವೆ. ಇನ್ನೂ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಅಡಿಯಲ್ಲಿ ಸಿಬ್ಬಂದಿ ಕೊರತೆ ಸರ್ಕಾರ ಸ್ಥಾಪನೆಗೆ ಮಾತ್ರ ಮೀಸಲಾಗಿಲ್ಲ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘದ ಅಧ್ಯಕ್ಷ ಡಾ.ಆರ್.ರವೀಂದ್ರ ಮಾತನಾಡಿ, ಸಣ್ಣ ಆಸ್ಪತ್ರೆಗಳಲ್ಲಿ ನರ್ಸ್'ಗಳು, ವಾರ್ಡ್ ಬಾಯ್ ಗಳು ಮತ್ತು ಅಯಾಗಳ ಕೊರತೆಯು ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. ಮಧ್ಯಮ ಹಾಗೂ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೂ ಶೇ.50ರಷ್ಟು ಸಿಬ್ಬಂದಿಗಳ ಕೊರತೆಯಿದೆ. ವೇತನವನ್ನು ದುಪ್ಪಟ್ಟು ಮಾಡಿದರೂ, ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com