ಮೈಸೂರು: ಗ್ರಾಮ ತೊರೆಯುವಂತೆ ನೋಟಿಸ್; 41 ರೈತ ಕುಟುಂಬಗಳಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

41 ರೈತ ಕುಟುಂಬಗಳಿಗೆ ಗ್ರಾಮ ತೊರೆಯುವಂತೆ ಸರ್ಕಾರ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ರೈತರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: 41 ರೈತ ಕುಟುಂಬಗಳಿಗೆ ಗ್ರಾಮ ತೊರೆಯುವಂತೆ ಸರ್ಕಾರ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ರೈತರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. 

ತಲೆಮಾರುಗಳಿಂದ ವಾಸಿಸುತ್ತಿರುವ ಹಳ್ಳಿಗಳಲ್ಲಿ ಸುಮಾರು 41 ರೈತ ಕುಟುಂಬಗಳು ವಾಸವಿದ್ದು, ಮನೆಗಳನ್ನು ಖಾಲಿ ಮಾಡಿ ಗ್ರಾಮ ತೊರೆಯುವಂತೆ ರೈತರಿಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸೂಚನೆ ನೀಡಿದೆ. ಕೇವಲ ರೈತ ಕುಟುಂಬಗಳಷ್ಟೇ ಅಲ್ಲದೆ, 100 ವರ್ಷಗಳ ಹಳೆಯದಾದ ಶ್ರೀ ಶ್ರೀ ಗುರುಕಂಬಳೇಶ್ವರ ವೀರಶೈವ ಮಠ ಮಠ ಹಾಗೂ ಭಕ್ತರಿಗೂ ನೋಟಿಸ್ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ. 

2005-06ರಲ್ಲಿ ತಂಜಪುರ ಮತ್ತು ಅದಂಜಲನಹಳ್ಳಿಯನ್ನು ಅತಿದೊಡ್ಡ ಕೈಗಾರಿಕಾ ಪ್ರದೇಶಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದರಂತೆ ಈ ಪ್ರಕ್ರಿಯೆಗಳು ಪ್ರಾರಂಭವಾದಾಗ, ಗ್ರಾಮಸ್ಥರು ಇದನ್ನು ತೀವ್ರವಾಗಿ ವಿರೋಧಿಸಿ ಕಾನೂನು ಹೋರಾಟ ಕೈಗೊಂಡಿದ್ದರು. 

ಆದರೆ, ಈ ಕುರಿತು ಅರ್ಜಿಗಳು ವಿಚಾರಣಾ ಹಂತಕ್ಕೆ ಬಾರದ ಕಾರಣ ಸರ್ಕಾರ ಭೂಸ್ವಾಧೀನ ಪ್ರಸ್ತಾಪವನ್ನು ಕೈಬಿಟ್ಟಿದೆ ಎಂದು ರೈತರು ಭಾವಿಸಿದ್ದರು. ಆದರೆ, ಇದೀಗ ಸರ್ಕಾರ ಮತ್ತೆ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಇದೀಗ ರೈತರಿಗೆ ನೋಟಿಸ್ ಜಾರಿ ಮಾಡಿದೆ. 

ಇದೀಗ ಭೂಮಿ ಕಳೆದುಕೊಂಡರೆ, ನಮಗೆ ಬದಕಲು ಯಾವುದೇ ಆಧಾರವಿಲ್ಲ ಎಂದು ಹೇಳುತ್ತಿರುವ ರೈತರು, ಸಾಮೂಹಿಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. 

ತಮ್ಮ ಭೂಮಿ ಉಳಿಸಿಕೊಳ್ಳಲು ಇದೀಗ ರೈತರು ಸರ್ಕಾರಿ ಕಚೇರಿಯಿಂದ ಕಚೇರಿಗೆ ಓಡಾಡಿ ಸುಸ್ತಾಗಿದ್ದು, ಇದೀಗ ವಿಪಕ್ಷಗಳ ನಾಯಕರ ಮನೆಗಳ ಬಾಗಿಲು ಬಡಿಯಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ರೈತ ಸಂಘದ ಹೋರಾಟಗಾರರು ಸರ್ಕಾರ ನಿರ್ಧಾರಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದು, ಈಗಾಗಲೇ  ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಅಭಿಯಾನ ಆರಂಭಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೋರಾಟಗಾರರು ಇದೀಗ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಕೃಷಿ ಭೂಮಿ ಮಾರಾಟಕ್ಕಿಲ್ಲ ಎಂಬ ಫಲಕ ಹಾಕುತ್ತಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ಬರುವ ಅಧಿಕಾರಿಗಳನ್ನು ಬಂಧಿಸಿ ಗ್ರಾಮ ಬಿಡುವಂತೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com