ಮಂಗಳೂರಲ್ಲಿ ಗ್ಯಾಂಗ್ ವಾರ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ!

ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದ ಪರಿಣಾಮ ಒಬ್ಬ ವ್ಯಕ್ತಿಯ ಕೊಲೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದ ಪರಿಣಾಮ ಒಬ್ಬ ವ್ಯಕ್ತಿಯ ಕೊಲೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದಿದೆ. 

ಮೇ 31 ರ ಭಾನುವಾರ ರಾತ್ರಿ, ಕಟೀಲು, ಯೆಕ್ಕಾರು ಸಮೀಪದ ಬಜ್ಪೆಯ ಅರಸುಗುದ್ದೆಯಲ್ಲಿ ಎರಡು ಗುಂಪುಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದೆ.  ಈ ಸಂದರ್ಭದಲ್ಲಿ ಇಲ್ಲಿನ ಮರಕದ ಮೂಲದ ಕೀರ್ತನ್ (20) ಎಂಬಾತ ಕೊಲೆಯಾಗಿದ್ದಾನೆ, ಅಲ್ಲದೆ ಕೀರ್ತನ್ ಸಹಚರ  ನಿತಿನ್ (20) ಮತ್ತುಮನೇಶ್ (20) ಎನ್ನುವವರಿಗೆ ಗಂಭೀರ ಗಾಯಗಳಾಗಿದೆ.

ಮರಳು ಗಣಿಗಾರಿಕೆಯ ವಿಷಯದಲ್ಲಿ ಈ ಮುನ್ನ ಇದ್ದ ದ್ವೇಷ ಈ ಜಗಳ ಹಾಗೂ ಕೊಲೆಯ ಹಿಂದಿನ ಕಾರಣ ಎನ್ನಲಾಗಿದೆ. ಕೊಲೆ ಮಾಡಿದೆ ಎನ್ನಲಾದ ಗುಂಪು ಮತ್ತು ಕೀರ್ತನ್ ಮತ್ತು ಅವನ ಗಾಯಗೊಂಡ ಸ್ನೇಹಿತರು ಈ ಹಿಂದೆ ಒಟ್ಟಿಗೆ  ಇದ್ದು ಆಪ್ತ ಸ್ನೇಹಿತರಾಗಿದ್ದರು. ಇತ್ತೀಚಿನ ದಿನಗಳಲ್ಲಿ, ಕೆಲವು ಸಮಸ್ಯೆ ಉದ್ಭವಿಸಿದ್ದ ಕಾರಣ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ಕೀರ್ತನ್, ನಿತಿನ್, ಮತ್ತು ಮನೇಶ್ ಭಾನುವಾರ ರಾತ್ರಿ ಬಜ್ಪೆ  ಅರಸುಗುದ್ದೆಯಲ್ಲಿ ಒಟ್ಟಿಗೆ ಸೇರಿದ್ದರು. ಅವರು ಅಲ್ಲಿಗೆ ತಮ್ಮ ಎದುರಾಳಿ ಗುಂಪಿನವರನ್ನೂ ಕರೆದಿದ್ದರು ಎನ್ನಲಾಗಿದೆ. ಎದುರಾಳಿ ಗುಂಪು ಅಲ್ಲಿಗೆ ಬಂದ ನಂತರ, ಎರಡೂ ಗುಂಪುಗಳ ನಡುವೆ ಜಗಳ ಪ್ರಾರಂಭವಾಗಿದ್ದು  ಪ್ರತಿಸ್ಪರ್ಧಿ ಗ್ಯಾಂಗ್ ಕೀರ್ತನ್ ಮತ್ತು ಅವನ ಅನುಯಾಯಿಗಳನ್ನು ಕಠಾರಿಗಳಿಂದ ಹಿಡೆದಿದೆ. ಈ ವೇಳೆ ಗಂಭೀರ ಗಾಯಗಳಾಗಿದ್ದ ಕೀರ್ತನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು  ಆಸ್ಪತ್ರೆಗೆ ದಾಖಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮತ್ತು ತನಿಖೆ ನಡೆಸಿದ್ದಾರೆ. ಬಜ್ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಕಾರ್ಯ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com