ಬೆಂಗಳೂರು: ಕೆಲಸಕ್ಕೆ ಬಾರದಂತಾಗಿದೆ 88 ಲಕ್ಷ ರೂ. ಬೆಲೆಯ ಐಷಾರಾಮಿ ಕಾರು!

ರಸ್ತೆ ತೆರಿಗೆ 20 ಲಕ್ಷ ರೂ. ಪಾವತಿಸದೇ ರಾಜಾರೋಷವಾಗಿ ಸಂಚರಿಸುತ್ತಿದ್ದ ಐಷಾರಾಮಿ ಬೆನ್ಜ್ ಕಾರೊಂದನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಶಕ್ಕೆ ಪಡೆದ ಕಾರು
ವಶಕ್ಕೆ ಪಡೆದ ಕಾರು

ಬೆಂಗಳೂರು: ರಸ್ತೆ ತೆರಿಗೆ 20 ಲಕ್ಷ ರೂ. ಪಾವತಿಸದೇ ರಾಜಾರೋಷವಾಗಿ ಸಂಚರಿಸುತ್ತಿದ್ದ ಐಷಾರಾಮಿ ಬೆನ್ಜ್ ಕಾರೊಂದನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ನಿಯಮಾನುಸಾರ ಐಷಾರಾಮಿ ಕಾರುಗಳನ್ನು ಖರೀದಿಸಿದಾಗ ರಸ್ತೆ ತೆರಿಗೆ ಕಟ್ಟುವುದು ಕಡ್ಡಾಯವಾಗಿರುತ್ತದೆ. ಆದರೂ, 20 ಲಕ್ಷ ರೂ. ತೆರಿಗೆ ಹಣ ಕಟ್ಟದಿರುವುದರಿಂದ ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವ್ಯಕ್ತಿಯೋರ್ವನು 2019ರ ಜೂನ್‍ ತಿಂಗಳಿನಲ್ಲಿ 88 ಲಕ್ಷ ರೂ. ಮೌಲ್ಯದ ಐಷಾರಾಮಿ ಬೆನ್ಜ್ ಕಾರೊಂದನ್ನು ಖರೀದಿಸಿದ್ದನು. ತಾತ್ಕಾಲಿಕ ಕಾರಿಗೆ ರಿಜಿಸ್ಟರ್ ನಂಬರ್ ಕೆಎ-05 ಟಿಎಂಪಿ-9861 ನೀಡಲಾಗಿತ್ತು. ಕಾರು ಬಿಎಸ್-4 ಆಗಿದ್ದು, ಇದೇ ವರ್ಷ ಏಪ್ರಿಲ್ 30ರಂದು ರಿಜಿಸ್ಟರ್ ಅಂತ್ಯವಾಗಿದೆ.

ಹೀಗಿದ್ದರೂ, ಮಾಲೀಕ ಇದುವರೆಗೂ 20 ಲಕ್ಷ ರೂ. ರಸ್ತೆ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಯಶವಂತಪುರ ಹಿರಿಯ ಮೋಟಾರು ವಾಹನ ತನಿಖಾಧಿಕಾರಿಗಳಾದ ರಾಜಣ್ಣ ಎಚ್ ಮತ್ತು ಎಂ.ಎನ್.ಸುಧಾಕರ್ ಅವರು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಿಎಸ್-4 ವೆಹಿಕಲ್‍ಗಳ ರಿಜಿಸ್ಟ್ರೇಷನ್ ಸ್ಥಗಿತಗೊಂಡಿದ್ದು, ಇದೀಗ 88 ಲಕ್ಷ ರೂ. ನೀಡಿ ಖರೀದಿಸಿದ ದುಬಾರಿ ಬೆಂಜ್ ಕಾರು ಕೆಲಸಕ್ಕೆ ಬಾರದಂತಾಗಿದೆ. ಹೀಗಾಗಿ ಕಾರು ಮಾಲೀಕ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com