ನಾಳೆಯಿಂದ ಹೋಟೆಲ್, ಮಾಲ್ ಓಪನ್: ಕೊರೋನಾ ಹಾಟ್'ಸ್ಪಾಟ್ ರಾಜ್ಯಗಳ ಸಿಬ್ಬಂದಿಗಿಲ್ಲ ಅವಕಾಶ

ಕೊರೋನಾ ವೈರಸ್ ಲಾಕ್'ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿರುವ ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಸೋಮವಾರದಿಂದ ಪುನರಾರಂಭಗೊಳ್ಳುತ್ತಿದ್ದು, ಕೊರೋನಾ ಹಾಟ್'ಸ್ಪಾಟ್ ಎನಿಸಿಕೊಂಡಿರುವ ರಾಜ್ಯಗಳ ಮೂಲದ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದೇ ಇರುವುದು ಇದೀಗ ಹೊಸ ವಿವಾದವೊಂದನ್ನು ಸೃಷ್ಟಿ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಲಾಕ್'ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿರುವ ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಸೋಮವಾರದಿಂದ ಪುನರಾರಂಭಗೊಳ್ಳುತ್ತಿದ್ದು, ಕೊರೋನಾ ಹಾಟ್'ಸ್ಪಾಟ್ ಎನಿಸಿಕೊಂಡಿರುವ ರಾಜ್ಯಗಳ ಮೂಲದ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದೇ ಇರುವುದು ಇದೀಗ ಹೊಸ ವಿವಾದವೊಂದನ್ನು ಸೃಷ್ಟಿ ಮಾಡಿದೆ. 

ಮಹಾರಾಷ್ಟ್ರ, ತಮಿಳುನಾಡು, ರಾಜಸ್ತಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸೋಂಕು ಪ್ರಕರಣ ಹೆಚ್ಚಾಗಿ ಕಂಡು ಬಂದಿದ್ದು, ಈ ರಾಜ್ಯಗಳನ್ನು ಕೊರೋನಾ ಹಾಟ್'ಸ್ಪಾಟ್ ರಾಜ್ಯಗಳೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ 50,000ಕ್ಕೂ ದರ್ಶಿನಿಗಳು ಸೇರಿದಂತೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿದ್ದು, ಬೆಂಗಳೂರು ನಗರವೊಂದಲ್ಲಿಯೇ 15,000 ಹೋಟೆಲ್ ಗಳಿವೆ. ಈ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಕೊರೋನಾ ಹಾಟ್'ಸ್ಪಾಟ್ ರಾಜ್ಯಗಳಿಂದ ಬಂದ ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಕೆಲ ವಿರೋಧಗಳು ವ್ಯಕ್ತವಾಗುವ ಸಾಧ್ಯತೆಗಳಿವೆ. 

ಕರ್ನಾಟಕ ಹೋಟೆಲ್ ಗಳ ಸಂಘಟ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಮಾತನಾಡಿ, ಕೊರೋನಾ ಹಾಟ್ಸ್ಪಾಟ್ ಎನಿಸಿಕೊಂಡಿರುವ ರಾಜ್ಯಗಳಿಂದ ಬಂದವನ್ನು ಉದ್ಯೋಗಕ್ಕೆ ಸೇರ್ಪಡೆಗೊಳಿಸಿಕೊಳ್ಳದಂತೆ ನೋಡಿಕೊಳ್ಳಬೇಕಿದ್ದು, ಕೊರೋನಾ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಅಪಾಯವನ್ನು ತಲೆಮೇಲೆ ಎಳೆದುಕೊಳ್ಳುವುದು ನಮಗಿಷ್ಟವಿಲ್ಲ. ಯಾವುದೇ ವ್ಯಕ್ತಿ ಕೆಲಸಕ್ಕೆ ಸೇರ್ಪಡೆಗೊಳ್ಳಲು ಬಂದಾಗ ಆತನ ಟ್ರಾವೆಲ್ ಹಿಸ್ಟರಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ. 

ಹೋಟೆಲ್ ಮಾಲೀಕರೊಬ್ಬರು ಮಾತನಾಡಿ, ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಿಗೆ ಬರುವ ಬಹುತೇಕ ಜನರು ಗುಜರಾತ್, ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯದ ಮೂಲದವರು ಮಾಡುವ ಅಡುಗೆಗಳನ್ನು ಇಷ್ಟಪಡುತ್ತಾರೆ. ಈ ವಿಚಾರ ತಿಳಿದರೆ, ಗ್ರಾಹಕರು ನಮ್ಮ ಹೋಟೆಲ್ ಗಳಿಗೆ ಬರುವುದಿಲ್ಲ. ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತೇವೆಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ನಡುವೆ ಲಾಕ್ಡೌನ್ ನಿಂದ ತಾತ್ಕಾಲಿಕವಾಗಿ ಬಂದ್ ಆಗಿದ್ದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನರಾರಂಭಿಸಲು ಎದುರಾದ ಕೆಲವು ತೊಡಗುಗಳ ನಿವಾರಣೆಗಾಗಿ ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಬೆ ನಡೆಸಿದ್ದು, ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಜಂಗಲ್ ಲಾಡ್ಜ್ ಸೇರಿದಂತೆ ಎಲ್ಲಾ ಆತಿಥ್ಯ ಕೇಂದ್ರಗಳನ್ನು ಅವಕಾಶ ಕಲ್ಪಿಸಿ, ಎಲ್ಲೆಡೆ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಸಭೆಯಲ್ಲಿ ಭಾಗವಿಸಿದ್ದ ಹೋಟೆಲ್, ರೆಸ್ಟೋರೆಂಟ್, ಬಸ್, ಟ್ಯಾಕ್ಸಿ ಮಾಲೀಕರ ಸಂಘಟನೆಗಳ ನಿಯೋಗದ ಪ್ರತಿನಿಧಿಗಳು ಸರ್ಕಾರಗ ಮಾರ್ಗಸೂಚಿ ಪಾಲಿಸುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com