7ನೇ ತರಗತಿವರೆಗೆ ಆನ್'ಲೈನ್ ತರಗತಿ ನಿರ್ಬಂಧ: ಸಚಿವರಲ್ಲೇ ಗೊಂದಲ

7ನೇ ತರಗತಿವರೆಗೆ ಆನ್'ಲೈನ್ ತರಗತಿ ನಿರ್ಬಂಧಿಸುವ ಕುರಿತು ಸರ್ಕಾರದ ಮಟ್ಟದಲ್ಲಿಯೇ ಗೊಂದಲವುಂಟಾಗಿ ನಂತರ ಸಚಿವರು ಅದಕ್ಕೆ ಸಮಜಾಯಿಷಿಯನ್ನೂ ನೀಡುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಕಂಗಾಲಾಗುವಂತೆ ಮಾಡಿದ ಪ್ರಸಂಗ ನಡೆದಿದೆ. 
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: 7ನೇ ತರಗತಿವರೆಗೆ ಆನ್'ಲೈನ್ ತರಗತಿ ನಿರ್ಬಂಧಿಸುವ ಕುರಿತು ಸರ್ಕಾರದ ಮಟ್ಟದಲ್ಲಿಯೇ ಗೊಂದಲವುಂಟಾಗಿ ನಂತರ ಸಚಿವರು ಅದಕ್ಕೆ ಸಮಜಾಯಿಷಿಯನ್ನೂ ನೀಡುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಕಂಗಾಲಾಗುವಂತೆ ಮಾಡಿದ ಪ್ರಸಂಗ ನಡೆದಿದೆ. 

ಸಚಿವ ಸಂಪುಟ ಸಭೆಯಲ್ಲಿ 7ನೇ ತರಗತಿವರೆಗೆ ಆನ್'ಲೈನ್ ತರಗತಿ ನಡೆಸದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ಮಧ್ಯಾಹ್ನ ಹೇಳಿಕೆ ನೀಡಿದ್ದರು. 

ಆದರೆ, ಅಂತಹ ಯಾವುದೇ ತೀರ್ಮಾನ ಕೈಗೊಂಂಡಿಲ್ಲ ಕೇವಲ ಸಲಹೆ ವ್ಯಕ್ತವಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಲಷ್ಟನೆ ಕೊಟ್ಟರು. 

ಬಳಿಕ ಮಾಧುಸ್ವಾಮಿ ಅವರೂ ಈ ರೀತಿ ನಿರ್ಧಾರ ಕೈಗೊಂಡಿಲ್ಲ ಎಂದು ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದರು. ಇದರಿಂದಾಗಿ ಕೆಲಕಾಲ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com