ಖಾಸಗಿ ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್, ಸ್ವ್ಯಾಬ್ ಸಂಗ್ರಹ ಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ

ಕೊರೋನಾ ವೈರಸ್ ತಡೆಗೆ ನಗರದ 66 ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದ ಕ್ಲಿನಿಕ್ ಗಳು ಮತ್ತು ಸ್ವ್ಯಾಬ್ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರವೊಂದರಲ್ಲಿರುವ ಫೀವರ್ ಕ್ಲಿನಿಕ್
ಬೆಂಗಳೂರು ನಗರವೊಂದರಲ್ಲಿರುವ ಫೀವರ್ ಕ್ಲಿನಿಕ್

ಬೆಂಗಳೂರು: ಕೊರೋನಾ ವೈರಸ್ ತಡೆಗೆ ನಗರದ 66 ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದ ಕ್ಲಿನಿಕ್ ಗಳು ಮತ್ತು ಸ್ವ್ಯಾಬ್ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೊರೋನಾ ಲಕ್ಷಣವಿರುವವರು(ILI) ಮತ್ತು ತೀವ್ರ ಉಸಿರಾಟದ ತೊಂದರೆಯಿರುವವರ(SARI) ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜ್ವರದ ಕ್ಲಿನಿಕ್ ಮತ್ತು ಸ್ವ್ಯಾಬ್ ಸಂಗ್ರಹ ಕೇಂದ್ರಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಳ ಮಾಡುವಂತೆ ಸರ್ಕಾರ ಆದೇಶಿಸಿದೆ.ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದ ಕೇಂದ್ರಗಳು ಮತ್ತು ಸ್ವ್ಯಾಬ್ ಸಂಗ್ರಹ ಕೇಂದ್ರಗಳನ್ನು ತೆರೆಯಲು ಸರ್ಕಾರ ಸೂಚಿಸಿದೆ ಎಂದು ಖಾಸಗಿ ಆಸ್ಪತ್ರೆಗಳು ತಿಳಿಸಿವೆ.

ಕೋವಿಡ್-19 ಶಂಕಿತರನ್ನು  ಪತ್ತೆಹಚ್ಚಲು ರಾಜ್ಯ ಸರ್ಕಾರದ ಪರೀಕ್ಷೆ ನಿಯಮ ಪ್ರಕಾರ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗುವುದು. ಫೀವರ್ ಕ್ಲಿನಿಕ್ ಮತ್ತು ಸ್ವ್ಯಾಬ್ ಸಂಗ್ರಹ ಕೇಂದ್ರಗಳಿಗೆ ಸಾಫ್ಟ್ ವೇರ್ ಅಪ್ಲಿಕೇಷನ್ ಗಳನ್ನು ಬಳಸಿ ಸರ್ಕಾರ ಗುರುತುಪಡಿಸಿದ ಪ್ರಯೋಗಾಲಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಖಾಸಗಿ ಆಸ್ಪತ್ರೆಗಳು ಪ್ರಯೋಗಕ್ಕೆ ಒಪಿಡಿ ಶುಲ್ಕ ದರವನ್ನು ಮತ್ತು ಸ್ವ್ಯಾಬ್ ಪರೀಕ್ಷೆಗೆ ಗರಿಷ್ಠ 350 ರೂಪಾಯಿ ದರ ವಿಧಿಸುತ್ತದೆ. ಸರ್ಕಾರದ ಖರ್ಚಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ದೇಶದಲ್ಲಿಯೇ ಫೀವರ್ ಕ್ಲಿನಿಕ್ ಗಳನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

ಕರ್ನಾಟದಲ್ಲಿ ಈಗ ಪ್ರತಿನಿತ್ಯ 10 ಸಾವಿರ ರೋಗಿಗಳವರೆಗೆ ಕೊರೋನಾ ಪರೀಕ್ಷೆ ಮಾಡುವ ಸಾಮರ್ಥ್ಯವಿದೆ. ರಾಜ್ಯದಲ್ಲಿ 600ಕ್ಕೂ ಹೆಚ್ಚು ಫೀವರ್ ಕ್ಲಿನಿಕ್ ಮತ್ತು 1,172 ಸ್ವ್ಯಾಬ್ ಸಂಗ್ರಹ ಕೇಂದ್ರಗಳಿದ್ದು ಬೆಂಗಳೂರು ನಗರವೊಂದರಲ್ಲಿಯೇ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಫೀವರ್ ಕ್ಲಿನಿಕ್ ಗಳಾಗಿ ಪರಿವರ್ತಿಸಲಾಗಿದೆ. ಈಗಾಗಲೇ 52 ಸರ್ಕಾರದ ಫೀವರ್ ಕ್ಲಿನಿಕ್ ಮತ್ತು ಸ್ವ್ಯಾಬ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com