ಬಳ್ಳಾರಿ: ಕೊರೋನಾ ಸೋಂಕಿತ ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ ವೇಳೆ ಅಮಾನವೀಯತೆ; ವಿಡಿಯೋ ವೈರಲ್

ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಸಂತ್ರಸ್ಥರ ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ ವೇಳೆ ಅಮಾನವೀಯತೆ ಮೆರೆದಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Published: 30th June 2020 01:08 PM  |   Last Updated: 30th June 2020 02:52 PM   |  A+A-


Mass Grave for Coronavirus Victims

ಕೊರೋನಾ ಸೋಂಕಿತರ ಶವಗಳ ವಿಲೇವಾರಿ ವಿಡಿಯೋ

Posted By : Srinivasamurthy VN
Source : Online Desk

ಹೊಸಪೇಟೆ: ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಸಂತ್ರಸ್ಥರ ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ ವೇಳೆ ಅಮಾನವೀಯತೆ ಮೆರೆದಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೌದು..  ಬಳ್ಳಾರಿಯಲ್ಲಿ ನಿನ್ನೆ ಒಂದೇ ದಿನ ಕೊರೊನಾದಿಂದ 9 ಮಂದಿ ಸೋಂಕಿತರು ಮೃತ ಪಟ್ಟಿದ್ದರು. ಈ ಮದ್ಯೆ ನಿನ್ನೆ ಜಿಲ್ಲಾಡಳಿತ ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರ  ನೆರವೇರಿಸಿದೆ. ಈ ಸಂಬಂಧ ಶವಸಂಸ್ಕಾರದ ವಿಡಿಯೋ ಒಂದು ಹರಿದಾಡುತ್ತಿದ್ದು. ಮೃತದೇಹಗಳನ್ನು ಗುಂಡಿಯಲ್ಲಿ ಎಸೆಯುತ್ತಿರುವ ಭಯಾನಕ ದೃಶ್ಯಾವಳಿಗಳು ಎಂತಹವರನ್ನೂ ಬೆಚ್ಚಿ ಬೀಳಿಸುತ್ತವೆ. 

ಮನುಷ್ಯನ ಜೀವನ ಇಷ್ಟೇನಾ ಎನ್ನುವ ಭಾವನೆ ಬರುವಂತೆ ದೊಡ್ಡ ದೊಡ್ಡ ಗುಂಡಿಗಳಿಗೆ ಮೃತದೇಹಗಳನ್ನು ವಸ್ತುಗಳನ್ನು ಎಸೆಯುವಂತೆ ಎಸೆದಾಡಲಾದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. 

ಕೊರೊನಾ ಭೀತಿಯಿಂದ ಸಹ ಶಾವಸಂಸ್ಕಾರವನ್ನು ಹೀಗೆ ಅವಸರ ಅವಸರವಾಗಿ ಗುಂಡಿ ಬೀಸಾಡಿ ಹೋಗುತ್ತಿರುವ ವಿಡಿಯೋ ಇದೀಗ ಎಂಥವರ ಎದೆಯನ್ನೂ ಝಲ್ಲೆನಿಸುತ್ತಿವೆ. ಕನಿಷ್ಟಪಕ್ಷ ಶವಗಳಿಗೆ ಗೌರವ ಕೊಡದೆ ಗುಂಪಾಗಿ ಬಿಸಾಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿರುವಂತೆಯೇ ಜನಸಾಮಾನ್ಯರು ಬಳ್ಳಾರಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.  

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp