ಸಾಮಾಜಿಕ ಅಂತರ ಪಾಲನೆಗೆ ಆಸ್ಪತ್ರೆಯ ಹೊಸ ಐಡಿಯಾ: ಕಾರಿನಲ್ಲೇ ಕುಳ್ಳಿರಿಸಿ ರಕ್ತದ ಮಾದರಿ ಸಂಗ್ರಹಿಸುವ ಆರೋಗ್ಯ ಸಿಬ್ಬಂದಿ!

ನಗರದ ಆಸ್ಪತ್ರೆಯೊಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನುಅನುಷ್ಠಾನಕ್ಕೆ ತಂದಿದೆ. ಆರೋಗ್ಯ ಸಿಬ್ಬಂದಿ ಕಾರಿನಲ್ಲಿ ಕುಳಿತು ರೋಗಿಯಿಂದ ರಕ್ತದ ಮಾದರಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದೆ. ಸರ್ಜಾಪುರ ಮತ್ತು ವೈಟ್ ಫೀಲ್ಡ್ ನಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜೂನ್ 24ರಿಂದ ಈ ಸೇವೆಯನ್ನು ಆರಂಭಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಆಸ್ಪತ್ರೆಯೊಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು
ಅನುಷ್ಠಾನಕ್ಕೆ ತಂದಿದೆ. ಆರೋಗ್ಯ ಸಿಬ್ಬಂದಿ ಕಾರಿನಲ್ಲಿ ಕುಳಿತು ರೋಗಿಯಿಂದ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಕಾರ್ಯವನ್ನು ಆರಂಭಿಸಿದೆ. ಸರ್ಜಾಪುರ ಮತ್ತು ವೈಟ್ ಫೀಲ್ಡ್ ನಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜೂನ್ 24ರಿಂದ ಈ ಸೇವೆಯನ್ನು ಆರಂಭಿಸಿದೆ. 

ಸುರಕ್ಷತೆ, ಅನುಕೂಲತೆ ಹಾಗೂ ರೋಗಿಯಿಂದ ವೇಗವಾಗಿ ರಕ್ತದ ಮಾದರಿ ಸಂಗ್ರಹಿಸಲು ಈ ಕಾರ್ಯವನ್ನು ಇತ್ತೀಚಿಗೆ ಆರಂಭಿಸಿದ್ದೇವೆ. ಆಸ್ಪತ್ರೆ ಕಟ್ಟಡ ಹೊರಗಡೆ ಸುರಕ್ಷತಾ ಕವಚ ಧರಿಸಿದ ತಂತ್ರಜ್ಞರೊಬ್ಬರು ಅಥವಾ ನರ್ಸ್ ಕಾರಿನಲ್ಲಿ ಕುಳಿತು ರೋಗಿಯಿಂದ ರಕ್ತದ ಮಾದರಿ ಸಂಗ್ರಹಿಸುತ್ತಾರೆ ಎಂದು ಸರ್ಜಾಪುರ ರಸ್ತೆ ಬ್ರಾಂಚಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜನರಲ್ ಮ್ಯಾನೇಜರ್ ಮನೀಷ್ ಕುಮಾರ್ ಹೇಳಿದ್ದಾರೆ.

ಸ್ಥಳದಲ್ಲಿಯೇ ನೋಂದಣಿ ಮತ್ತು ಬಿಲ್ಲಿಂಗ್ ಮಾಡಲಾಗುವುದು, ವರದಿಯನ್ನು ರೋಗಿಗಳ ಮೇಲ್ ಗೆ ಕಳುಹಿಸಲಾಗುವುದು, ಇದಕ್ಕೆ ಅಪಾಯಿಂಟ್ಮೆಟ್ ಇರಲ್ಲ, ಟೈಪಾಯಿಡ್, ಡೆಂಗ್ಯೂ, ಕಿಡ್ನಿ, ಲೀವರ್, ಹೃದಯ ಮತ್ತಿತರ ಕಾಯಿಲೆಗಳಿಗೆ ಸಂಬಂಧಿಸಿದಂತೆ ರಕ್ತದ ಮಾದರಿ ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.ಅಗತ್ಯತೆಯನ್ನು ಆಧರಿಸಿ ಇತರ ಬ್ರಾಂಚ್ ಗಳಲ್ಲಿಯೂ ಈ ಸೌಕರ್ಯವನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. 

ಕೋವಿಡ್ ಪರೀಕ್ಷೆಗಾಗಿ ಕೇವಲ ಗಂಟಲು ದ್ರವದ ಮಾದರಿ ಸಂಗ್ರಹದ ಪರೀಕ್ಷೆಯನ್ನು ಮಾತ್ರ ಈ ಸೌಕರ್ಯ ಒಳಗೊಂಡಿಲ್ಲ, ಆಸ್ಪತ್ರೆಯ ಹೊರಗಡೆ  ಇರುವ ಫೀವರ್ ಕ್ಲಿನಿಕ್ ನಲ್ಲಿ ವೈದ್ಯರ ಬಳಿಗೆ ರೋಗಿಯನ್ನು  ಕರೆದೊಯ್ದು ಪರೀಕ್ಷೆ ಮಾಡಿದ ನಂತರವೇ ಇದನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com