ಶಾಸಕರಿಗೂ ಕರೋನಾ ವೈರಸ್ ಭೀತಿ: ಮೇಲ್ಮನೆಯಲ್ಲಿ ಮಾಸ್ಕ್ ಧರಿಸಿ ಬಂದ ಸರವಣ

ಜಾಗತಿಕವಾಗಿ ಭಾರೀ ತಲ್ಲಣ ಉಂಟು ಮಾಡಿರುವ ಕೊರೋನಾ ವೈರಸ್ ಗೆ ಇದೀಗ ಶಾಸಕರು ಸಹ ಬೆಚ್ಚಿ ಬೀಳುವಂತೆ ಮಾಡಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿ ಕೋವಿಡ್ - 19 ಬಗ್ಗೆ ಶಾಸಕರ ನಡುವೆಯೇ ವಿಸ್ತೃತ ಚರ್ಚೆ ನಡೆಯುತ್ತಿತ್ತು. 
ಜೆಡಿಎಸ್ ಎಂಎಲ್ ಸಿ ಶರವಣ
ಜೆಡಿಎಸ್ ಎಂಎಲ್ ಸಿ ಶರವಣ

ಬೆಂಗಳೂರು: ಜಾಗತಿಕವಾಗಿ ಭಾರೀ ತಲ್ಲಣ ಉಂಟು ಮಾಡಿರುವ ಕೊರೋನಾ ವೈರಸ್ ಗೆ ಇದೀಗ ಶಾಸಕರು ಸಹ ಬೆಚ್ಚಿ ಬೀಳುವಂತೆ ಮಾಡಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿ ಕೋವಿಡ್ - 19 ಬಗ್ಗೆ ಶಾಸಕರ ನಡುವೆಯೇ ವಿಸ್ತೃತ ಚರ್ಚೆ ನಡೆಯುತ್ತಿತ್ತು. 

ರಾಜ್ಯದಲ್ಲಿ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸರಲ್ಲಿ ಆತಂಕ ಮನೆ ಮಾಡಿದೆ. ಮಗಳ ಮದುವೆ ಸಂಭ್ರಮದಲ್ಲಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೈರಸ್ ತಡೆಗೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು. 

ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಮಾಸ್ಕ್ ಧರಿಸಿ ಬಂದಿದ್ದು, ಕೊರೋನಾ ವೈರಸ್ ಬಗ್ಗೆ ಇರುವ ಆತಂಕವನ್ನು ದೃಢಪಡಿಸಿತು. ಮಾಸ್ಕ್ ತೊಟ್ಟು ಅವರು ಕಲಾಪದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 
ರಾಜ್ಯದಲ್ಲಿ ಕರೋನಾ ವೈರಸ್ ಹಾಗೂ ಹೆಚ್ 1ಎನ್ 1 ಸೋಂಕು ಹರಡುತ್ತಿರುವ ಬಗ್ಗೆ ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಪರಿಸ್ಥಿತಿ ಹೀಗೇ ಮುಂದುವರಿದರೆ ಶಾಸಕರು, ಮಾಧ್ಯಮದವರು ಹಾಗೂ ಸರ್ಕಾರಿ ಸಿಬ್ಬಂದಿ ಕೂಡ ಮಾಸ್ಕ್ ಹಾಕಿಕೊಂಡು ಬರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದ ದೃಷ್ಯ ಕಂಡು ಬಂತು. 

ಆರೋಗ್ಯ ಸಚಿವ ಬಿ. ಶ್ರೀರಾಮುಲು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸೋಂಕು ತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com