ಶೂಟೌಟ್ ಆದೇಶ ಇನ್ನೂ ಕೈಸೇರಿಲ್ಲ, ಆದೇಶ ಬಂದ ಕೂಡಲೇ ಕಾರ್ಯಾಚರಣೆ ಆರಂಭ

ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕಿನಲ್ಲಿ ಕಳೆದ ಕೆಲ ತಿಂಗಳುಗಳಿಂಗ ನಾಲ್ವರನ್ನು ಬಲಿ ತೆಗೆದುಕೊಂಡಿರುವ ನರಹಂತಕ ಚಿರತೆ ಶೂಟೌಟ್'ಗೆ ಸರ್ಕಾರದ ಆದೇಸ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಕಾದುಕುಳಿತಿದೆ. 
ನರಹಂತಕ ಚಿರತೆ
ನರಹಂತಕ ಚಿರತೆ

ತುಮಕೂರು: ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕಿನಲ್ಲಿ ಕಳೆದ ಕೆಲ ತಿಂಗಳುಗಳಿಂಗ ನಾಲ್ವರನ್ನು ಬಲಿ ತೆಗೆದುಕೊಂಡಿರುವ ನರಹಂತಕ ಚಿರತೆ ಶೂಟೌಟ್'ಗೆ ಸರ್ಕಾರದ ಆದೇಸ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಕಾದುಕುಳಿತಿದೆ. 

ಹೆಬ್ಬೂರು ಸಮೀಪ ಬೈಚಾಪುರದ ತೋಟದ ಮನೆಯಲ್ಲಿ ಚಂದನಾ ಎಂಬ ಹೆಣ್ಣು ಮಗುವನ್ನಿ ಚಿರತೆ ಕಚ್ಚಿ ಸಾಯಿಸಿದ್ದ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸ್ಥಳಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ಶಾಸಕರಾದ ಗೌರಿ ಶಂಕರ್, ರಂಗನಾಥ್, ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರು ಭೇಟಿ ನೀಡಿದಾಗ ಗ್ರಾಮಸ್ಥರು ನರಹಂತಕ ಚಿರತೆಯನ್ನು ಕೊಲ್ಲುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. 

ಕಾನೂನಿನ ತೊಡಕು ಏನೇ ಇದ್ದರೂ ನರಹಂತಕ ಚಿರತೆಯನ್ನು ಕೊಲ್ಲುವ ಭರವಸೆ ನೀಡಿದ್ದ ಆನಂದ್ ಸಿಂಗ್, ಸರ್ಕಾರದ ಜೊತೆ ಮಾತನಾಡಿ, ಚಿರತೆಯನ್ನು ಗುಂಡಿಟ್ಟು ಕೊಲ್ಲುವ ಆದೇಶ ನೀಡುವುದಾಗಿ ತಿಳಿಸಿದ್ದರು. ಅರಣ್ಯ ಸಚಿವರ ಮಾತನ್ನು ಉಲ್ಲೇಖಿಸಿ ಜಿಲ್ಲಾ ಉಸ್ತುವಾರಿ ಸಚಿಚವ ಮಾಧುಸ್ವಾಮಿ ಕೂಡ ಚಿರತೆ ಕೊಲ್ಲಲು ಸರ್ಕಾರದಿಂದ ಅನುಮತಿ ಪಡೆಯಲಾಗುವುದು ಎಂದಿದ್ದರು. ಅಲ್ಲದೆ, ಸೋಮವಾರದಿಂದಲೇ ಗುಂಡಿಟ್ಟು ಕೊಲ್ಲುವ ಕಾರ್ಯಾಚರಣೆ ಆರಂಬವಾಗುವುದಾಗಿಯೂ ಭರವಸೆ ನೀಡಿದ್ದರು. 

ಇತ್ತ ಅರಣ್ಯ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿತ್ತು. ಆದರೆ, ಇನ್ನು ಗುಂಡಿಟ್ಟು ಕೊಲ್ಲುವ ಆದೇಶ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳ ಕೈ ತಲುಪಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿರುವ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. 

ಈಗಾಗಲೇ 30 ಅರಣ್ಯ ರಕ್ಷಕರು ಮಣಿಕುಪ್ಪೆ, ಬೇಚೇನಹಳ್ಳಿ ಸಿ.ಎಸ್.ಪುರ ಮುಂತಾದ ಕಡೆ ಬೀಡು ಬಿಟ್ಟಿದ್ದಾರೆ. 20ಕ್ಕೂ ಹೆಚ್ಚು ಬೋನ್ ಗಲನ್ನು 50 ಕ್ಯಾಪ್ಟರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೂವರು ಅನಸ್ತೇಷಿಯಾ ವೈದ್ಯರು ತುಮಕೂರಿಗೆ ಬಂದಿದ್ದಾರೆ. 

ಇನ್ನು 15 ನರಹಂತಕ ಚಿರತೆ, ಹುಲಿಗಳ ಕಾರ್ಯಾಚಱಣೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಅಧಿಕಾರಿಯೊಬ್ಬರನ್ನು ಕರೆಸಿಕೊಳ್ಳುವ ಯೋಚನೆಯಲ್ಲಿ ಅರಣ್ಯ ಇಲಾಖೆ ಇದೆ. ಹಾಗೆಯೇ ಕೇರಳ, ಮುಂಬೈನಿಂದ ಶಾರ್ಪ್ ಶೂಟರ್ ಗಳನ್ನು ಕರೆ ತರಲಾಗುವುದು. ಒಂದು ವೇಲೆ ಶೂಟೌಟ್ ಆದೇಶ ಬಾರದಿದ್ದರೆ ತುಮಕೂರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಗಳೂರಿಗೆ ತೆರಳು ಉನ್ನತಾಧಿಕಾರಿಗಳ    ಜೊತೆ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ. ಚಿರತೆ ಜಾಡು ಹಿಡಿಯುವಲ್ಲಿ ತಜ್ಞರಾಗಿರುವ ಸೋಲಿಗರ ತಂಡ ಕೂಡ ನರಹಂತಕ ಚಿರತೆ ಜಾಡು ಹಿಡಿಯಲು ಆಗಮಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com