ಕಲಬುರಗಿ: ಅಪರಿಚಿತ ವಾಹನ ಡಿಕ್ಕಿ; ತಾಯಿ, ಮಗಳ ದುರ್ಮರಣ

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ರಾಜಾಪುರ ಬಳಿ ಗುರುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ರಾಜಾಪುರ ಬಳಿ ಗುರುವಾರ ನಡೆದಿದೆ.

35 ವರ್ಷದ ಸೋನಾಬಾಯಿ ಪವಾರ್ ಹಾಗೂ ಆಕೆಯ ಮಗಳು ಅಂಜುಬಾಯಿ(16) ಮೃತ ದುರ್ದೈವಿಗಳು. ಗಿರಣಿಯಲ್ಲಿ ಹಿಟ್ಟು ಬೀಸಿಕೊಂಡು ರಸ್ತೆ ದಾಟಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com