ಇದೇ ಮೊದಲ ಬಾರಿಗೆ ಪ್ರಸಿದ್ದ ರಾಮನವಮಿ ಸಂಗೀತೋತ್ಸವ ಮುಂದೂಡಿಕೆ

ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪ್ರಸಿದ್ಧ ರಾಮನವಮಿ ಸಂಗೀತ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸಂಗೀತ ಕಾರ್ಯಕ್ರಮವನ್ನು ಆಯೋಜಕರು ಮೇ ಮೊದಲ ವಾರಕ್ಕೆ ಮುಂದೂಡಿದ್ದಾರೆ. ಆದರೆ ಕಾರ್ಯಕ್ರಮ ನಡೆಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

Published: 26th March 2020 10:58 AM  |   Last Updated: 26th March 2020 10:58 AM   |  A+A-


representational image

ಸಾಂದರ್ಭಿಕ ಚಿತ್ರ

Posted By : shilpa
Source : The New Indian Express

ಬೆಂಗಳೂರು: ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪ್ರಸಿದ್ಧ ರಾಮನವಮಿ ಸಂಗೀತ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸಂಗೀತ ಕಾರ್ಯಕ್ರಮವನ್ನು ಆಯೋಜಕರು ಮೇ ಮೊದಲ ವಾರಕ್ಕೆ ಮುಂದೂಡಿದ್ದಾರೆ. ಆದರೆ ಕಾರ್ಯಕ್ರಮ ನಡೆಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

ಗಣೇಶ ಪೂಜೆಗೆ ಸಂಗ್ರಹಿಸಿದ ಹಣ ಉಳಿದ ಪರಿಣಾಮ ಆ ದುಡ್ಡಿನಿಂದ 1939ರಲ್ಲಿ ಶ್ರೀ ನಾರಾಯಣ ರಾವ್ ರಾಮನವಮಿ ಸಂಗೀತೋತ್ಸವ ಪ್ರಾರಂಭಿಸಿದರು, ಆರಂಭದಲ್ಲಿ ಚಾಮರಾಜಪೇಟೆ ರಸ್ತೆ ಬದಿಯಲ್ಲಿ ಪ್ರಾರಂಭಿಸಲಾಯಿತು. ನಂತರ ಅದರ ಜನಪ್ರಿಯತೆ ಹೆಚ್ಚಾದ ಕಾರಣ ಸ್ಥಳ ಬದಲಾಯಿಸಲಾಯಿತು.

ಕಳೆದ ಹಲವು ವರ್ಶಗಳಿಂದ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿರುವ ಪ್ರೌಢಶಾಲೆ ಆವರಣದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಾ ಬಂದಿದೆ.ಇಡೀ ಪ್ರಪಂಚವೇ ಕರೋನಾ ವೈರಸ್ ನಿಂದ ಬಳಲುತ್ತಿದೆ ಹೀಗಾಗಿ ನಾವು ಈ ಬಾರಿ ರಾಮನವಮಿ ಸಂಗೀತ ಕಾರ್ಯಕ್ರಮ ಮುಂದೂಡಿದ್ದೇವೆ ಎಂದು ಮ್ಯಾನೆಜಿಂಗ್ ಟ್ಕಸ್ಚಿ  ಎಸ್ ನಾರಾಯಣರಾವ್ ಹೇಳಿದ್ದಾರೆ.

ಏಪ್ರಿಲ್ 2 ರಂದು ರಾಮನವಮಿ ಹಬ್ಬ ಆಚರಣೆ ಇದೆ. ಏಪ್ರಿಲ್ 7 ರವರೆಗೂ ಸಂಗೀತ ಕಾರ್ಯಕ್ರಮವಿತ್ತು. ಆದರೆ ಹಾಡುಗಾರರು ಕಾರ್ಯಕ್ರಮಕ್ಕೆ ಬರಲು ಒಪ್ಪಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಎಲ್ಲಾ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾರ್ಯಕ್ರಮ ನಡೆಸುತ್ತೇವೆ,  ಈ ಬಾರಿ ಲೈವ್ ಸ್ಟ್ರೀಮ್ ಮಾಡಲು ನಿರ್ಧರಿಸಿದ್ದೇವೆ. ಹೀಗಾಗಿ ಜನ ಎಲ್ಲಿಂದ ಬೇಕಾದರೂ ಕಾರ್ಯಕ್ರಮ ವೀಕ್ಷಿಸಬಹುದು.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp