ಜುಬಿಲಿಯೆಂಟ್​​ ನ ಓರ್ವ ಕಾರ್ಮಿಕನ ವರದಿ ಮೇಲೆ ಎಲ್ಲರ ಕಣ್ಣು!

ಜುಬಿಲಿಯೆಂಟ್ ಫ್ಯಾಕ್ಟರಿಯಲ್ಲಿದ್ದ 36 ಜನ ಕಾರ್ಮಿಕರನ್ನು ಪತ್ತೆ ಹಚ್ಚಿ ಚಾಮರಾಜನಗರದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.‌
ನಂಜನಗೂಡು ಲಾಕ್ ಡೌನ್ (ಸಂಗ್ರಹ ಚಿತ್ರ)
ನಂಜನಗೂಡು ಲಾಕ್ ಡೌನ್ (ಸಂಗ್ರಹ ಚಿತ್ರ)

ನಂಜನಗೂಡು: ಜುಬಿಲಿಯೆಂಟ್ ಫ್ಯಾಕ್ಟರಿಯಲ್ಲಿದ್ದ 36 ಜನ ಕಾರ್ಮಿಕರನ್ನು ಪತ್ತೆ ಹಚ್ಚಿ ಚಾಮರಾಜನಗರದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.‌

ಚಾಮರಾಜನಗರ: ಜುಬಿಲಿಯೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ 36 ಮಂದಿಯನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರೆಂಟೈನ್​ನಲ್ಲಿಟ್ಟಿದೆ.ಓರ್ವ ಕಾರ್ಮಿಕನ ವರದಿ ಮೇಲೆ ಎಲ್ಲರ ಕಣ್ಣು!ಈ ಕುರಿತು ಡಿಸಿ ಡಾ. ಎಂ.ಆರ್.ರವಿ ಮಾತನಾಡಿ, ನಂಜನಗೂಡು ಜುಬಿಲಿಯೆಂಟ್  ಫ್ಯಾಕ್ಟರಿಯಲ್ಲಿದ್ದ 36 ಜನ ಕಾರ್ಮಿಕರನ್ನು ಪತ್ತೆ ಹಚ್ಚಿ ನಗರದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.‌ ಜುಬಿಲಿಯೆಂಟ್ ನೌಕರರಲ್ಲಿ ರೋಗದ ಲಕ್ಷಣಗಳಿಲ್ಲ. ಆದರೂ ಮುಂಜಾಗ್ರತೆ ವಹಿಸಲಾಗಿದೆ. 

ಇದುವರಗೆ ಎಂಟು ಜನರ ರಕ್ತದ ಮಾದರಿ, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ, ಒಂದು ರಿಜೆಕ್ಟ್ ಆಗಿದೆ. ಉಳಿದ ಏಳರಲ್ಲಿ ಆರು ನೆಗೆಟಿವ್ ಬಂದಿದೆ. ಒಂದು ವರದಿ ಬರಬೇಕಿದೆ ಎಂದು ಮಾಹಿತಿ ನೀಡಿದರು. ಜುಬಿಲಿಯೆಂಟ್ ನೌಕರನ ಪರೀಕ್ಷೆ ವರದಿ ಬರಬೇಕಿದ್ದು,  ಅದು ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಗುರುತಿಸಿದ್ದ 81 ಜನರಲ್ಲಿ ಯಾರೂ ಕೂಡ ಪ್ರೈಮರಿ ಕಾಂಟ್ಯಾಕ್ಟ್​​ನಲ್ಲಿ ಇರಲಿಲ್ಲ. ಜುಬಿಲಿಯೆಂಟ್ ನೌಕರ ಓರ್ವನನ್ನ ಪ್ರೈಮರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿ ಆತನನ್ನು ಐಸೋಲೇಷನ್ ವಾರ್ಡ್​ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com