ಕಾರ್ಮಿಕ‌ ದಿನ: ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಾಶಯ 

ದೇಶದಾದ್ಯಂತ ಶುಕ್ರವಾರ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ರಾಜ್ಯದ ಜನತೆಗೆ ಶುಭಕೋರಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ದೇಶದಾದ್ಯಂತ ಶುಕ್ರವಾರ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ರಾಜ್ಯದ ಜನತೆಗೆ ಶುಭಕೋರಿದ್ದಾರೆ.

"ಬದುಕಿನುದ್ದಕ್ಕೂ ದುಡಿಮೆಯನ್ನೇ ದೇವರೆಂದು ಭಾವಿಸಿ ದೇಶ ನಿರ್ಮಾಣಕ್ಕೆ ಬೆವರು ಸುರಿಸಿ ದುಡಿಯುವ ಕಾರ್ಮಿಕ ಶಕ್ತಿಯೇ ದೇಶದ ಶಕ್ತಿ". ಕೊರೊನಾದ ಸಂಕಷ್ಟದ ದಿನಗಳು ಕಳೆದು ನೆಮ್ಮದಿಯ ದಿನಗಳು ಬೇಗ ಬರಲಿ ಎಂದು ಆಶಿಸೋಣ ಎಂಬುದಾಗಿ ಯಡಿಯೂರಪ್ಪ ಕೋರಿದ್ದಾರೆ.

ಇನ್ನು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, "ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸುಭದ್ರ ಭಾರತ ನಿರ್ಮಿಸಿರುವ ಎಲ್ಲಾ ಶ್ರಮಿಕರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

ಸಿದ್ದರಾಮಯ್ಯ ಸೇರಿ ಗಣ್ಯರ ಶುಭಾಶಯ
ರೈತರು, ಯೋಧರು, ಕಾರ್ಮಿಕರು ನಮ್ಮ ಪ್ರಾಣವಾಯು. ಇವರಿಲ್ಲದೆ ನಮ್ಮ ಬದುಕಿಲ್ಲ. ಮಾಲೀಕ ಕೇಂದ್ರಿತ ಆರ್ಥಿಕತೆಯಿಂದಾಗಿ ಕಾರ್ಮಿಕರ ಬದುಕು ಅವಸಾನದ ಹಾದಿಯಲ್ಲಿದೆ. ಕಾರ್ಮಿಕ ಕೇಂದ್ರಿತ ಆರ್ಥಿಕತೆ ಮಾತ್ರ ಅವರನ್ನು ಮತ್ತು ನಮ್ಮನ್ನು ಉಳಿಸಬಹುದು. ನಿಮ್ಮೆಲ್ಲರಿಗೂ 'ವಿಶ್ವಕಾರ್ಮಿಕ ದಿನಾಚರಣೆ'ಯ ಶುಭಾಶಯಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಕಾರ್ಮಿಕ ದಿನದ ಶುಭಾಶಯ ಕೋರಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಸೋತಿರುವ ದುಡಿಯುವ ಕೈಗಳಿಗೆ ಹೊಸ ಚೈತನ್ಯ ಬರಲಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಈ ಬಾರಿಯ ಕಾರ್ಮಿಕ ದಿನಾಚರಣೆ ಎದುರುಗೊಳ್ಳೋಣ. ಕಾರ್ಮಿಕರ ಭವಿಷ್ಯದ ಆತಂಕ ದೂರವಾಗಲಿ. ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಕೊರೋನಾ ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ ಸತ್ಯ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ ಎಂದು ಅವರು ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com