ಕೊರೊನಾದಿಂದ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿದೆ: ಎಚ್‌.ಡಿ‌.ಕುಮಾರಸ್ವಾಮಿ

ಕೊರೋನಾದಂತಹ ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ ಸತ್ಯ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಎಚ್‌.ಡಿ‌.ಕುಮಾರಸ್ವಾಮಿ
ಎಚ್‌.ಡಿ‌.ಕುಮಾರಸ್ವಾಮಿ

ಬೆಂಗಳೂರು: ಕೊರೋನಾದಂತಹ ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ ಸತ್ಯ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾರ್ಮಿಕರ ದಿನಾಚರಣೆಗೆ ಶುಭಕೋರಿದ ಕುಮಾರಸ್ವಾಮಿ, ಸೋತಿರುವ ದುಡಿಯುವ ಕೈಗಳಿಗೆ ಹೊಸ ಚೈತನ್ಯ ಬರಲಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಈ ಬಾರಿಯ ಕಾರ್ಮಿಕ ದಿನಾಚರಣೆ ಎದುರುಗೊಳ್ಳೋಣ. ಕಾರ್ಮಿಕರ ಭವಿಷ್ಯದ ಆತಂಕ ದೂರಾಗಲಿ ಎಂದು ಹಾರೈಸಿದ್ದಾರೆ.

ಇನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹ ಕಾರ್ಮಿಕರಿಗೆ ಶುಭಕೋರಿದ್ದು, ದಕ್ಷತೆಯಿಂದ ಕೂಡಿದ ಕಾರ್ಮಿಕ ವರ್ಗ ದೇಶದ ಆರ್ಥಿಕತೆಗೆ ಬೆನ್ನೆಲುಬು.‌ ಆದರೆ ಇಂದು ಮಹಾಮಾರಿ ಕೊರೊನಾದಿಂದ ಶ್ರಮಿಕ ವರ್ಗ ದುಡಿಯಲು ಸಾಧ್ಯವಾಗದೇ ಕಂಗಾಲಾಗಿದೆ. ಈ ಸಂಕಷ್ಟ ಬಗೆಹರಿದು ದುಡಿಯುವ ಕೈಗಳಿಗೆ ಮತ್ತೆ ಕೆಲಸ ದೊರೆಯಲಿ ಶ್ರಮಿಕರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com