ಸಕಲ ಸರ್ಕಾರಿ ಗೌರವಗಳೊಂದಿಗೆ ನಿಸಾರ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ- ಆರ್.ಅಶೋಕ್

ಇಂದು ನಿಧನರಾಗಿರುವ ಹಿರಿಯ ಸಾಹಿತಿ, ಕವಿ ಪ್ರೊ.ಕೆ.ಎಸ್‌. ನಿಸಾರ್ ಅಹ್ಮದ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಿಸಾರ್ ಅಹಮದ್, ಆರ್. ಅಶೋಕ
ನಿಸಾರ್ ಅಹಮದ್, ಆರ್. ಅಶೋಕ

ಬೆಂಗಳೂರು:ಇಂದು ನಿಧನರಾಗಿರುವ ಹಿರಿಯ ಸಾಹಿತಿ, ಕವಿ ಪ್ರೊ.ಕೆ.ಎಸ್‌. ನಿಸಾರ್ ಅಹ್ಮದ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಸಾರ್ ಅಹ್ಮದ್ ಅವರ ನಿಧನದಿಂದ ಕನ್ನಡದ ಮೇರು ಕವಿಯನ್ನು ನಾವು ಕಳೆದುಕೊಂಡಿದ್ದೇವೆ. ಸಾಹಿತ್ಯ‌ಲೋಕದಲ್ಲಿ ತನ್ನದೆ ಆದ ರೀತಿಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ಅನೇಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು. ಅವರ ನಿಧನದಿಂದ ಕನ್ನಡ ನಾಡಿಗೆ, ಭಾಷೆಗೆ ದೊಡ್ಡ ಆಘಾತವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಸಾರ್ ಅವರು ಬಹಳ‌ ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದರು.ನಿಸಾರ್ ಅಹ್ಮದ್ ಅವರ ಹೆಸರಿನಲ್ಲಿ ಟ್ರಸ್ಟ್ ವೊಂದನ್ನು ರಚಿಸಿ ಚಿಕ್ಕಬಳ್ಳಾಪುರ ಬಳಿ 2.20 ಎಕರೆ ಜಮೀನು ನೀಡಲಾಗಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಘೋಷಣೆ ಆಗಬೇಕಿತ್ತು. ಅಷ್ಟರದಲ್ಲಿ ಅವರು ನಮ್ಮನ್ನು ಅಗಲಿದ್ದಾರೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅಶೋಕ ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com