ರಾಜ್ಯದಲ್ಲಿ ಕೋವಿಡ್-19 ನಿಂದ ಮೃತಪಟ್ಟ ಶೇ.49 ರಷ್ಟು ರೋಗಿಗಳಲ್ಲಿ ಇತರ ಆರೋಗ್ಯ ಸಮಸ್ಯೆ!

ಕರ್ನಾಟಕದಲ್ಲಿ ಕೊರೋನಾದಿಂದ ಸಾವನ್ನಪ್ಪಿದ ರೋಗಿಗಳಲ್ಲಿ 37 ವ್ಯಕ್ತಿಗಳು ಇತರೆ ಸೊಂಕಿನಿಂದಲೂ ಕೂಡ ಬಳಲುತ್ತಿದ್ದರು, ಇವರಿಗೆ ತೀವ್ರವಾದ ಉಸಿರಾಟದ ತೊಂದರೆ, (SARI) ಮತ್ತು ಇನ್ ಫ್ಲೂಯೆಂಜಾ ಸಮಸ್ಯೆ ಇತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾದಿಂದ ಸಾವನ್ನಪ್ಪಿದ ರೋಗಿಗಳಲ್ಲಿ 37 ವ್ಯಕ್ತಿಗಳು ಇತರೆ ಸೊಂಕಿನಿಂದಲೂ ಕೂಡ ಬಳಲುತ್ತಿದ್ದರು, ಇವರಿಗೆ ತೀವ್ರವಾದ ಉಸಿರಾಟದ ತೊಂದರೆ, (SARI) ಮತ್ತು ಇನ್ ಫ್ಲೂಯೆಂಜಾ ಸಮಸ್ಯೆ ಇತ್ತು.

ರಾಜ್ಯದಲ್ಲಿ ಕೋವಿಡ್-19 ನಿಂದ ಮೃತಪಟ್ಟ ಶೇ.49 ರಷ್ಟು ರೋಗಿಗಳಲ್ಲಿ ಇತರ ಆರೋಗ್ಯ ಸಮಸ್ಯೆ ಇತ್ತು ಎಂಬುದು ತಿಳಿದು ಬಂದಿದೆ, ಜೊತೆಗೆ ಇವರಲ್ಲಿ 60 ವರ್ಷ ಮೇಲ್ಪಟ್ಟವರು ಇದ್ದರು ಎಂದು ವಾರ್ ರೂಮ್ ಅಂಕಿ ಅಂಶಗಳಿಂದ ತಿಳಿದು ಬಂದಿದೆ. 

ರಾಜ್ಯದ ವಾರ್ ರೂಂ  ಅಂಕಿ ಅಂಶಗಳ ಪ್ರಕಾರ ಶೇ 49 ರಷ್ಟಿದ್ದು,  ಅದರಲ್ಲಿ ಶೇ. 31 ರಷ್ಟು SARI ಮತ್ತು ILI ಸಮಸ್ಯೆಯಿದ್ದು ಅವರೆಲ್ಲಾ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.20 ಸಕ್ರಿಯ ಪ್ರಕರಣಗಳಿದ್ದು, 114 ರೋಗಿಗಳು 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಮೇ 17 ರ ಒಳಗೆ ರಾಜ್ಯದಲ್ಲಿ ಒಟ್ಟು 596 ಸಕ್ರಿಯ ಪ್ರಕರಣಗಳಲ್ಲಿ ಪತ್ತೆಯಾಗಿದ್ದು, ಅದರಲ್ಲಿ 67 ಮಂದಿ ಅಪಾಯದಲ್ಲಿದ್ದಾರೆ. ಗದಗ, ಚಿತ್ರದುರ್ಗ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಅಪಾಯ ಹೊಂದಿರುವ ರೋಗಿಗಳಿದ್ದರು. ಅಂದರೆ ಶೇ,11.2  ಮಂದಿಗೆ ಆ ಸಮಯದಲ್ಲಿ ಬೇರೆ ಬೇರೆ ಆರೋಗ್ಯ  ಸಮಸ್ಯೆಗಳಿದ್ದವು.

ಐಸಿಯುನಲ್ಲಿರುವ ಕೊರೋನಾ ಸೋಂಕಿತರಲ್ಲಿ ಹೆಚ್ಚಿನವರಿಗೆ ಜೀವ ರಕ್ಷಕದ ಅಗತ್ಯವಿದೆ, ಮಧುಮೇಹ ಇದ್ದ ಸೋಂಕಿತರಿಗೆ ಡಯಾಲಿಸಿಸ್ ಮತ್ತು ಕಿಡ್ನಿ ಸಮಸ್ಯೆ ಇರುವವರಿಗೆ ವೆಂಟಿಲೇಟರ್ ನೀಡಲಾಗುತ್ತಿದೆ. ಅವರ ರಕ್ತದೊತ್ತಡ ಪ್ರಮಾಣ ಹೆಚ್ಚಿಸಲು ಹಾಗೂ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸಲು ವೆಂಟಿಲೇಟರ್ ಅವಶ್ಯಕತೆಯಿದೆ ಎಂದು ಮಣಿಪಾಲ್ ಆಸ್ಪತ್ರೆಯ ಡಾ. ಅನೂಪ್ ಅಮರ್ ನಾಥ್ ಹೇಳಿದ್ದಾರೆ.

ಆಕ್ಸಿಜನ್ ಪ್ರಮಾಣವನ್ನು ಆಗಾಗ್ಗೆ ಪರಿಶೀಲಿಸುವ ಬದಲು  sari ಪ್ರಕರಣಗಳಲ್ಲಿ ಆಕ್ಸಿ ಮೀಟರ್ ಪ್ರಮಾಣ ಪರೀಕ್ಷಿಸುವ ಅವಶ್ಯಕತೆಯಿ ದೆ ಎಂದು ತಿಳಿದು ಬಂದಿದೆ. ಮೇ 17 ರ ಹೊತ್ತಿಗೆ ರಾಜ್ಯದಲ್ಲಿ ಶೇ 3.2 ರಷ್ಟು ಸಾವಿನ ಪ್ರಮಾಣವಿದ್ದು. ಶೇ.44 ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದು ಅಂದರೆ 509 ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com