ಚಾಮರಾಜನಗರ: ಬೇಟೆಯಾಡುತ್ತಿದ್ದ ಅರಣ್ಯ ಇಲಾಖೆ ಮಾಹಿತಿದಾರನ ಬಂಧನ

ಅರಣ್ಯ ಇಲಾಖೆ ಮಾಹಿತಿದಾರನಾಗಿದ್ದುಕೊಂಡೇ ಅಕ್ರಮವಾಗಿ ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅರೇಪಾಳ್ಯದಲ್ಲಿ ನಡೆದಿದೆ.
ಬಂಧಿತ ಆರೋಪಿ ನಾಗೇಗೌಡ
ಬಂಧಿತ ಆರೋಪಿ ನಾಗೇಗೌಡ

ಚಾಮರಾಜನಗರ: ಅರಣ್ಯ ಇಲಾಖೆ ಮಾಹಿತಿದಾರನಾಗಿದ್ದುಕೊಂಡೇ ಅಕ್ರಮವಾಗಿ ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅರೇಪಾಳ್ಯದಲ್ಲಿ ನಡೆದಿದೆ.

ನಾಗೇಗೌಡ ಬಂಧಿತ ಬೇಟೆಗಾರ. ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ದುಷ್ಕೃತ್ಯಗಳನ್ನು ಬೈಲಿಗೆಳೆಯಲು ಸಹಕಾರಿಯಾಗಬೇಕಿದ್ದ ಮಾಹಿತಿದಾರ ಕಳ್ಳ ಬೇಟೆ ನಡೆಸುತ್ತಿದ್ದ ವಿಚಾರ ಮತ್ತೋರ್ವ ಮಾಹಿತಿದಾರನಿಂದ ಬೆಳಕಿಗೆ ಬಂದಿದೆ.

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡಯುವ ಅಕ್ರಮಗಳ ಕುರಿತು ಮಾಹಿತಿ ನೀಡಬೇಕಿದ್ದ ಅರಣ್ಯ ಮಾಹಿತಿದಾರನೇ ಕಳ್ಳ ಬೇಟೆಯಾಡುತ್ತಿದ್ದ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ

ಜಿಂಕೆಯೊಂದನ್ನು ಬೇಟೆಯಾಡಿ ಅದರ ಚರ್ಮ ಸುಲಿಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆರ್​ಎಪ್​ಒ ಮಹಾದೇವಯ್ಯ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ ಜಿಂಕೆ ಮಾಂಸ ಮತ್ತು ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ವರದಿ: ಗುಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com