ರಾಜ್ಯದ ಗಡಿ ಪ್ರವೇಶಿಸುವವರ ನಿಯಂತ್ರಣ: ಪೊಲೀಸರಿಗೆ  ಹೆಚ್ಚುವರಿ ಸೌಲಭ್ಯ ನೀಡಲು ಗೃಹ ಸಚಿವರ ಸೂಚನೆ 

ಹೊರರಾಜ್ಯದಿಂದ ರಾಜ್ಯದ ಗಡಿ ಪ್ರವೇಶ ಮಾಡುವವರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ‌
ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಹೊರರಾಜ್ಯದಿಂದ ರಾಜ್ಯದ ಗಡಿ ಪ್ರವೇಶ ಮಾಡುವವರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ‌

 ಅತ್ತಿ ಬೆಲೆ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಮೊಬೈಲ್ ವಿಶ್ರಾಂತಿ ಕೊಠಡಿಗಳನ್ನು ಗೃಹ ಸಚಿವರು ಪರಿಶೀಲನೆ ನಡೆಸಿದರು.ವಿಶ್ರಾಂತಿ ಗೃಹಗಳ ಗುಣಮಟ್ಟ ಹಾಗು ಸೌಲಭ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು.ಅಧಿಕಾರಿ ಗಳಿಂದ ಮಾಹಿತಿ ಪಡೆದು ಕೆಲವೊಂದು ನಿರ್ಣಯ ಕೈಗೊಂಡು ಆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ರಾಜ್ಯದ ಗಡಿ ಪ್ರದೇಶಗಳ ಚೆಕ್ ಫೋಸ್ಟ್ ಗಳಲ್ಲಿ  ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ತಕ್ಷಣ ವಿಶ್ರಾಂತಿ,ಊಟ ತಿಂಡಿ ಮಾಡ ಲು,ಮಳೆ,ಬಿಸಿಲಿನ ರಕ್ಷಣೆಗಾಗಿ ಹಾಗೂ ಆರೋಗ್ಯದ ದೃ಼ಷ್ಟಿಯಿಂದ ಆರು ಮೊಬೈಲ್ ವಿಶ್ರಾಂತಿ ಕೊಠಡಿ‌ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com