ಪ್ಲಾಸ್ಮಾ ಥೆರಪಿ ಕೊರೋನಾ ಸೋಂಕಿನಿಂದ ಸಾಯುವುದನ್ನು ತಡೆಗಟ್ಟುತ್ತದೆ: ತಜ್ಞರ ಅಭಿಪ್ರಾಯ

ಕೊರೋನಾದಿಂದ ಗುಣಮುಖರಾದವರಿಂದ ಪ್ಲಾಸ್ಮಾ ತೆಗೆದು ಸೋಂಕಿತರಿಗೆ ನೀಡುವುದರಿಂದ ಕಾಯಿಲೆ ಗುಣಮುಖವಾಗಬಹುದು, ಗುಣಪಡಿಸಿದ ರೋಗಿಯ ರಕ್ತದಿಂದ ಪ್ರತಿಕಾಯಗಳನ್ನು ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಮತ್ತು ಇದನ್ನು ಅನೇಕ ದೇಶಗಳು ಅತ್ಯುತ್ತಮ ಚಿಕಿತ್ಸೆಯಾಗಿ ಸ್ವೀಕರಿಸಿವೆ.

Published: 05th November 2020 02:25 PM  |   Last Updated: 05th November 2020 02:47 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಹುಬ್ಬಳ್ಳಿ:  ಪ್ಲಾಸ್ಮಾ ಥೆರಪಿಯಿಂದ ಸಾವಿನ ಅಪಾಯ ಕಡಿಮೆ ಯಾಗವುದಿಲ್ಲ ಹೀಗಾಗಿ,ಕೋವಿಡ್ -19 ಟ್ರೀಟ್ಮೆಂಟ್ ಪ್ರೋಟೋಕಾಲ್ ನಿಂದ ಪ್ಲಾಸ್ಮಾ ಚಿಕಿತ್ಸೆಯನ್ನು ತೆಗೆದುಹಾಕಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮುಂದಾಗಿದೆ, ಆದರೆ ಪ್ಲಾಸ್ಮಾ ಥೆರಪಿಯನ್ನು ಪ್ರಯೋಗಾತ್ಮವಾಗಿ ಆರಂಭಿಸಿದ ಮೆಡಿಕಲ್ ಇನ್ಸ್ ಸ್ಟಿಟ್ಯೂಟ್ ಮತ್ತು ಆಸ್ಪತ್ರೆಳು ಪ್ಲಾಸ್ಮಾ ಥೆರಪಿಯಿಂದ ಉತ್ತಮ ಫಲಿತಾಂಶ ಕಂಡುಕೊಂಡಿದ್ದು ಮುಂದುವರಿಸಲು ನಿರ್ಧರಿಸಿವೆ.

ಕೊರೋನಾದಿಂದ ಗುಣಮುಖರಾದವರಿಂದ ಪ್ಲಾಸ್ಮಾ ತೆಗೆದು ಸೋಂಕಿತರಿಗೆ ನೀಡುವುದರಿಂದ ಕಾಯಿಲೆ ಗುಣಮುಖವಾಗಬಹುದು, ಗುಣಪಡಿಸಿದ ರೋಗಿಯ ರಕ್ತದಿಂದ ಪ್ರತಿಕಾಯಗಳನ್ನು ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಮತ್ತು ಇದನ್ನು ಅನೇಕ ದೇಶಗಳು ಅತ್ಯುತ್ತಮ ಚಿಕಿತ್ಸೆಯಾಗಿ ಸ್ವೀಕರಿಸಿವೆ.

ಪ್ಲಾಸ್ಮಾ ಚಿಕಿತ್ಸೆಯ ಪರಿಣಾಮವನ್ನು ಪರೀಕ್ಷಿಸಲು  ಐಸಿಎಂಆರ್ ದೇಶಾದ್ಯಂತ 39 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿತು, ಇದರಲ್ಲಿ ಮಧ್ಯಮ ಕೋವಿಡ್ - 19 ಹೊಂದಿರುವ 464 ವಯಸ್ಕರಿಗೆ ಏಪ್ರಿಲ್ 22 ರಿಂದ ಜುಲೈ 14 ರ ನಡುವೆ ಪ್ಲಾಸ್ಮಾವನ್ನು ಥೆರಪಿ ನೀಡಲಾಯಿತು. ಪ್ಲಾಸ್ಮಾ ಟ್ರಯಲ್ ಸಂದರ್ಭದಲ್ಲಿ, ಇಂಟರ್ವೆನ್ಶನ್ ಆರ್ಮ್ ನಲ್ಲಿ 44 ರೋಗಿಗಳು (ಶೇ.19), ಕಂಟ್ರೋಲ್ ಆರ್ಮ್ ನಲ್ಲಿ 41 ರೋಗಿಗಳು (ಶೇ.18) ರೋಗಿಗಳು ಸಾವನಪ್ಪಿದ್ದಾರೆ. ಹೀಗಾಗಿ ಫ್ಲಾಸ್ಮಾ ಥೆರಪಿ ಸಾವನ್ನು ನಿಯಂತ್ರಿಸಲು ವಿಫವಾಗಿರುವ ಕಾರಣ ಪ್ಲಾಸ್ಮಾ ಥೆರಪಿ ನಿಲ್ಲಿಸಲು ಐಸಿಎಂಆರ್ ನಿರ್ಧಾರ ಕೈಗೊಂಡಿತು.

ಐಸಿಎಂಆರ್ ವ್ಯಾಪ್ತಿಗೆ ಒಳಪಟ್ಟಿರುವ ಹಲವು ಆಸ್ಪತ್ರೆಗಳು ಪ್ರಯೋಗದ ಹಂತವಾಗಿ ಪ್ಲಾಸ್ಮಾ ಥೆರಪಿ ಮುಂದುವರಿಸಲು ನಿರ್ಧರಿಸಿವೆ,  ಕೆಲವು ಆಸ್ಪತ್ರೆಗಳು 100ಕ್ಕೂ ಹೆಚ್ಚು ಪ್ಲಾಸ್ಮಾ ಥೆರಪಿ ಮಾಡಿವೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ 103 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಮಾಡಿದ್ದು, ಅದರಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.

ಮಧ್ಯಮ ರೋಗಿಗಳಿಗೆ ಮಾತ್ರ ಕಿಮ್ಸ್ ಸಂಸ್ಥೆ ಪ್ಲಾಸ್ಮಾ ಥೆರಪಿ ನಡೆಸುತ್ತಿತ್ತು, ಆದರೆ ಕೆಲವೊಂದು ಒತ್ತಡಗಳ ಹಿನ್ನೆಲೆಯಲ್ಲಿ ಕೊರೋನಾ ತೀವ್ರವಾಗಿರುವ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡಲಾಯಿತು. ಅವರು ಪ್ಲಾಸ್ಮಾವನ್ನು ಪಡೆಯುವ ಮಾನದಂಡಗಳಿಗೆ ಹೊಂದಿಕೆಯಾಗಲಿಲ್ಲ, ಅಂತಹ ಸಂದರ್ಭದಲ್ಲಿ ಸಾವು ಸಂಭವಿಸಿವೆ ಎಂದು ಮೂಲಗಗಳು ತಿಳಿಸಿವೆ.
ಪ್ರಾಯೋಗಿಕ ಹಂತದಲ್ಲಿ, ಪ್ಲಾಸ್ಮಾ ದಾನಿಗಳಲ್ಲಿ ಪ್ರತಿಕಾಯ ಪರೀಕ್ಷೆಯನ್ನು ನಡೆಸಲು ಯಾವುದೇ ಮಾರ್ಗಸೂಚಿಗಳಿರಲಿಲ್ಲ, ಕೋವಿಡ್ -19 ನಿಂದ ಗುಣಮುಖವಾದ ವ್ಯಕ್ತಿಯು ರಕ್ತದಾನ ಮಾಡಲು ಬಂದರೆ, ಅವರು ಕುರುಡಾಗಿ ರಕ್ತವನ್ನು ತೆಗೆದುಕೊಂಡು ಪ್ಲಾಸ್ಮಾವನ್ನು ಮಧ್ಯಮ ಮತ್ತು ತೀವ್ರ ರೋಗಿಗಳಿಗೆ ತುಂಬಿಸುತ್ತಿದ್ದರು ಮತ್ತು ಕೋವಿಡ್ -19 ರೋಗಿಗೆ ಚಿಕಿತ್ಸೆ ನೀಡಲು ಯಾವ ದಾನಿಗಳ ರಕ್ತ ಸರಿಹೊಂದುತ್ತದೆ ಅಥವಾ ಇಲ್ಲವೇ ಎಂಬುದು ಅವರಿಗೆ ತಿಳಿದಿರಲಿಲ್ಲ.

ಹೀಗಾಗಿ ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ಸಾವಿನ ಪ್ರಮಾಣಹೆಚ್ಚಾಗಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಐಸಿಎಂಆರ್ ಈ ನಿರ್ಧಾರಕ್ಕೆ ಬರುವ ಮುನ್ನ ಮತ್ತೊಂದು ಬಾರಿ ವಿಶ್ಲೇಷಣೆ ನಡೆಸಬೇಕು ಎಂದು ಹೇಳಿದ್ದಾರೆ.

ದಾನಿಗಳಲ್ಲಿ ಆಂಟಿಬಾಡಿ ಪರೀಕ್ಷೆ ನಡೆಸುವುದು ಐಸಿಎಂಆರ್ ಕಡ್ಡಾಯಗೊಳಿಸಿದೆ ಮತ್ತು ಇದನ್ನು ಎಲ್ಲಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಅನುಸರಿಸುತ್ತವೆ, ಉತ್ತಮ ಫಲಿತಾಂಶಕ್ಕಾಗಿ, ದಾನಿಗಳ ರಕ್ತವನ್ನು ಪಡೆಯುವ ಮೊದಲು ಕೋವಿಡ್ ನ್ಯೂಟ್ರಲೈಸಿಂಗ್ ಆಂಟಿಬಾಡಿ ಪರೀಕ್ಷೆಯನ್ನು ಮಾಡಬೇಕು ನಂತರ ರೋಗಿಯನ್ನು ಗುಣಪಡಿಸಲು ಪ್ಲಾಸ್ಮಾ
ಸೂಕ್ತವಾಗಿದೆಯೆ ಅಥವಾ ಇಲ್ಲವೇ ಎಂದು ತಿಳಿಯಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ಆರಂಭಿಕ ಮತ್ತು ಮಧ್ಯಮ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಥೆರಪಿ ಬಹಳ ಪರಿಣಾಮಕಾರಿ ಎಂದು ವಿವಿಧ ದೇಶಗಳ ಅನೇಕ ಅಧ್ಯಯನಗಳು ಕಂಡುಹಿಡಿದ ನಂತರ. ಐಸಿಎಂಆರ್ ಕೂಡ ಆಸ್ಪತ್ರೆಗಳಿಗೆ ಇದನ್ನೇ ಸೂಚಿಸಿದೆ, ಪ್ರತಿಷ್ಠಿತ ಸಂಸ್ಥೆಗಳಾದ ಏಮ್ಸ್, ಚಂಡೀಗಢ ದ ಪಿಜಿಐ ಮತ್ತು ಇತರ ಸಂಸ್ಥೆಗಳು 500 ಕ್ಕೂ ಹೆಚ್ಚು ಪ್ಲಾಸ್ಮಾ ಚಿಕಿತ್ಸೆಯನ್ನು ನಡೆಸಿವೆ.

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp