ಕೌಟುಂಬಿಕ ಗ್ರಾಹಕರನ್ನು ಆಕರ್ಷಿಸಲು ಧೂಮಪಾನ ರಹಿತದೆಡೆಗೆ ರೆಸ್ಟೋರೆಂಟ್‌ಗಳ ಸ್ವಯಂ ನಿರ್ಧಾರ!

ಹಲಸೂರಿನಲ್ಲಿರುವ ‘ಕಾರ- ಬೈದಿಲೇಕ್’ ಕೆಫೆಯು ತನ್ನ ಜಾಗದಲ್ಲಿ ಧೂಮಪಾನಕ್ಕೆ ಸಂಪೂರ್ಣವಾಗಿ ನಿಷೇಧ ಹೇರಿದ್ದು, ಇದರಿಂದಾಗಿ ಕೌಟುಂಬಿಕ ಗ್ರಾಹಕರು ಈ ಕೆಫೆಯತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ.
ಧೂಮಪಾನ ರಹಿತ ರೆಸ್ಟೋರೆಂಟ್‌
ಧೂಮಪಾನ ರಹಿತ ರೆಸ್ಟೋರೆಂಟ್‌

ಬೆಂಗಳೂರು: ಹಲಸೂರಿನಲ್ಲಿರುವ ‘ಕಾರ- ಬೈದಿಲೇಕ್’ ಕೆಫೆಯು ತನ್ನ ಜಾಗದಲ್ಲಿ ಧೂಮಪಾನಕ್ಕೆ ಸಂಪೂರ್ಣವಾಗಿ ನಿಷೇಧ ಹೇರಿದ್ದು, ಇದರಿಂದಾಗಿ ಕೌಟುಂಬಿಕ ಗ್ರಾಹಕರು ಈ ಕೆಫೆಯತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ತಮ್ಮ ವ್ಯಾಪಾರವನ್ನು ವೃದ್ಧಿಸಲು ಹೆಚ್ಚು ಹೆಚ್ಚು ರೆಸ್ಟೋರೆಂಟ್ಗಳು ಧೂಮಪಾನವಲಯವನ್ನು  ತೆಗೆದುಹಾಕುತ್ತಿದೆ.

‘ಕಾರ’ ಕೆಫೆಯ ಮಾಲೀಕರಾದ ಶ್ರೀಮತಿ. ರಾಧಾನಾಯರ್ ಅವರು, ಶೇ.100ರಷ್ಟು ಧೂಮಪಾನ ರಹಿತ ಪರಿಣಾಮವಾಗಿ ಗ್ರಾಹಕರ, ಸಿಬ್ಬಂದಿಗಳ ಆರೋಗ್ಯಕ್ಕೆ ಒಳ್ಳೆಯದಾಗಿದೆ ಹಾಗು ನಮ್ಮ ವ್ಯಾಪಾರವೂ ವೃದ್ಧಿಸಿದೆ. ಕೌಟುಂಬಿಕ ಗ್ರಾಹಕರು ಧೂಮಪಾನ ರಹಿತ ಸ್ಥಳದಲ್ಲಿ ಆಹಾರ ಸೇವನೆ ಮಾಡಲು ಆದ್ಯತೆ  ನೀಡುತ್ತಾರೆ. ಮಕ್ಕಳು, ಮಹಿಳೆಯರು ಹಾಗು ವೃದ್ಧರು ಧೂಮಪಾನ ಮಾಡುವ ಸ್ಥಳದಲ್ಲಿ ಆರಾಮದಾಯಕವಾಗಿರುವುದಿಲ್ಲ. ನಮ್ಮ ಕೆಫೆಯ ಧೂಮಪಾನ ಮಾಡುವ ಜಾಗವನ್ನು ಅನಾರೋಗ್ಯಕರ ಚಟುವಟಿಕೆಗಳಿಗೆ ವ್ಯರ್ಥಮಾಡುವುದರ ಬದಲು ಹೆಚ್ಚು ಗ್ರಾಹಕರಿಗೆ ಮೀಸಲಾಗಿಡಬಹುದು ಎಂದು ನಿರ್ಧರಿಸಿದೆವು ಎಂದು  ಹೇಳಿದ್ದಾರೆ.

ತಮ್ಮ ವ್ಯಾಪಾರ ಹೆಚ್ಚಾಗಿರುವುದರಿಂದ ಪ್ರೇರಿತರಾದ ಅವರು ಇತರೆ ಹೋಟೆಲ್‌, ರೆಸ್ಟೋರೆಂಟ್‌ ಹಾಗು ಕೆಫೆಗಳು ಸಂಪೂರ್ಣ ಧೂಮಪಾನ ಮುಕ್ತವಾಗುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಸಫಲರಾಗುವರೆಂಬ ಭರವಸೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ನವಂಬರ್‌ 07ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನ.ಇದರ ಪ್ರಯುಕ್ತ Indian Council of Medical Research (ICMR) and National Centre for Disease Informatics and Research, Bengaluru ಹೊರಡಿಸಿರುವ ನ್ಯಾಷನೆಲ್ ಕ್ಯಾನ್ಸರ್‌  ರಿಜಿಸ್ಟ್ರಿಪ್ರೋಗ್ರಾಮ್‌ ವರದಿ 2020 ರ ಪ್ರಕಾರ, 2020ರಲ್ಲಿ 13.9 ಲಕ್ಷ ಇರುವ ಕ್ಯಾನ್ಸರ್‌ ಕೇಸ್‌ಗಳು 2025 ರಲ್ಲಿ15.7 ಲಕ್ಷಕ್ಕೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಗ್ಲೋಬಲ್‌ ಅಡಲ್ಟ್‌ ಟೊಬಾಕೋ ಸರ್ವೆ(GATS-2) ನ ಪ್ರಕಾರ ಶೇ. 14ರಷ್ಟು ವ್ಯಕ್ತಿಗಳು ರಾಜ್ಯದಲ್ಲಿ ರೆಸ್ಟೋರೆಂಟ್‌ಗಳಲ್ಲಿ ಪರೋಕ್ಷ  ಧೂಮಪಾನಕ್ಕೆ ತುತ್ತಾಗುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 20,0000 ರೆಸ್ಟೋರೆಂಟ್‌ ಗಳಿದ್ದು 3ಲಕ್ಷ ಕಾರ್ಮಿಕರಿದ್ದಾರೆಂದು ಅಂದಾಜಿಸಲಾಗಿದೆ.  

ಧೂಮಪಾನ ವಲಯ ಸ್ಥಾಪಿಸಿ ಅಥವಾ ಸ್ಥಾಪಿಸದೆಯೇ ಧೂಮಪಾನಕ್ಕೆ ಅನುವು ಮಾಡಿಕೊಡುತ್ತಿದ್ದ ರೆಸ್ಟೋರೆಂಟ್‌ಗಳು ಅದನ್ನು ತ್ಯಜಿಸಲು ಮುಂದಾಗಿದ್ದು, ಸಂಪೂರ್ಣ ಧೂಮಪಾನ ರಹಿತವಾಗುವಲ್ಲಿ ಒಲವು ತೋರಿಸುತ್ತಿವೆ. ಹೆಚ್ಚಿನ ಕೌಟುಂಬಿಕ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹಾಗು ತಮ್ಮ ಕಾರ್ಮಿಕರ  ಆರೋಗ್ಯದ ಹಿತದೃಷ್ಠಿಯಿಂದ ರೆಸ್ಟೋರೆಂಟ್‌ಗಳ ಮಾಲೀಕರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುತ್ತಿದ್ದಾರೆ, ಇದು ಪರೋಕ್ಷ ಧೂಮಪಾನದಿಂದ ಆಗಬಹುದಾದ ಕ್ಯಾನ್ಸರ್‌ ಮತ್ತು ಇತರೆ ಮಾರಕ ರೋಗಗಳಿಂದ ಇವರನ್ನು ದೂರವಿಡಲು ಪೂರಕವಾಗಿವೆ. ಅಷ್ಟೇ ಅಲ್ಲದೇ ಧೂಮಪಾನ ವಲಯದ ನಿರ್ವಹಣೆಗಾಗಿ  ವ್ಯಯಿಸುವ ಹಣವನ್ನು ಉಳಿಸಬಹುದಾಗಿದೆ. 

ಬೆಂಗಳೂರು ಮೂಲದ ಸಾಹಸ್‌ ಝಿರೋವೇಸ್ಟ್‌ʼ, ಸಂಸ್ಥೆಯ ಸಿ.ಇ.ಓ ಹಾಗು ಒಬ್ಬ ತಾಯಿಯೂ ಆಗಿರುವ ಶ್ರೀಮತಿ ವಿಲ್ಮಾರಾಡ್ರೀಗಸ್‌ ರವರು, “ಯಾವುದೇ ವ್ಯಕ್ತಿಯೂ ಬಲವಂತವಾಗಿ ಧೂಮಪಾನದ ಹೊಗೆಗೆ ಬಲಿಯಾಗಬಾರದು. ಕುಟುಂಬದೊಂದಿಗೆ ಹೊರಗಡೆ ಊಟಕ್ಕೆ ಹೋದಾಗ, ಪರಿಸರ, ರುಚಿ, ಸೇವೆ  ಇತ್ಯಾದಿಗಳಿಗಿಂತ ಹೆಚ್ಚಾಗಿ ಧೂಮಪಾನ ರಹಿತ ರೆಸ್ಟೋರೆಂಟ್‌ಗಳಿಗೆ ಆದ್ಯತೆ ನೀಡುತ್ತೇನೆ. ಸಂಪೂರ್ಣ ಧೂಮಪಾನ ರಹಿತ ರೆಸ್ಟೋರೆಂಟ್‌ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ”, ಎಂದರು.  

ಡಾ. ವಿಶಾಲ್ರಾವ್, ಪ್ರಸಿದ್ಧ ಕ್ಯಾನ್ಸರ್‌ ತಜ್ಞರು ಹಾಗು ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ ಸದಸ್ಯರು ಅಭಿಪ್ರಾಯಪಟ್ಟಿರುವಂತೆ, 'ಪರೋಕ್ಷ ಧೂಮಪಾನವು ನೇರ ಧೂಮ ಪಾನದಷ್ಟೇ ಹಾನಿಕಾರಕ. ತಂಬಾಕು ಹೊಗೆಯು ಹಾನಿಕಾರಕ ರಾಸಾಯನಿಕ ಅಂಶಗಳನ್ನು ಹೊಂದಿದ್ದು  ಹೃದಯ, ರಕ್ತನಾಳದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಹೃದಯ ಖಾಯಿಲೆ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ಗಳಿಗೆ ಕಾರಣವಾಗುತ್ತದೆ”.

“ರೆಸ್ಟೋರೆಂಟ್‌ಗಳು ಶೇ. 100ರಷ್ಟು ಧೂಮಪಾನ ರಹಿತ ಸ್ಥಳಗಳಾಗಿ ಬದಲಾವಣೆಗೊಂಡು ಅದರಿಂದ ಲಾಭವನ್ನು ಪಡೆಯುತ್ತಿರುವುದು ಪ್ರಶಂಸನೀಯ. ಇದು ಗ್ರಾಹಕ ಹಾಗು ಮಾಲೀಕ ಇಬ್ಬರಿಗೂ ಗೆಲುವು. ಇತರ ರೆಸ್ಟೋರೆಂಟ್ಗಳು ಈ ರೀತಿಯ ನಿರ್ಧಾರವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು”. ಎಂದು  ಹೇಳಿದರು.

“ನಿಯಮದ ಪ್ರಕಾರ 30 ಕ್ಕಿಂತಲೂ ಹೆಚ್ಚು ಆಸನವಿರುವ ರೆಸ್ಟೋರೆಂಟ್ಗಳು ಸ್ವಯಂಚಾಲಿತ ಬಾಗಿಲು, ಎಕ್ಷಾಸ್ಟ್ಫ್ಯಾನ್ ಇದ್ದು ಹಾಗು ಬಿಬಿಎಂಪಿಯಿಂದ ಆಕ್ಷೇಪಣ ಪ್ರಮಾಣಪತ್ರ ಪಡೆದುಕೊಂಡು ದೂಮಪಾನವಲಯವನ್ನು ಸ್ಥಾಪಿಸಬಹುದಾಗಿದೆ. ಹಾಗೆಯೇ ಈ ಸ್ಥಳಗಳಲ್ಲಿ ಆಹಾರ, ನೀರು, ಮಧ್ಯ, ತಂಬಾಕು ಉತ್ಪನ್ನ  ಹಾಗು ಇತರ ಪಾನೀಯಗಳ ಸೇವೆ ಮಾಡುವಂತಿಲ್ಲ. ಆದರೆ ಈ ನಿಯಮಗಳನ್ನು ರೆಸ್ಟೋರೆಂಟ್ಗಳು ಗಾಳಿಗೆ ತೂರುತ್ತಿದ್ದಾರೆ. ಧೂಮಪಾನವಲಯ ಸ್ಥಾಪಿಸಿಯೋ ಆಥವಾ ಹಾಗೆಯೇ ಧೂಮಪಾನಕ್ಕೆ ಅವಕಾಶ ಮಾಡಿಕೊಡುವ ರೆಸ್ಟೋರೆಂಟ್‌ಗಳು, ಅದನ್ನು ತೆಗೆದು ಹಾಕುವುದರಿಂದ ಹೆಚ್ಚಿನ ಗ್ರಾಹಕರನ್ನು  ಆಕರ್ಷಿಸಬಹುದು ಹಾಗು ವ್ಯಾಪಾರವನ್ನು ವೃದ್ಧಿಸಬಹುದು”, ಎಂದು ಡಾ.ವಿಶಾಲ್ ರಾವ್ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com