ಹಿರಿಯ ಪರ್ತಕರ್ತ ರವಿ ಬೆಳಗೆರೆ ನಿಧನ: ಪ್ರಾರ್ಥನಾ ಶಾಲೆ ಅಂಗಳದಲ್ಲಿ ಮಡುಗಟ್ಟಿದ ದುಃಖ

ಹಿರಿಯ ಪತ್ರಕರ್ತ ಹಾಗೂ 'ಹಾಯ್ ಬೆಂಗಳೂರು' ಪತ್ರಿಕೆ ಸಂಸ್ಥಾಪಕ ರವಿ ಬೆಳೆಗೆರೆ ನಿಧನದ ವಾರ್ತೆ ತಿಳಿಯುತ್ತಿದ್ದಂತೆಯೇ ಅಂತಿಮ ದರ್ಶನಕ್ಕಾಗಿ ಪ್ರಾರ್ಥನಾ ಶಾಲೆಯತ್ತ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ 'ಹಾಯ್ ಬೆಂಗಳೂರು' ಪತ್ರಿಕೆ ಸಂಸ್ಥಾಪಕ ರವಿ ಬೆಳೆಗೆರೆ ನಿಧನದ ವಾರ್ತೆ ತಿಳಿಯುತ್ತಿದ್ದಂತೆಯೇ ಅಂತಿಮ ದರ್ಶನಕ್ಕಾಗಿ ಪ್ರಾರ್ಥನಾ ಶಾಲೆಯತ್ತ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.

ಸಾವಿರಾರು ಅಭಿಮಾನಿಗಳು ಇಂದು ಬೆಳಿಗ್ಗೆಯಿಂದಲೇ ಪ್ರಾರ್ಥನಾ ಶಾಲೆಯ ಅಂಗಳದಲ್ಲಿ ಜಮಾಯಿಸಿದ್ದಾರೆ. ಅಲ್ಲಿ ದುಃಖ ಮಡುಗಟ್ಟಿದೆ. ಅಭಿಮಾನಿಗಳ ಜೊತೆಗೆ ಮಾಧ್ಯಮ ಪ್ರತಿನಿಧಿಗಳು ಚಿತ್ರರಂಗದ ಅನೇಕ ಕಲಾವಿದರು, ನಿರ್ದೇಶಕರು ಸಹ ಭೇಟಿ ನೀಡಿ ಅಗಲಿದ ಗೆಳೆಯ ರವಿ ಬೆಳಗೆರೆಗೆ ಅಂತಿಮ ಶ್ರದ್ದಾಂಜಲಿ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

1958ರ ಮಾರ್ಚ್ 15 ರಂದು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ರವಿ ಬೆಳಗೆರೆ ಅವರ ಮೇಲೆ ತೆಲುಗು ಸಾಹಿತ್ಯದ ಪ್ರಭಾವ ವಿಪರೀತವಾಗಿತ್ತು ಆದ್ದರಿಂದಲೇ ಅವರು ಹೆಚ್ಚಾಗಿ ಬರವಣಿಗೆಯಲ್ಲಿ ತೆಲುಗಿನ ಶಬ್ದಗಳನ್ನು ಬಳಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com