ಅಕ್ರಮ ಆಸ್ತಿ ಗಳಿಕೆ ಪ್ರಕರಣ: 1 ಗಂಟೆ ಕಾಲ ಸಿಬಿಐನಿಂದ ಡಿಕೆಶಿ ವಿಚಾರಣೆ

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಚಾರಣೆಗಾಗಿ ಬುಧವಾರ ಸಿಬಿಐ ಮುಂದೆ ಹಾಜರಾದರು.
ಸಿಬಿಐ ಕಚೇರಿಗೆ ತೆರಳುತ್ತಿರುವ ಡಿಕೆ ಶಿವಕುಮಾರ್
ಸಿಬಿಐ ಕಚೇರಿಗೆ ತೆರಳುತ್ತಿರುವ ಡಿಕೆ ಶಿವಕುಮಾರ್

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಚಾರಣೆಗಾಗಿ ಬುಧವಾರ ಸಿಬಿಐ ಮುಂದೆ ಹಾಜರಾದರು. ಆದರೆ, ಅಗಲಿದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅನುಮತಿ ಕೋರಿದ ಹಿನ್ನೆಲೆಯಲ್ಲಿ ಕೇವಲ 1 ಗಂಟೆ ಕಾಲ ಮಾತ್ರ ವಿಚಾರಣೆ ನಡೆಸಲಾಯಿತು. 

ಮೊದಲೇ ನೋಟಿಸ್ ನೀಡಿದ್ದರಿಂದ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಸಿಬಿಐ ಕಚೇರಿಗೆ ಡಿಕೆ ಶಿವಕುಮಾರ್ ತೆರಳಿ ವಿಚಾರಣೆಗೆ ಹಾಜರಾದರು. ವಿಚಾರಣೆಗೂ ಮುನ್ನ ಸಿಬಿಐ ಅಧಿಕಾರಿಗಳ ಬಳಿ ಶಿವಕುಮಾರ್ ಅವರು ಕಾಂಗ್ರೆಸ್ ನಾಯಕ ಅಹ್ಮತ್ ಪಟೇಲ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿರುವ ಕಾರಣ ಆದಷ್ಟು ಬೇಗ ವಿಚಾರಣೆ ಮುಗಿಸಬೇಕೆಂದು ಮನವಿ ಮಾಡಿಕೊಂಡರು. ಹೀಗಾಗಿ 1 ಗಂಟೆಯಲ್ಲಿ ಹೇಳಿಕೆ ದಾಖಲಿಸಿಕೊಂಡು ಕಳುಹಿಸಿಕೊಟ್ಟರು. ಅಲ್ಲದೇ, ದಾಖಲೆಗಳನ್ನು ಒದಗಿಸಲು ಸಮಯಾವಕಾಶ ಕೇಳಿದ್ದಾರೆಂದು ತಿಳಿದುಬಂದಿದೆ. 

ಅಕ್ರಮ ಆಸ್ತಿ ಗಳಿಕೆ ಸಂಬಂಧ ಸಿಬಿಐ ಅಧಿಕಾರಿಗಳು ಇಡಿ ಮತ್ತು ಐಟಿ ಸೇರಿದಂತೆ ಇತರೆ ಮೂಲಗಳಿಂದ ದಾಖಲೆ ತರಿಸಿಕೊಂಡು ಮಾಹಿತಿ ಕರೆ ಹಾಕಿದೆ. 

ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದಾಗ ಕೆಲವು ದಾಖಲೆ ಜಪ್ತಿ ಮಾಡಲಾಗಿದೆ. ಎಲ್ಲಾ ದಾಖಲೆಗಳನ್ನು ತಾಳಿ ಹಾಕಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಶಿವಕುಮಾರ್ ಅವರನ್ನು ಪ್ರಶ್ನಿಸಲು ಸಿಬಿಐ ಅಧಿಕಾರಿಗಳು ತಯಾರಿ ನಡೆಸಿದ್ದರು. ಆದರೆ, ವಿಚಾರಣೆ ಸರಿಯಾಗಿ ನಡೆಯದ ಕಾರಣ ಮತ್ತೊಮ್ಮೆ ನೋಟಿಸ್ ಜಾರಿ ಕೂಲಂಕಷ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com