ಕೋವಿಡ್-19: ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಹೇರುವ ಸಾಧ್ಯತೆಗಳಿಲ್ಲ!

ಚಳಿಗಾಲದಲ್ಲಿ ಕೋವಿಡ್‌ 19 ಎರಡನೇ ಅಲೆಯ ಆರಂಭ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನಿಯಮಗಳನ್ನು ಬಿಗಿಗೊಳಿಸಿ ಮಾರ್ಗಸೂಚಿ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಳಿಗಾಲದಲ್ಲಿ ಕೋವಿಡ್‌ 19 ಎರಡನೇ ಅಲೆಯ ಆರಂಭ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನಿಯಮಗಳನ್ನು ಬಿಗಿಗೊಳಿಸಿ ಮಾರ್ಗಸೂಚಿ ಹೊರಡಿಸಿದೆ.

ಹೊಸ ಮಾರ್ಗಸೂಚಿಗಳು ಡಿಸೆಂಬರ್‌ 1 ರಿಂದ ಡಿಸೆಂಬರ್‌ 31ರವರೆಗೆ ಜಾರಿಯಲ್ಲಿರುತ್ತದೆ. ಈ ಮಾರ್ಗಸೂಚಿ ನಿಯಮಗಳನ್ನು ಜಾರಿಗಳಿಸುವ ನಿರ್ಧಾರಗಳನ್ನು ರಾಜ್ಯ  ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ.
 
ಪರೋಕ್ಷವಾಗಿ ನೈಟ್ ಕರ್ಫ್ಯೂ ಹೇರುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಿದೆ. ಅಷ್ಟೇ ಅಲ್ಲದೇ ಸಮಾರಂಭಗಳಿಗೆ ಜನರನ್ನು ನಿಯಂತ್ರಿಸುವ ಬಗ್ಗೆಯೂ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಎಂದು ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಕಂಟೈನ್ಮೆಂಟ್‌ ವಲಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾಡಳಿತ ಕಂಟೈನ್ಮೆಂಟ್‌ ವಲಯಗಳ ಹೆಸರನ್ನು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು.ಕಂಟೈನ್ಮೆಂಟ್‌ ವಲಯದಲ್ಲಿ  ಅಗತ್ಯ ವಸ್ತುಗಳನ್ನು ತರಲು ಮಾತ್ರ ಅನುಮತಿ ನೀಡಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಬೇಕು.ಸಿನಿಮಾ ಮಂದಿರಗಳು ಶೇ.50ರಷ್ಟು ಆಸನಗಳೊಂದಿಗೆ ಮಾತ್ರ ತೆರೆಯಬೇಕು.
 
ರಾಜ್ಯ ಸರ್ಕಾರಕೇಂದ್ರಾಡಳಿತ ಪ್ರದೇಶಗಳು ಕಂಟೈನ್ಮೆಂಟ್‌ ಪ್ರದೇಶ ಹೊರತು ಪಡಿಸಿ ಬೇರೆ ಕಡೆ ಲಾಕ್‌ಡೌನ್‌ ಹೇರುವಂತಿಲ್ಲ. ರಾತ್ರಿ ಕರ್ಫ್ಯೂ ಹೇರಲು ಅನುಮತಿ. ರಾಜ್ಯದ ಒಳಗಡೆ ಮತ್ತು  ರಾಜ್ಯ, ರಾಜ್ಯಗಳ ನಡುವಿನ  ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ.

ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ ಮತ್ತು ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ವಲಯಗಳಲ್ಲಿ ಅಥವಾ ಹೊರಗೆ ಜನರ ಚಲನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಮನೆ ಮನೆ ಮೇಲೆ ಕಣ್ಗಾವಲು ಇರಿಸಬೇಕು.

ಪ್ರೋಟೋಕಾಲ್ ಪ್ರಕಾರ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. 14 ದಿನಗಳವರೆಗೆ ಅವರ ಟ್ರ್ಯಾಕಿಂಗ್, ಗುರುತಿಸುವಿಕೆ, ಸಂಪರ್ಕತಡೆಯನ್ನು ಮತ್ತು ಸಂಪರ್ಕಗಳ ಅನುಸರಣೆಯೊಂದಿಗೆ ಸಕಾರಾತ್ಮಕವಾಗಿರುವ ಎಲ್ಲ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸಂಪರ್ಕಗಳ ಪಟ್ಟಿಯನ್ನು ಕೈಗೊಳ್ಳಲಾಗುವುದು, 72 ಗಂಟೆಗಳಲ್ಲಿ ಶೇ.80 ರಷ್ಟು ಸಂಪರ್ಕಗಳನ್ನು ಕಂಡುಹಿಡಿಯಬಹುದು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವಾರ ಮಂಡ್ಯ, ಗದಗ, ಬೀದರ್, ದಕ್ಷಿಣ ಕನ್ನಡ, ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೋವಿಡ್ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com