ಮಂಗಳೂರು: ಕೋರ್ಟ್ ಆವರಣದಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆಬರಹ ಪತ್ತೆ

ಕರಾವಳಿ ನಗರಿ ಮಂಗಳೂರಿನಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಪ್ರಚೋದನಾಕಾರಿ ಬರಹ ಬರೆದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆ ವರದಿಯಾಗುತ್ತಲಿದೆ. ಇದೇ ಬಗೆಯ ಘಟನೆ ಮತ್ತೆ ಘಟಿಸಿದ್ದು ಈ ಬಾರಿ ನಗರದ ನ್ಯಾಯಾಲಯದ ಆವರಣವೊಂದರ ಮೇಲೆ ಉರ್ದು ಭಾಷೆಯ ಸಾಲುಗಳನ್ನು ಬರೆಯಲಾಗಿದೆ.
ವಿವಾದಕ್ಕೆಡೆಯಾದ ಗೋಡೆಬರಹ
ವಿವಾದಕ್ಕೆಡೆಯಾದ ಗೋಡೆಬರಹ

ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಪ್ರಚೋದನಾಕಾರಿ ಬರಹ ಬರೆದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆ ವರದಿಯಾಗುತ್ತಲಿದೆ. ಇದೇ ಬಗೆಯ ಘಟನೆ ಮತ್ತೆ ಘಟಿಸಿದ್ದು ಈ ಬಾರಿ ನಗರದ ನ್ಯಾಯಾಲಯದ ಆವರಣವೊಂದರ ಮೇಲೆ ಉರ್ದು ಭಾಷೆಯ ಸಾಲುಗಳನ್ನು ಬರೆಯಲಾಗಿದೆ.

ನವೆಂಬರ್ 29 ರ ಭಾನುವಾರ ಬೆಳಿಗ್ಗೆ, ನ್ಯಾಯಾಲಯದ ಆವರಣದಲ್ಲಿರುವ ಹಳೆಯ ಪೊಲೀಸ್ ಔಟ್ ಪೋಸ್ಟ್ ನ ಗೋಡೆಯ ಮೇಲೆ ವಿವಾದಾತ್ಮಕ ಬರಹ ಪತ್ತೆಯಾಗಿದೆ. ನವೆಂಬರ್ 28 ರ ಶನಿವಾರ ಬರೆಯಲಾಗಿದೆ ಎನ್ನಲಾದ ಈ ಬರಹ ಭಾನುವಾರ ಎಲ್ಲರ ಗಮನಕ್ಕೆ ಬಂದಿದೆ. 

ಉರ್ದು ಭಾಷೆಯ ಈ ಸಾಲುಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆದಿದೆ. 'ಗುಸ್ತಾಕ್ ಇ ರಸೂಲ್ ಕಿ ಇಕ್ ಹಿ ಸಾಜಾ, ಸಾರ್ ತನ್ ಸೇ ಜುಡಾ' (ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದೊಂದೇ ಶಿಕ್ಷೆ) ಎಂದು ಕಿಡಿಗೇಡಿಗಳು ಬರೆದಿರುವುದು ಇದೀಗ ಹೊಸ ವಿವಾದಕ್ಕೆ ನಾಂದಿಯಾಗಿದೆ. 

ಈ ಬಗ್ಗೆ ಮಾಹಿತಿ ತಿಳಿದೊಡನೆ ಬಂದರು ಪೋಲೀಸ್ ಠಾಣೆಯ ಪೋಲೀಸರು ಸ್ಥಳಕ್ಕೆ ಆಗಮಿಸಿ ವಿವಾದಾತ್ಮಕ ಬರಹ ಅಳಿಸಿ ಹಾಕಿದ್ದಾರೆ ಮತ್ತು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದಕ್ಕೆ ಹಿಂದೆ ನವೆಂಬರ್ 27 ಶುಕ್ರವಾರ, ಬಿಜೈನ ಅಪಾರ್ಟ್ ಮೆಂಟ್ ನ ಗೋಡೆಯೊಂದರ ಮೇಲೆ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಇಂತಹುದೇ ವಿವಾದಾತ್ಮಕ ಬರಹ ಕಂಡುಬಂದಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com