ಅತ್ತ ಎಲ್ಲರ ಕಣ್ಣು ಕೊರೋನಾ ಮೇಲೆ, ಇತ್ತ ಕ್ಷಯ ರೋಗದ ಪ್ರಕರಣ ಹೆಚ್ಚಳ!

 ಸಾರ್ವಜನಿಕರು, ಸರ್ಕಾರ ಮತ್ತು ಮಾಧ್ಯಮಗಳು ಕೋವಿಡ್-19 ನತ್ತ ಗಮನ ಕೇಂದ್ರಿಕರಿಸಿದ್ದರೆ, ಇತ್ತ ಟ್ಯೂಬರ್ ಕ್ಯೂಲೊಸಿಸ್ -ಕ್ಷಯ ರೋಗ ಕೂಡಾ ಜನತೆಗೆ ಹೊಡೆತ ನೀಡುತ್ತಿದೆ.  ಜನವರಿಯಿಂದ ಸೆಪ್ಟೆಂಬರ್ ವರೆಗೂ ರಾಜ್ಯದಲ್ಲಿ 45,839 ಕ್ಷಯ ಪ್ರಕರಣಗಳು ಕಂಡುಬಂದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕರು, ಸರ್ಕಾರ ಮತ್ತು ಮಾಧ್ಯಮಗಳು ಕೋವಿಡ್-19 ನತ್ತ ಗಮನ ಕೇಂದ್ರಿಕರಿಸಿದ್ದರೆ, ಇತ್ತ ಟ್ಯೂಬರ್ ಕ್ಯೂಲೊಸಿಸ್ -ಕ್ಷಯ ರೋಗ ಕೂಡಾ ಜನತೆಗೆ ಹೊಡೆತ ನೀಡುತ್ತಿದೆ.  ಜನವರಿಯಿಂದ ಸೆಪ್ಟೆಂಬರ್ ವರೆಗೂ ರಾಜ್ಯದಲ್ಲಿ 45,839 ಕ್ಷಯ ಪ್ರಕರಣಗಳು ಕಂಡುಬಂದಿವೆ.

 ಮನೆ ಮನೆ ಬಾಗಿಲು ತಪಾಸಣೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವರದಿಯಾಗಿರುವ ಕೋವಿಡ್-19 ಸೋಂಕಿನ ವಾಸ್ತವ ಪ್ರಕರಣಗಳು ಹೆಚ್ಚಾಗಿದ್ದು, ಕ್ಷಯ ಪ್ರಕರಣಗಳು ಕಂಡುಬಂದಿವೆ.

45 ಸಾವಿರದ 839 ಟಿಬಿ ಪ್ರಕರಣಗಳ ಪೈಕಿಯಲ್ಲಿ 9, 212 ಸರ್ಕಾರಿ ಆಸ್ಪತ್ರೆಗಳು ಮತ್ತು 36, 628 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಂದ ವರದಿಯಾಗಿವೆ. ಕಳೆದ ವರ್ಷ ರಾಜ್ಯದಲ್ಲಿ 90, 176 ಪ್ರಕರಣಗಳು ಕಂಡುಬಂದಿದ್ದವು.

ಕ್ಷಯ ರೋಗ ಗುಣಪಡಿಸಬಹುದಾದ ಗಾಳಿಯಿಂದ ಹರಡುವ ಕಾಯಿಲೆಯಾಗಿದ್ದು, ಇದರಿಂದ ಶ್ವಾಸಕೋಸಕ್ಕೆ ಸಮಸ್ಯೆಯಾಗಲಿದೆ. ಎರಡು ವಾರಗಳಿಗಿಂತ ಹೆಚ್ಚಿನ ಕೆಮ್ಮು, ರಾತ್ರಿ ಬೆವರುವುದು, ಜ್ವರ, ಮತ್ತು ತೂಕ ಕಡಿಮೆಯಾಗುವುದು ಈ ಕಾಯಿಲೆಯ ಲಕ್ಷಣಗಳಾಗಿವೆ.

ಹೆಚ್ಚುವರಿ ಶ್ವಾಸಕೋಶದ ಕ್ಷಯವು  ಹೊಟ್ಟೆ, ಮೂತ್ರಪಿಂಡ ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಇದುವರೆಗೂ 2, 634 ಕ್ಷಯ ರೋಗ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿವೆ.  ಕ್ಯಾನ್ಸರ್, ಹೆಚ್ ಐವಿ, ಡಯಾಬಿಟಿಸ್ ಮತ್ತಿತರ ಕಾಯಿಲೆಗಳಿಂದಲೂ ಸಾವನ್ನಪ್ಪಿರಬಹುದು.

ಕೆಮ್ಮು ಮತ್ತು ಜ್ವರ ಟಿಬಿ ಮತ್ತು ಕೋವಿಡ್-19 ರೋಗಿಗಳಲ್ಲಿ ಸಾಮಾನ್ಯ.ಆರೋಗ್ಯ ಸಿಬ್ಬಂದಿ ಮನೆ ಮನೆ ಬಾಗಿಲು ತಪಾಸಣೆಗೆ ತೆರಳಿದಾಗ ಜನರು ರೋಗ ಲಕ್ಷಣ ತಿಳಿಸಲು ಭಯ ಪಡುತ್ತಿದ್ದಾರೆ. ಇದೀಗ  ಕೋವಿಡ್-19 ರೋಗಿಗಳಿಗೆ ತಪಾಸಣೆ, ಟಿಬಿ ಕಾಯಿಲೆಗಾಗಿ ಐಎಲ್ ಐ ಮತ್ತು ಸಾರಿ ಪ್ರಕರಣಗಳನ್ನು ತಪಾಸಣೆ ಮಾಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟ್ಯೂಬರ್ ಕ್ಯೂಲೊಸಿಸ್ ವಿಭಾಗದ ಜಂಟಿ ನಿರ್ದೇಶಕ ರಮೇಶ್ ರೆಡ್ಡಿ ತಿಳಿಸಿದ್ದಾರೆ.

ರೋಗಲಕ್ಷಣವಿಲ್ಲದ ಕೋವಿಡ್-19 ರೋಗಿಗಳು ಚೇತರಿಸಿಕೊಳ್ಳಲು 14 ದಿನಗಳವರೆಗೆ ತೆಗೆದುಕೊಳ್ಳಲಿದೆ. ಆದರೆ, ಟಿಬಿ ಕನಿಷ್ಠ ಆರರಿಂದ ಎಂಟು ತಿಂಗಳುಗಳು ಮತ್ತು ಗರಿಷ್ಠ 1.5 ರಿಂದ 2 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com