ಹಬ್ಬಕ್ಕೆ 11 ಜೋಡಿ ವಿಶೇಷ ರೈಲು: ಅಕ್ಟೋಬರ್ 20 ರಿಂದ ಡಿಸೆಂಬರ್ 1ರ ವರೆಗೆ ಸಂಚಾರ

ಮುಂಬರುವ ದುರ್ಗಾ ಪೂಜೆ, ದಸರಾ, ಛತ್ ಹಾಗೂ ದೀವಾಪಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಲಿರುವ ಕಾರಣ, ನೈಋತ್ಯ ರೈಲ್ವೆ ವಲಯ, ಅಕ್ಟೋಬರ್ 20 ರಿಂದ ಡಿಸೆಂಬರ್ 1 ರವರೆಗೆ 11 ಜೋಡಿ ಫೆಸ್ಟಿವಲ್ ವಿಶೇಷ ರೈಲುಗಳನ್ನು ಓಡಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬರುವ ದುರ್ಗಾ ಪೂಜೆ, ದಸರಾ, ಛತ್ ಹಾಗೂ ದೀವಾಪಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಲಿರುವ ಕಾರಣ, ನೈಋತ್ಯ ರೈಲ್ವೆ ವಲಯ, ಅಕ್ಟೋಬರ್ 20 ರಿಂದ ಡಿಸೆಂಬರ್ 1 ರವರೆಗೆ 11 ಜೋಡಿ ಫೆಸ್ಟಿವಲ್ ವಿಶೇಷ ರೈಲುಗಳನ್ನು ಓಡಿಸಲಿದೆ.

ಈ ಎಲ್ಲಾ ಪ್ರಸ್ತಾವಿತ ವಿಶೇಷ ರೈಲುಗಳಲ್ಲಿ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಅನುಮತಿಸಲಾಗುವುದು ಎಂದು ರೈಲ್ವೆ ಅಧಿಕೃತ ಪ್ರಕಟಣೆ ತಿಳಿಸಿದೆ.

ವಿಶೇಷ ರೈಲುಗಳ ಮಾಹಿತಿ
ಯಶವಂತಪುರ - ಕೊರ್ಬಾ - ಯಶವಂತಪುರ ಸೂಪರ್‌ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು(ರೈಲು ಸಂಖ್ಯೆ 02251/02252)
ಮೈಸೂರು - ವಾರಣಾಸಿ - ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು(ರೈಲು ಸಂಖ್ಯೆ 06229/06230)
ಅಹಮದಾಬಾದ್ - ಯಶವಂತಪುರ - ಅಹಮದಾಬಾದ್ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (ರೈಲು ಸಂಖ್ಯೆ 06501/06502)
ಗಾಂಧಿಧಾಮ್ - ಕೆಎಸ್ಆರ್ ಬೆಂಗಳೂರು - ಗಾಂಧಿಧಾಮ್ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06505/06506)
ಹುಬ್ಬಳ್ಳಿ - ಲೋಕಮಾನ್ಯ ತಿಲಕ್ ಟರ್ಮಿನಸ್ - ಹುಬ್ಬಳ್ಳಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07317/07318)
ಮೈಸೂರು - ಧಾರವಾಡ - ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07301/07302)
ವಾಸ್ಕೋ-ಡಾ-ಗಾಮಾ-ಪಾಟ್ನಾ-ವಾಸ್ಕೊ-ಡಾ-ಗಾಮಾ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 02741/02742)
ಕೆಎಸ್ಆರ್ ಬೆಂಗಳೂರು - ಜೋಧ್ಪುರ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06507/06508)
ಹುಬ್ಬಳ್ಳಿ - ಸಿಕಂದರಾಬಾದ್ - ಹುಬ್ಬಳ್ಳಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07319/07320)
ಅಜ್ಮೀರ್ - ಮೈಸೂರು - ಅಜ್ಮೀರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06209/06210)
ಹುಬ್ಬಳ್ಳಿ - ವಾರಣಾಸಿ - ಹುಬ್ಬಳ್ಳಿ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07323/07324)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com