ಬೆಂಗಳೂರು: ಸರಳ ಸಮಾರಂಭದಲ್ಲಿ ಲಲಿತಾ ಅಕಾಡೆಮಿ ಪ್ರಶಸ್ತಿ ಪ್ರದಾನ

ಕರ್ನಾಟಕ ಲಲಿತಕಲಾ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಕಲಾ ಪುರಸ್ಕಾರವನ್ನು ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕನ್ನಡ ಭವನದ ವರ್ಣಾ ಆರ್ಟ್ ಗ್ಯಾಲರಿಯಲ್ಲಿ ಸರಳವಾಗಿ ವಿತರಿಸಲಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಕಲಾ ಪುರಸ್ಕಾರವನ್ನು ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕನ್ನಡ ಭವನದ ವರ್ಣಾ ಆರ್ಟ್ ಗ್ಯಾಲರಿಯಲ್ಲಿ ಸರಳವಾಗಿ ವಿತರಿಸಲಾಯಿತು.

10 ಜನ ಕಲಾವಿದರಿಗೆ 25,000 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2018ನೇ ಸಾಲಿನಲ್ಲಿ ಪುಸ್ತಕ ಬಹುಮಾನವನ್ನು ನೀಡಲಾಯಿತು.

ಬಹುಮಾನ ವಿತರಿಸಿದ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಮಾತನಾಡಿ, ಕೊರೋನ ಹಿನ್ನೆಲೆಯಲ್ಲಿ ಅಕಾಡೆಮಿಯು ಸರಳವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು 365 ಕಲಾಕೃತಿಗಳು ಸ್ಪರ್ದೆಗೆ ಬಂದಿದ್ದು ಅದರಲ್ಲಿ  10 ಕಲಾಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಲಾಗ್ರಾಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹೊಸ ಕಲಾ ಗ್ಯಾಲರಿ ಹಾಗೂ ಸ್ಟುಡಿಯೋ ನಿರ್ಮಾಣವಾಗುತ್ತಿದ್ದು ಇನ್ನೆರಡು ತಿಂಗಳಲ್ಲಿ ಪೂರ್ಣವಾಗಲಿದೆ. ಗ್ಯಾಲರಿಯು ದಕ್ಷಿಣ ಭಾರತದಲ್ಲಿಯೇ ಅಪರೂಪವಾಗಲಿದೆ. ಕಲಾವಿದರಿಗೆ ತುಂಬಾ ಉಪುಯೋಗವಾಗಲಿದೆ ಎಂದರು. 

ಪ್ರಶಸ್ತಿ ಪುರಷ್ಕೃತ ಕಲಾವಿದರು
ಗಣೇಶ್ಪಿ ದೊಡ್ಡಮನಿ,  ಬೆಂಗಳೂರು
ವಿನಾಯಕ ರಾಚಿಕ್ಕೊಡಿ, ಬಾಗಲಕೋಟ
ಓಂಕಾರಕಲ್ಲಪಮೇತ್ರೆ, ಬೀದರ
ವಿನಾಯಕ ಎನ್. ಹೊಸೂರ, ಬಾಗಲಕೋಟ
ವಿನಯ್ಎಸ್ನಾಗವೇಕರ್, ಬೆಂಗಳೂರು
ಬಸವರಾಜು   ಕೆ.ಎಸ್, ತುಮಕೂರು
ಭರತ್ಎಂ. ಲದ್ದಿಯವರ
ಲಿಂಗರಾಜುಎಂ.ಎಸ್, ಚಿಕ್ಕಮಗಳೂರು
ಶಿವಕಾಂತಶೇಖರ್, ಬೆಂಗಳೂರು
ತಿಪ್ಪಣ್ಣಎಸ್. ಪೂಜಾರಿ, ಕಲಬುರಗಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com