ಶಿಷ್ಟಾಚಾರ ನಿಯಮಗಳ ಪರಿಷ್ಕರಿಸಿದ ಸರ್ಕಾರ: ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾಗಳಲ್ಲಿ ನಟಿಸಲು ನಿಷೇಧಕ್ಕೆ ಚಿಂತನೆ

ಕರ್ನಾಟಕ ರಾಜ್ಯ ನಾಗರೀಕ ಸೇವೆ (ನಡವಳಿಕೆ) ನಿಯಮ 2020 ಕರಡನ್ನು ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದು, ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ, ಸಾಂಸ್ಕೃತಿ ಹಾಗೂ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನಿಷೇಧ ಹೇರುವ ಪ್ರಸ್ತಾಪವನ್ನು ಕರಡುವಿನಲ್ಲಿ ಮಾಡಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ನಾಗರೀಕ ಸೇವೆ (ನಡವಳಿಕೆ) ನಿಯಮ 2020 ಕರಡನ್ನು ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದು, ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ, ಸಾಂಸ್ಕೃತಿ ಹಾಗೂ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನಿಷೇಧ ಹೇರುವ ಪ್ರಸ್ತಾಪವನ್ನು ಕರಡುವಿನಲ್ಲಿ ಮಾಡಿದೆ ಎಂದು ತಿಳಿದುಬಂದಿದೆ. 

ಕರಡುವಿನಲ್ಲಿ ಸರ್ಕಾರಿ ಸೇವೆಯಲ್ಲಿರುವವರು ಏನನ್ನು ಮಾಡಲು ಮುಕ್ತರು, ಏನನ್ನು ಮಾಡಬಾರದು ಎಂಬುದರ ವಿವರಣೆಯನ್ನು ನೀಡಲಾಗಿದೆ. 

ರಾಜ್ಯಪತ್ರ(ಗೆಜೆಟ್)ದಲ್ಲಿ ಕರಡನ್ನು ಪ್ರಕಟಿಸಿದ್ದು, ಹದಿನೈದು ದಿನಗಳಲ್ಲಿ ಕರಡು ನಿಯಮಗಳಿಗೆ ಆಕ್ಷೇಪಣೆ ಆಹ್ವಾನಿಸಲಾಗಿದೆ. 

ರಾಜ್ಯ ಸರಕಾರಿ ನೌಕರರು ಯಾವುದೇ ರೀತಿಯ ಸಾಹಿತ್ಯಿಕ/ಕಲಾತ್ಮಕ/ ವೈಜ್ಞಾನಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ನೌಕರರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು ನಿಷೇಧ ಹೇರಲಾಗಿದೆ,

ಆದರೆ, ಸಾಂದರ್ಭಿಕವಾಗಿ ಸಾಹಿತ್ಯ, ನಾಟಕ, ಪ್ರಬಂಧಗಳು, ಕವನ, ಸಣ್ಣ ಕಥೆಗಳು, ಕಾದಂಬರಿಗಳನ್ನು ಪೂರ್ವಾನುಮತಿ ಪಡೆಯದೆಯೇ ಬರೆಯಲು ಅವಕಾಶವಿರಲಿದೆ. ಅನುಮತಿ ಪಡೆಯದ ಹೊರತು ಸರಕಾರಿ ಸೇವೆಯಲ್ಲಿರುವ ಯಾವುದೇ ನೌಕರರು ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ. ಅಲ್ಲದೆ, ಅದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಬಂಧಿಸಲಾಗಿದೆ.

ಸರಕಾರಿ ನೌಕರರು ಅನುಮತಿ ಇಲ್ಲದೆ ಪತ್ರಿಕೆ/ ನಿಯತಕಾಲಿಕಗಳ ಪ್ರಕಟಣೆ, ಸಂಪಾದನೆ, ನಿರ್ವಹಣೆಯಲ್ಲಿ ತೊಡಗುವಂತಿಲ್ಲ. ಅಲ್ಲದೆ, ರೇಡಿಯೋ, ಟೆಲಿವಿಷನ್ ಸೇರಿದಂತೆ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ, ನೌಕರರ ಕುಟುಂಬದ ಸದಸ್ಯರು ಸಾಮಾಜಿಕ ಚಟುವಟಿಕೆಗಳನ್ನು ಪಾಲ್ಗೊಳ್ಳುವುದಕ್ಕೂ ನಿಷೇಧ ಹೇರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com